ಭಾರತದಲ್ಲಿ ಮಹಿಳೆಯರ ಸ್ಥಿತಿಗತಿ: ಸಮಗ್ರ ನೋಟ

Subscribe to Oneindia Kannada

ವಿಶ್ವಕ್ಕೆ ಅಮ್ಮ ಅಂದರೆ ಮಹಿಳೆ, ಅವಳ ಸಂತೋಷ ಸಂತಸ ಎಲ್ಲವನ್ನು ತನ್ನ ಮಗ, ಗಂಡ, ಸಹೋದರ, ಪ್ರಿಯತಮ, ಅಪ್ಪನಲ್ಲಿ ಕಾಣುತ್ತಾಳೆ. ಜನ್ಮದಾತೆಯಾಗಿ ಬಾಲ್ಯದಲ್ಲಿ ಸಲಹಿದರೆ, ಪ್ರಾಣ ಕಾಂತೆಯಾಗಿ ಯೌವನದಲ್ಲಿ ಜತೆಯಾಗುತ್ತಾಳೆ. ಮುಪ್ಪಿನಲ್ಲಿ ಮನಮೆಚ್ಚುವ ಮಗಳಾಗುತ್ತಾಳೆ.

ಮಹಿಳಾ ದಿನಾಚರಣೆ ಹೊತ್ತಲ್ಲಿ ಭಾರತದಲ್ಲಿ ನಿಜಕ್ಕೂ ಮಹಿಳೆಯರ ಸ್ಥಿತಿ ಗತಿ ಏನು? ಅವರು ಎದುರಿಸುತ್ತಿರುವ ನೈಜ ಸಮಸ್ಯೆಗಳು ಯಾವವು? ಹುಟ್ಟು ಸಾವಿನ ಪ್ರಮಾಣ, ಅತ್ಯಾಚಾರಕ್ಕೆ ಒಳಗಾಗುತ್ತಿರುವವರ ಆತಂಕ ಎಲ್ಲವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಮಹಿಳಾ ದಿನದ ಸಂದರ್ಭ ಭಾರತೀಯರ ಮಹಿಳೆಯರ ಜೀವನದ ಮೇಲಿನ ವಾಸ್ತವದ ಅಂಕಿ ಅಂಶ ಕಲೆ ಹಾಕುವ ಯತ್ನ ಇಲ್ಲಿ ಮಾಡಿದ್ದೇವೆ.[ಆಸಿಡ್ ದಾಳಿಗೆ ಸಿಕ್ಕವರ ಯಶೋಗಾಥೆ "ಶೀರೋಸ್"]

2011ರ ಜನಗಣತಿ, ವಿಶ್ವ ಆರೋಗ್ಯ ಸಂಸ್ಥೆ, ಎಮ್ ಒ ಎಸ್ ಪಿ ಐ ವರದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗೃಹ ಇಲಾಖೆ, ಲೋಕಸಭೆ ಮತ್ತು ಸುದ್ದಿ ಮಾಧ್ಯಮದ ವರದಿಗಳನ್ನು ಇಟ್ಟುಕೊಂಡು ಅಂಕಿ ಅಂಶಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

637 ಮಿಲಿಯನ್

637 ಮಿಲಿಯನ್

2016 ರ ಮಾರ್ಚ್ ಆರಂಭದ ಲೆಕ್ಕದಲ್ಲಿ ಹೇಳುವುದಾದರೆ ಭಾರತದಲ್ಲಿರುವ ಮಹಿಳೆಯರ ಸಂಖ್ಯೆ637 ಮಿಲಿಯನ್.

ಮೊದಲೆ ಮದುವೆ

ಮೊದಲೆ ಮದುವೆ

ಭಾರತದ 102.61 ಮಿಲಿಯನ್ ಮಹಿಳೆಯರು 18 ವರ್ಷ ತುಂಬುವುದರೊಳಗೆ ಮದುವೆಯಾಗುತ್ತಿದ್ದಾರೆ ಎಂದು 2011 ರ ಜನಗಣತಿ ದಾಖಲೆ ನೀಡುತ್ತಿದೆ.

69.6 ವರ್ಷ

69.6 ವರ್ಷ

ಭಾರತದ ಮಹಿಳೆಯರ ಸರಾಸರಿ ವಯಸ್ಸು 69.6 ವರ್ಷ.

ತಾಯಿಯಾಗುವ ವೇಳೆ ಸಾವು

ತಾಯಿಯಾಗುವ ವೇಳೆ ಸಾವು

50 ಸಾವಿರ ಮಹಿಳೆಯರು ತಾಯಿಯಾಗುವ ವೇಳೆ ಪ್ರತಿ ವರ್ಷ ಸಾವಿಗೆ ತುತ್ತಾಗುತ್ತಿದ್ದಾರೆ.

36 ಸಾವಿರ ಅತ್ಯಾಚಾರ

36 ಸಾವಿರ ಅತ್ಯಾಚಾರ

2014 ರಲ್ಲಿ 36, 735 ಅತ್ಯಾಚಾರಗಳು ದೇಶದದಲ್ಲಿ ಆಗಿದೆ ಎಂಬುದು ಆತಂಕದ ಅಂಶ. ಇದು ಕೇವಲ ದಾಖಲಾದ ಪ್ರಕರಣಗಳ ಲೆಕ್ಕ ಮಾತ್ರ.

1.70 ಲಕ್ಷ

1.70 ಲಕ್ಷ

1.70 ಲಕ್ಷ ಮಹಿಳೆಯರು ಏಡ್ಸ್ ಮಹಾಮಾರಿಗೆ ಬಲಿಯಾಗುತ್ತಿರುವುದು ದೇಶದ ದುರ್ದೈವ.

3.26 ಲಕ್ಷ ಕ್ಯಾನ್ಸರ್

3.26 ಲಕ್ಷ ಕ್ಯಾನ್ಸರ್

ಕ್ಯಾನ್ಸರ್ 3.26 ಲಕ್ಷ ಮಹಿಳೆಯರ ಜೀವವನ್ನು ಪ್ರತಿ ವರ್ಷ ಹೊತ್ತೊಯ್ಯುತ್ತಿದೆ.

ಶೇ. 65.46 ಶಿಕ್ಷಣ ಸಿಕ್ಕಿದೆ

ಶೇ. 65.46 ಶಿಕ್ಷಣ ಸಿಕ್ಕಿದೆ

2011-12 ರ ಜನಗಣತಿ ತಿಳಿಸುವಂತೆ ಶೇ. 65.46 ಮಹಿಳೆಯರಿಗೆ ಶಿಕ್ಷಣ ಸಿಕ್ಕಿದೆ.

ಶೇ.31 ಮಹಿಳೆಯರಿಗೆ ಉದ್ಯೋಗವಿದೆ

ಶೇ.31 ಮಹಿಳೆಯರಿಗೆ ಉದ್ಯೋಗವಿದೆ

ದೇಶದ ಶೇ.31 ಮಹಿಳೆಯರು ಉದ್ಯೋಗ ಕಂಡುಕೊಂಡಿದ್ದಾರೆ. 375.9 ಮಿಲಿಯನ್ ಮಹಿಳೆಯರು ವಿವಿಧ ಕೆಲಸ ಕಾರ್ಯಗಳಲಲ್ಲಿ ನಿರತರಾಗಿದ್ದಾರೆ.

ಮಹಿಳೆಯರ ಆದಾಯ

ಮಹಿಳೆಯರ ಆದಾಯ

ಗ್ರಾಮೀಣ ಪ್ರದೇಶದ ಶಿಕ್ಷಣದಿಂದ ವಂಚಿತವಾದ ಮಹಿಳೆ ದಿನವೊಂದಕ್ಕೆ 202 ರು. ಸಂಪಾದನೆ ಮಾಡಿದರೆ, ನಗರ ಪ್ರದೇಶದ ಮಹಿಳೆಯರು 366 ರು. ಗಳಿಸುತ್ತಿದ್ದಾರೆ.

 ಕ್ಷೇತ್ರಗಳು

ಕ್ಷೇತ್ರಗಳು

77 ಮಿಲಿಯನ್ ಮಹಿಳೆಯರು ಕೃಷಿ ಕ್ಷೇತ್ರವನ್ನು ಅವಲಂಬಿಸಿದ್ದಾರೆ. 5.7 ಮಿಲಿಯನ್ ಮಹಿಳೆಯರು ಕಟ್ಟಡ ನಿರ್ಮಾಣ, 2.5 ಮಿಲಿಯನ್ ಮಹಿಳೆಯರು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

ಜಿಡಿಪಿಗೆ ಕೊಡುಗೆ

ಜಿಡಿಪಿಗೆ ಕೊಡುಗೆ

ದೇಶದ ಆರ್ಥಿಕ ಅಭಿವೃದ್ಧಿ ದರರ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಶೇ. 17.

ಭಾರತದಲ್ಲಿ ಮಹಿಳೆಯರ ಸ್ಥಿತಿಗತಿ: ಸಮಗ್ರ ನೋಟ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ ವಿಡಿಯೋ ನೋಡಿ:

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
International Women's Day is celebrated on March 8 every year globally. The event is celebrated to inspire women and celebrate their achievements. It is a day when women are recognized for their achievements without regard to divisions, whether national, ethnic, linguistic, cultural, economic or political. Here are statistics of Indian Women.
Please Wait while comments are loading...