• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಟರ್ನೆಟ್ಟಿಗೆ ಸೆನ್ಸಾರ್, ಇದು ಸರಿಯಾದ ಕ್ರಮವೇ?

By ವಿಕಾಸ್ ನಂಜಪ್ಪ
|

ಉಗ್ರಗಾಮಿ ಚಟುವಟಿಕೆಗಳನ್ನ ನಿಯಂತ್ರಿಸುವ ಉದ್ದೇಶದಿಂದ ಸುಮಾರು 32ಕ್ಕೂ ಹೆಚ್ಚು ವೆಬ್ ತಾಣಗಳನ್ನು ಸರ್ಕಾರ ನಿಷೇಧಿಸಿರುವ ಸುದ್ದಿ ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೊಳಲ್ಪಟ್ಟಿದೆ.

ವೆಬ್ ತಾಣಗಳು,ಪುಟಗಳ ಮೇಲೆ ನಿರ್ಬಂಧ, ನಿಷೇಧ ಹೇರುವುದು ಎಷ್ಟು ಸರಿ? ಇಂಟರ್ನೆಟ್ಟಿಗೆ ಸೆನ್ಸಾರ್ ಶಿಪ್ ಹಾಕಲು ಸರ್ಕಾರಗಳಿಗೆ ಹೇಗೆ ಅಧಿಕಾರವಿದೆ? ಚೀನಾ ಮಾದರಿಯನ್ನು ಭಾರತ ಅನುಸರಿಸುತ್ತಿದೆಯೆ? ಎಂಬೆಲ್ಲ ಪ್ರಶ್ನೆಗಳಿಗೆ ಸೈಬರ್ ಕಾನೂನು ತಜ್ಞ ಪವನ್ ದುಗ್ಗಾಲ್ ಅವರು ಒನ್ ಇಂಡಿಯಾ ಜೊತೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಶನದ ಸಾರಾಂಶ ಇಲ್ಲಿದೆ...

ಚೀನಾ ಮಾದರಿಯನ್ನು ಭಾರತ ಒಪ್ಪಿಕೊಳ್ಳಬಾರದು:

ಚೀನಾದಲ್ಲಿ ಇಂಟರ್ನೆಟ್ ಸೆನ್ಸಾರ್ ಶಿಪ್ ಅತ್ಯಂತ ಕಠಿಣವಾಗಿದ್ದು, ಗ್ರೇಟ್ ಫೈರ್ ವಾಲ್ ಆಫ್ ಚೀನಾ ಎಂದು ನೆಟಿಜನ್ಸ್ ಗೇಲಿ ಮಾಡುತ್ತಾರೆ. ಭಾರತ ಈ ರೀತಿ ಮಾದರಿ ಅಳವಡಿಸಿಕೊಳ್ಳಬಾರದು ಹಾಗೂ ಅಳವಡಿಸಿಕೊಳ್ಳುವುದು ಸಾಧ್ಯವಿಲ್ಲ. ನಮ್ಮ ಸಂವಿಧಾನದಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ದೇಶದ ಸುರಕ್ಷತೆ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ.

ಸೆನ್ಸಾರ್ ಶಿಪ್ ಅಧಿಕವಾಗಿ ನಿರ್ಬಂಧ ನಿಷೇಧ ಹೆಚ್ಚಳವಾದರೆ, ನಾಗರಿಕರ ಮೂಲಭೂತ ಹಕ್ಕುಗಳಿಗೆ ಚ್ಯುತಿ ತಂದಂತೆ ಆಗುತ್ತದೆ. ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲದ್ದಂತಾಗುತ್ತದೆ. ಸಂವಿಧಾನದ ಪರಿಚ್ಛೇದ 19(1)ವನ್ನು ಒಮ್ಮೆ ಪರಿಶೀಲಿಸಬಹುದು.

ನಿರ್ಬಂಧ ಹೇರಲು ಅವಕಾಶವಿದೆ:

ನಾಗರೀಕರ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಾರದಂತೆ ಇಂಟರ್ನೆಟ್ ನ ದುರ್ಬಳಕೆ ಮೇಲೆ ನಿರ್ಬಂಧ ಹೇರುವ ಅಧಿಕಾರ ಸರ್ಕಾರಕ್ಕಿದೆ. ಇದಕ್ಕಾಗಿ ಮಾಹಿತಿ ತಂತ್ರಜ್ಞಾನ್ ಕಾಯ್ದೆಯನ್ನು 2000ರಲ್ಲೇ ರೂಪಿಸಲಾಗಿದೆ. ಐಟಿ ಕಾಯ್ದೆ ಸೆಕ್ಷನ್ 69(ಎ) ಪ್ರಕಾರ ದೇಶದ ಐಕ್ಯತೆ, ಸಮಗ್ರತೆ, ಸೌಹಾರ್ದತೆಗೆ ಧಕ್ಕೆ ತರುವ ಲೇಖನ, ಕಾಮೆಂಟ್, ಚಿತ್ರ, ಸಂದೇಶಗಳು ಇಂಟರ್ನೆಟ್ ನಲ್ಲಿ ಹರಿದಾಡುವಂತೆ ಮಾಡುವ ವೆಬ್ ತಾಣಗಳನ್ನು ನಿಷೇಧಿಸಬಹುದಾಗಿದೆ.

32 ವೆಬ್ URL ಏಕೆ ಬ್ಲಾಕ್ ಮಾಡಲಾಯಿತು?

ನಿಜಕ್ಕೂ 32 URL ಗಳನ್ನು ಬ್ಲಾಕ್ ಮಾಡಿದ್ದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಉಗ್ರಗಾಮಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ವೆಬ್ ತಾಣಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ಇಲಾಖೆ ಹೇಳಿದೆ. archive.org ಹಾಗೂ Vimeo ನಂಥ ವೆಬ್ ತಾಣಗಳ ವಿರುದ್ಧ ಕ್ರಮ ಜರುಗಿಸಿರುವುದು ಹುಬ್ಬೇರಿಸಿದೆ.

ನಿಷೇಧಕ್ಕೆ ಒಳಪಟ್ಟಿರುವ ತಾಣಗಳಲ್ಲಿರುವ ಲೇಖನಗಳು, ಚಿತ್ರಗಳು, ವಿಡಿಯೋಗಳ ವಿರುದ್ಧ ಯಾರಾದರು ದೂರು ನೀಡಿರಬಹುದು. ಅದರೆ, ಕೋರ್ಟ್ ಈ ನಡುವೆ ತಂತ್ರಜ್ಞಾನದ ಬಗ್ಗೆ ಅರಿವು ಪಡೆದುಕೊಂಡಿದ್ದು, ವೆಬ್ ತಾಣ ಬ್ಲಾಕ್ ಮಾಡುವುದಕ್ಕಿಂತ ಆಕ್ಷೇಪಾರ್ಹ ವೆಬ್ ಪುಟವನ್ನು ಮಾತ್ರ ಬ್ಲಾಕ್ ಮಾಡಲು ಹೇಳುವಷ್ಟರ ಮಟ್ಟಿಗೆ ಸುಧಾರಣೆಗೊಂಡಿದೆ.

ಬ್ಲಾಕ್ ಮಾಡುವುದು ಹಳೆ ವಿಧಾನ:

ಇಂಟರ್ನೆಟ್ ನಲ್ಲಿ ಬ್ಲಾಕ್ ಮಾಡಿದ ಬಳಿಕವೂ ವೆಬ್ ಪುಟಗಳು ಚಾಲನೆಗೊಳಿಸುವ ಸರಳ ತಂತ್ರ ಅನೇಕರಿಗೆ ತಿಳಿದಿದೆ. ನಿರ್ಬಂಧ ಹೇರಿಕೆ, ನಿಷೇಧ ಎಲ್ಲವೂ ಕಳೆದ ಶತಮಾನದ ಪದಗಳಾಗಿವೆ. ವೆಬ್ ಮಾಲೀಕರಿಗೆ ನೋಟಿಸ್ ನೀಡದೆ ಬ್ಲಾಕ್ ಮಾಡುವುದು ದೊಡ್ಡ ದುರಂತಕ್ಕೆ ಕಾರಣವಾಗಬಹುದು. ಬ್ಲಾಕ್ ಮಾಡುವುದರಿಂದ ಇಂಟರ್ನೆಟ್ ಟ್ರಾಫಿಕ್ ಹೆಚ್ಚಾಗುವುದೇ ವಿನಹ ಕಡಿಮೆಯಾಗುವುದಿಲ್ಲ.

ಪರಿಣಾಮಕಾರಿ ಕ್ರಮ ಅಗತ್ಯ

ಪರಿಣಾಮಕಾರಿ ಕ್ರಮ ಅಗತ್ಯವಾಗಿದ್ದು, ಸೈಬರ್ ಕ್ರೈಂ ನಿಯಂತ್ರಣಕ್ಕಾಗಿ ತಜ್ಞರ ಬಳಕೆ ಮಾಡಿಕೊಳ್ಳಬೇಕು. ಪೋರ್ನೋಗ್ರಾಫಿ ವಿರುದ್ಧ ಹೋರಾಟದಂತೆ ಉಗ್ರರ ಚಟುವಟಿಕೆ ಹತ್ತಿಕ್ಕಲು ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ಐಎಸ್ ಪಿಗಳಿಗೆ ಮಾರ್ಗಸೂಚಿ ನೀಡಬೇಕು. ಆಕ್ಷೇಪಾರ್ಹ ಪುಟಗಳನ್ನು ಮಾತ್ರ ಬ್ಲಾಕ್ ಮಾಡುವ ಸಾಧಕಗಳನ್ನು ನೀಡಬೇಕು. ಇಂಟರ್ನೆಟ್ ಸೆನ್ಸಾರ್ ಶಿಪ್ ಹಾಗೂ ನಿಷೇಧ ಹೇರಿಕೆ ಎಲ್ಲವೂ ಅನರ್ಥಕ್ಕೆ ದಾರಿ ಮಾಡುತ್ತದೆಯೇ ಹೊರತೂ ನಿಯಂತ್ರಣಕ್ಕೆ ದಾರಿ ತೋರಿಸುವುದಿಲ್ಲ.

ಮಧ್ಯವರ್ತಿ ತಜ್ಞರ ನೆರವು ಪಡೆಯಬಹುದು

ಐಟಿ ಕಾಯ್ದೆ 2000ರ ಸೆಕ್ಷನ್ 79ರ ಅನ್ವಯ ಸುಮಾರು 2000 ಖಾಸಗಿ ಐಟಿ ತಜ್ಞರನ್ನು ಮಧ್ಯವರ್ತಿಯಾಗಿ ಬಳಸಲು ಆಸ್ಪದ ನೀಡಲಾಗಿದೆ. ಹೀಗಾಗಿ ಐಎಸ್ ಪಿಗಳು ಹಾಗೂ ವೆಬ್ ತಾಣದ ಮಾಲೀಕರ ನಡುವೆ ಈ ತಜ್ಞರು ಸೂಕ್ತವಾಗಿ ವ್ಯವಹರಿಸಿ ಸಮಸ್ಯೆ ಬಗೆಹರಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The decision of the government to block 32 URLs has become a subject matter of debate and the question being asked is blocking the right way to go.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more