ವಯಸ್ಸು ಕೇವಲ ಅಂಕಿಯಷ್ಟೇ: 64ನೇ ವಯಸ್ಸಿನಲ್ಲಿ ಎಂಟೆಕ್ ಮುಗಿಸಿ ಇದೀಗ ಐಐಎಂ ಲಕ್ನೋಗೆ ಹೊರಟ ಸಾಧಕನ ಕಥೆ

ಓದಲು ಅಥವಾ ಕಲಿಯಲು ವಯಸ್ಸಿನ ಮಿತಿಯಿಲ್ಲ ಎಂಬ ಮಾತನ್ನ 64 ವರ್ಷದ ಹಿರಿಯರೊಬ್ಬರು ನಿಜ ಮಾಡಿದ್ದಾರೆ. ಕೇವಲ ಓದುವುದಷ್ಟೇ ಅಲ್ಲ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಯುವಕರಿಗೂ ಸೆಡ್ಡು ಹೊಡೆದಿದ್ದಾರೆ. ಈ ಸ್ಫೂರ್ತಿದಾಯಕ ಕಥೆಯನ್ನ ಅವರ ಪುತ್ರ ಶಶಾಂಕ್ ಶ್ರೀವಾಸ್ತವ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಚಾರ ತೀವ್ರವಾಗಿ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಅರವತ್ತು ವರ್ಷ ದಾಟಿದ ಬಳಿಕ ಹೆಚ್ಚಿನವರು ವೃತ್ತಿ ಬದುಕಿಗೆ ವಿದಾಯ ಹೇಳಿ ನಿವೃತ್ತಿ ಜೀವನವನ್ನ ನೆಮ್ಮದಿಯಿಂದ ಕಳೆಯಲು ಬಯಸುತ್ತಾರೆ. ಆದರೆ ಶಶಾಂಕ್ ಅವರ ತಂದೆ 2022ರಲ್ಲಿ ನಿವೃತ್ತರಾದ ನಂತರ ಸುಮ್ಮನೆ ಕೂರಲಿಲ್ಲ. ಉತ್ತರ ಪ್ರದೇಶದ ಮುನ್ಸಿಪಲ್ ಕಾರ್ಪೊರೇಷನ್‌ಗಳ ಮೇಲ್ವಿಚಾರಣೆ ನಡೆಸುವ ನಿಯಂತ್ರಣ ಮಂಡಳಿಯಲ್ಲಿ ಡೆಪ್ಯುಟಿ ಸಿಇಒ ಆಗಿ ಸೇರ್ಪಡೆಗೊಂಡರು.

Inspiring Success Story

ವಾರಕ್ಕೆ ಸುಮಾರು 1,000 ಕಿಲೋಮೀಟರ್‌ಗಳಷ್ಟು ರಸ್ತೆ ಪ್ರಯಾಣ ಮಾಡುವ ಅವರು, ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಮೌಲ್ಯಮಾಪನ ಮಾಡುತ್ತಾರೆ. ಇಷ್ಟೆಲ್ಲಾ ಕೆಲಸದ ಒತ್ತಡ ಹಾಗೂ ಪ್ರಯಾಣದ ನಡುವೆಯೂ ಅವರು 64ನೇ ವಯಸ್ಸಿನಲ್ಲಿ ಎಂಟೆಕ್ ವ್ಯಾಸಂಗವನ್ನ ಯಶಸ್ವಿಯಾಗಿ ಮುಗಿಸಿದ್ದಾರೆ.

ತಮ್ಮ ಸಹಪಾಠಿಗಳಿಗಿಂತ ಎರಡರಷ್ಟು ವಯಸ್ಸಾಗಿದ್ದರೂ, ಇಡೀ ತರಗತಿಯ ಟಾಪ್ 10 ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿರುವುದು ವಿಶೇಷ. ತಮ್ಮ ಪ್ರಯಾಣದ ನಡುವೆಯೇ ಸಿಗುವ ಬಿಡುವಿನ ವೇಳೆಯಲ್ಲಿ ನೋಟ್ಸ್ ಮಾಡಿಕೊಂಡು, ಓದಿ ಪರೀಕ್ಷೆಗೆ ಅತ್ಯುತ್ತಮವಾಗಿ ಸಿದ್ಧರಾಗಿ ಹಾಜರಾಗುತ್ತಿದ್ದರು ಎಂದು ಶಶಾಂಕ್ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.

ಮುಂದಿನ ಗುರಿ ಐಐಎಂ ಲಕ್ನೋದಲ್ಲಿನ ಉನ್ನತ ಕೋರ್ಸ್

ಎಂಟೆಕ್ ಮುಗಿಸಿದ್ದು ಅವರ ಸಾಧನೆಯ ಒಂದು ಮೈಲಿಗಲ್ಲು ಮಾತ್ರ, ಅವರ ಪಯಣ ಅಲ್ಲಿಗೇ ನಿಂತಿಲ್ಲ ನೋಡಿ. ಅವರ ಮುಂದಿನ ಗುರಿ ಐಐಎಂ ಲಕ್ನೋದಲ್ಲಿ ಎಕ್ಸಿಕ್ಯೂಟಿವ್ ಎಜುಕೇಶನ್ ಪ್ರೋಗ್ರಾಮ್ ವ್ಯಾಸಂಗ ಮಾಡುವುದು. "ಹೆಚ್ಚಿನವರು ತಮ್ಮ ಜೀವನದ ಗುರಿಗಳನ್ನ ಮುಗಿಸಿ ವಿಶ್ರಾಂತಿ ಪಡೆಯುವ ವಯಸ್ಸಿನಲ್ಲಿ, ನನ್ನ ತಂದೆ ಮುಂದಿನ ವ್ಯಾಸಂಗಕ್ಕಾಗಿ ಅರ್ಜಿ ನಮೂನೆಗಳನ್ನ ಭರ್ತಿ ಮಾಡುತ್ತಿದ್ದಾರೆ. ಜೀವನದ ಜಂಜಾಟದಲ್ಲಿ ನಮ್ಮ ಕೌಶಲ್ಯಗಳನ್ನ ಹೆಚ್ಚಿಸಿಕೊಳ್ಳುವುದು ನಮ್ಮ ಆದ್ಯತೆ ಪಟ್ಟಿಯಿಂದ ಕೆಳಗಿಳಿಯುತ್ತದೆ. ಆದರೆ ನನ್ನ ತಂದೆ ತಮ್ಮ 40 ಅಥವಾ 60ನೇ ವಯಸ್ಸಿನಲ್ಲಿ ಈ ಅಂತರ ಸೃಷ್ಟಿಯಾಗಲು ಬಿಡಲಿಲ್ಲ. ಅವರ ಜೀನ್ಸ್ ನನ್ನಲ್ಲಿ ಇರುವುದರಿಂದ ಕೌಶಲ್ಯ ವೃದ್ಧಿಗೆ ಪ್ರೇರಣೆ ಹುಡುಕಿಕೊಂಡು ನಾನು ಎಲ್ಲಿಗೂ ಹೋಗಬೇಕಿಲ್ಲ" ಎಂದು ಶಶಾಂಕ್ ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ನೆಟ್ಟಿಗರು ಇದನ್ನು ನಿಜವಾದ ಸ್ಫೂರ್ತಿದಾಯಕ ಸಾಧನೆ ಎಂದು ಕೊಂಡಾಡುತ್ತಿದ್ದಾರೆ. ಅನೇಕ ಬಳಕೆದಾರರು ಈ ಕಥೆ ತಮ್ಮ ಅಪೂರ್ಣ ಶಿಕ್ಷಣವನ್ನು ಮುಂದುವರಿಸಲು ಪ್ರೇರಣೆ ನೀಡಿದೆ ಎಂದು ಕಮೆಂಟ್ ಮಾಡಿದ್ದಾರೆ.

"ನಾನು ನನ್ನ 50ನೇ ವಯಸ್ಸಿನಲ್ಲಿ ಶಿಕ್ಷಣಕ್ಕೆ ಮರಳಿದೆ, ಆದರೆ ವ್ಯವಹಾರದ ಕಾರಣ ಸಮಯ ಹೊಂದಿಸಲಾಗಲಿಲ್ಲ. ನಿಮ್ಮ ತಂದೆಯ ಸಾಧನೆಗೆ ನನ್ನ ನಮನಗಳು" ಎಂದು ಒಬ್ಬರು ಬರೆದಿದ್ದಾರೆ. 40ರ ಹರೆಯದಲ್ಲೇ ನಿವೃತ್ತಿಯ ಕನಸು ಕಾಣುವ ಇಂದಿನ ಯುವಜನತೆಗೆ, ಕಲಿಯುವ ಛಲವಿದ್ದರೆ ವಯಸ್ಸು ಕೇವಲ ಒಂದು ಅಂಕಿ ಮಾತ್ರ ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+