ಸಾಂಸ್ಕೃತಿಕ ನಗರಿ ಮೈಸೂರಿಗೆ ಈ ಬಾರಿಯೂ 'ಯೋಗ' ಇಲ್ಲ!
ನವದೆಹಲಿ, ಜೂನ್ 3: ಅಂತರಾಷ್ಟ್ರೀಯ ಯೋಗ ದಿನವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸುವ ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿಗೆ, ಈ ಬಾರಿಯೂ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮ ಆತಿಥ್ಯ ವಹಿಸುವ ಯೋಗ ಇಲ್ಲ.
ಮೈಸೂರು ಸೇರಿದಂತೆ ಐದು ನಗರಗಳನ್ನು ಪ್ರಧಾನಮಂತ್ರಿ ಕಾರ್ಯಾಲಯ ಅಂತಿಮಗೊಳಿಸಿತ್ತು ಅದರಲ್ಲಿ ಮೈಸೂರು ಕೂಡಾ ಒಂದಾಗಿತ್ತು. ಆದರೆ, ಪಿಎಂ ಕಾರ್ಯಾಲಯ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ 2019ರ ಪ್ರಧಾನ ಯೊಗ ಕಾರ್ಯಕ್ರಮ ನಡೆಸಲು ಆಯ್ಕೆ ಮಾಡಿದೆ.
ನರೇಂದ್ರ ಮೋದಿ ಸರಕಾರದ ಮೊದಲ ಅವಧಿಯಲ್ಲಿ ಜೂನ್ 21ರಂದು ಆರಂಭವಾದ 'ಅಂತರಾಷ್ಟ್ರೀಯ ಯೋಗ ದಿನ'ದ ಪ್ರಧಾನ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳುವುದು ವಾಡಿಕೆ.

ಕಳೆದ ವರ್ಷವೂ ಮೈಸೂರು ಹೆಸರು ಪಟ್ಟಿಯಲ್ಲಿತ್ತು, ಆದರೆ ಡೆಹ್ರಾಡೂನ್ ನಲ್ಲಿ ಯೋಗ ಕಾರ್ಯಕ್ರಮ ನಡೆದಿತ್ತು. 2015ರಲ್ಲಿ ನವದೆಹಲಿಯ ರಾಜಪಥ್ ನಲ್ಲಿ ನಡೆದ ಮೊದಲ ಯೋಗದಿನದಂದು 84 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
2015ರಲ್ಲಿ ನವದೆಹಲಿ, 2016ರಲ್ಲಿ ಚಂಡೀಗಢ, 2017ರಲ್ಲಿ ಲಕ್ನೋ ಮತ್ತು 2018ರಲ್ಲಿ ಡೆಹ್ರಾಡೂನ್ ನಲ್ಲಿ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮ ನಡೆದಿತ್ತು.
ರಾಜಧಾನಿ ನವದೆಹಲಿ, ಮೈಸೂರು, ಶಿಮ್ಲಾ, ಅಹಮದಾಬಾದ್ ಮತ್ತು ರಾಂಚಿ, ಈ ಐದು ನಗರಗಳಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳುವುದಾಗಿ ಪಿಎಂ ಕಾರ್ಯಾಲಯ ತಿಳಿಸಿತ್ತು.












Click it and Unblock the Notifications