ಲವ್ ಜಿಹಾದ್ ಹಿಂದೆ ಅಂತಾರಾಷ್ಟ್ರೀಯ ಕುತಂತ್ರ

ಮುಂಬಯಿ, ಸೆ. 10 : ದೇಶವನ್ನು ಕಾಡುತ್ತಿರುವವ 'ಲವ್‌ ಜಿಹಾದ್‌' ಹಿಂದೆ ಹಿಂದೂ ಸಮಾಜ ನಾಶಮಾಡುವ ಅಂತಾರಾಷ್ಟ್ರೀಯ ಕುತಂತ್ರ ಅಡಗಿದೆ ಎಂದು ಶಿವಸೇನೆ ಆತಂಕ ವ್ಯಕ್ತಪಡಿಸಿದೆ.

ಅಲ್ಲದೇ ಹಿಂದೂ ಹೆಣ್ಣು ಮಕ್ಕಳು 'ಲವ್‌ ಜಿಹಾದ್‌' ಬಲೆಗೆ ಬೀಳುವುದರಿಂದ ದೂರ ಇರಬೇಕು ಎಂಬ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಮೋಹನ್‌ ಭಾಗ್ವತ್‌ ಹೇಳಿಕೆಯನ್ನು ಶಿವಸೇನೆ ಬೆಂಬಲಿಸಿದೆ.

love jihad

ತನ್ನ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಶಿವಸೇನೆ, ಪ್ರೀತಿಯ ನಾಟಕವಾಡಿ ಹಿಂದೂ ಯುವತಿಯರನ್ನು ಮರಳು ಮಾಡುವ ಯುವಕರು ಆಕೆಯನ್ನು ಮುಸ್ಮಿಂಆಗಿ ಮತಾಂತರ ಮಾಡುತ್ತಾರೆ. ಇದರ ಹಿಂದೆ ಅಂತಾರಾಷ್ಟ್ರೀಯ ಕುತಂತ್ರವಿರುವಂತೆ ಕಂಡುಬರುತ್ತಿದೆ. ಈ ಪಿಡುಗು ಹಿಂದೂ ಸಂಸ್ಕೃತಿಯನ್ನೇ ಬಲಿ ತೆಗೆದುಕೊಳ್ಳುವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಶಿವಸೇನೆ ಆತಂಕ ವ್ಯಕ್ತಪಡಿಸಿದೆ.(ವಿವಾದಾತ್ಮಕ 'ಲವ್‌ ಜಿಹಾದ್‌'? ಎಂದರೇನು)

ಈ ಬಗೆಯ ಲವ್ ಜಿಹಾದ್ ಗೆ ಮರುಳಾದವರು ಖಂಡಿತ ಪಾಠ ಕಲಿಯಲೆಬೇಕು. ಮುಸ್ಲಿಂ ಉಗ್ರಗಾಮಿ ಸಂಘಟನೆಗಳಾದ ಲಷ್ಕರ್‌-ಇ-ತೊಯ್ಬಾ, ಸಿಮಿ, ಆಲ್‌ ಖಯಿದಾ ಪ್ರಪಂಚವನ್ನು ಇಸ್ಲಾಮೀಕರಣ ಮಾಡ ಹೊರಟಿವೆ. ಹಿಂದೂಗಳೇ ಅವರ ಪ್ರಮುಖ ಗುರಿಯಾಗಿದ್ದಾರೆ ಎಂದು ಶಿವಸೇನೆ ಹೇಳಿದೆ.

ಬಿಜೆಪಿ ನಾಯಕ ಸ್ವಾಮಿ ಆದಿತ್ಯಾನಾಥ್ ಹೇಳಿಕೆಯನ್ನು ಸಮರ್ಥಿಸಿರುವ ಶಿವಸೇನೆ, ಆದಿತ್ಯಾನಾಥ್ ಸಿಟ್ಟು ಸರಿಯಾಗಿಯೇ ಇದೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ ರಾಜ್ಯದಲ್ಲಿ ಪಿಡಿಗು ಹೆಚ್ಚಾಗುತ್ತಿದೆ ಎಂದು ಆರೋಪಿಸಿದೆ.('ಲವ್ ಜಿಹಾದ್' ವಿವಾದದಲ್ಲಿ ಯೋಗಿ ಆದಿತ್ಯಾನಾಥ್)

ಹಿಂದೂ ಸಮಾಜದ ಮುಗ್ಧ ಹೆಣ್ಣು ಮಕ್ಕಳು ಲವ್‌ ಜಿಹಾದ್ ಬಲೆಗೆ ಬಿದ್ದು ಬುರ್ಕಾ ಒಳಗೆ ಇಡಿ ಜೀವನ ಕಳೆಯುವ ಕೆಟ್ಟ ಪರಿಸ್ಥಿತಿ ತಂದುಕೊಳ್ಳುತ್ತಿದ್ದಾರೆ ಎಂದು ಸಮ್ನಾದ ಸಂಪಾದಕೀಯ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+