ಪದವಿ ಮುಗಿಸಿ ಕೆಲಸ ಹುಡುಕದೆ ಫುಡ್ ಟ್ರಕ್ ತೆರೆದ ಅಕ್ಕ-ತಮ್ಮ; ತಿಂಗಳಿಗೆ ₹70,000 ಆದಾಯ.. ಸಾಧ್ಯವಾಗಿದ್ದೇ ರೋಚಕ

Inspirational Story: ಉನ್ನತ ಶಿಕ್ಷಣ ಅಥವಾ ಪದವಿ ಪಡೆದ ತಕ್ಷಣ ದೊಡ್ಡ ಕಂಪನಿಯಲ್ಲಿ ಕೆಲಸ ಸಿಗುತ್ತದೆಯೋ ಅಥವಾ ಸಿಗುವುದಿಲ್ಲವೋ ಎಂದು ಆಲೋಚಿಸುವವರೇ ಹೆಚ್ಚು ಮಂದಿ ಇದ್ದಾರೆ. ಇಂತಹವರ ನಡುವೆಯೂ ನಾವೇ ಯಾಕೆ ಸ್ವಂತ ಉದ್ಯಮ ಸೃಷ್ಟಿಸಬಾರದು ಎಂದು ಆಲೋಚಿಸಿದ ಸಹೋದರ ಹಾಗೂ ಸಹೋದರಿ ಈಗ ದೊಡ್ಡ ಮಟ್ಟದ ಉದ್ಯಮದ ಕಟ್ಟಿ ದಾಖಲೆಯ ಆದಾಯ ಗಳಿಸುತ್ತಿದ್ದು, ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

ಉನ್ನತ ಶಿಕ್ಷಣ ಅಥವಾ ಪದವಿ ಪಡೆದ ತಕ್ಷಣ ನಾವು ಯಾವ ಕಂಪನಿಯಲ್ಲಿ ಉದ್ಯೋಗ ಪಡೆಯಬೇಕು? ಎಂದು ಆಲೋಚಿಸುವುದೇ ಇಂದಿನ ಯುವಜನತೆಯ ಸಹಜ ಪ್ರವೃತ್ತಿ. ಆದರೆ ನಾವು ಸ್ವಂತವಾಗಿ ಏನನ್ನು ನಿರ್ಮಿಸಬಹುದು? ಎಂದು ಆಲೋಚಿಸಿದಾಗ ಉದ್ಯಮಶೀಲತೆಯ ಹೊಸ ಬಾಗಿಲುಗಳು ತೆರೆದುಕೊಳ್ಳುತ್ತವೆ. ಇದಕ್ಕೆ ಮಹಾರಾಷ್ಟ್ರದ ನಾಸಿಕ್‌ನ ನಿಶಾ ಮತ್ತು ಭೂಷಣ್ ಅವರ ಪ್ರೇರಣಾದಾಯಕ ಕಥೆಯೇ ಉತ್ತಮ ಉದಾಹರಣೆ.

Inspirational Story MBA Graduate Sister and Brother Launch Food Truck Earn Rs 70 000 Monthly

ಪದವಿಯ ಜ್ಞಾನದಿಂದ ಸ್ವಂತ ಉದ್ಯಮದತ್ತ ಹೆಜ್ಜೆ..

ನಿಶಾ ಅವರು ಎಂಬಿಎ ಪದವೀಧರೆಯಾಗಿದ್ದರೆ, ಅವರ ಸಹೋದರ ಭೂಷಣ್ ಅವರು ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ತರಬೇತಿ ಪಡೆದವರಾಗಿದ್ದಾರೆ. ಇಬ್ಬರೂ ಕಾರ್ಪೊರೇಟ್ ವಲಯದಲ್ಲಿ ಸುಲಭವಾಗಿ ಉತ್ತಮ ಸಂಬಳದ ಕೆಲಸ ಗಿಟ್ಟಿಸಿಕೊಳ್ಳಬಹುದಿತ್ತು. ಆದರೆ ಬೇರೆಯವರ ಕೆಳಗಡೆ ಕೆಲಸ ಮಾಡುವ ಬದಲು ತಮ್ಮ ಕೌಶಲ್ಯಗಳನ್ನು ಬಳಸಿಕೊಂಡು ಸ್ವಂತ ಉದ್ಯಮ ಪ್ರಾರಂಭಿಸಲು ನಿರ್ಧರಿಸಿದರು. ಈ ಯೋಚನೆಯಿಂದಲೇ ನಾಸಿಕ್‌ನಲ್ಲಿ 'ದಿ ಫುಡ್ ಫ್ಯಾಂಟಸಿ' ಎಂಬ ಫುಡ್ ಟ್ರಕ್ ತಲೆಎತ್ತಿತು.

ನಾಲ್ಕೇ ತಿಂಗಳಲ್ಲಿ ಯಶಸ್ಸು.. ತಿಂಗಳಿಗೆ ಬರೋಬ್ಬರಿ 70,000 ಆದಾಯ

ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಈ ಫುಡ್ ಟ್ರಕ್ ಉದ್ಯಮವು ಉತ್ತಮ ಯಶಸ್ಸು ಗಳಿಸಿದೆ. ಪ್ರಸ್ತುತ ಈ ಉದ್ಯಮದಿಂದ ಪ್ರತಿ ತಿಂಗಳಿಗೆ ಸುಮಾರು ₹70,000 ಆದಾಯ ಗಳಿಸುತ್ತಿದ್ದಾರೆ. ಆದರೆ ಈ ಕಥೆಯ ನಿಜವಾದ ಮೌಲ್ಯವು ಗಳಿಸಿದ ಆದಾಯದಲ್ಲಿ ಮಾತ್ರವಲ್ಲ, ಅವರು ತಮ್ಮ ಶಿಕ್ಷಣ ಮತ್ತು ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಬಳಸಿಕೊಂಡ ರೀತಿಯಲ್ಲಿದೆ.

'ದಿ ಫುಡ್ ಫ್ಯಾಂಟಸಿ' ತಲೆಎತ್ತಲು ಪ್ರಮುಖ ಕಾರಣವೇನು?

ನಿಶಾ ಅವರು ಎಂಬಿಎ ಅಧ್ಯಯನದ ಅನುಭವದಿಂದ ಗ್ರಾಹಕರ ಮನಸ್ಥಿತಿ ಮತ್ತು ಮಾರುಕಟ್ಟೆಯ ಅಗತ್ಯಗಳನ್ನು ಅರ್ಥೈಸಿಕೊಂಡರು. ಇನ್ನೂ ಇವರ ಸಹೋದರ ಭೂಷಣ್ ಅವರು ಹೋಟೆಲ್ ಮ್ಯಾನೇಜ್‌ಮೆಂಟ್ ಕೌಶಲ್ಯದ ಮೂಲಕ ಆಹಾರ ತಯಾರಿಕೆಯಲ್ಲಿ ಉನ್ನತ ಮಟ್ಟದ ಶುಚಿತ್ವ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡಿದ್ದಾರೆ. ಹೀಗೆ ಇವರಿಬ್ಬರು ಯಾವುದೇ ಹಿಂಜರಿಕೆಯಿಲ್ಲದೆ ತಾವೇ ಖುದ್ದಾಗಿ ಅಡುಗೆ ತಯಾರಿಸಿ, ಗ್ರಾಹಕರಿಗೆ ಸೇವೆ ಒದಗಿಸುವ ಮೂಲಕ ವ್ಯವಹಾರವನ್ನು ನಿರಂತರವಾಗಿ ಬೆಳೆಸುತ್ತಿದ್ದಾರೆ.

ಯುವಜನತೆ, ನವೋದ್ಯಮಗಳಿಗೆ ಮಹತ್ವದ ಸಂದೇಶ

ಸಾಮಾನ್ಯವಾಗಿ ಉದ್ಯಮ ಆರಂಭಿಸಬೇಕೆಂದರೆ ದೊಡ್ಡ ಕಚೇರಿ, ಬೃಹತ್ ತಂಡ ಅಥವಾ ಕೋಟ್ಯಂತರ ರೂಪಾಯಿ ಬಂಡವಾಳ ಬೇಕು ಎಂಬ ತಪ್ಪು ಕಲ್ಪನೆಯಿದೆ. ಆದರೆ, ನಿಶಾ ಮತ್ತು ಭೂಷಣ್ ಅವರ ಪ್ರಯಾಣವು ನವೋದ್ಯಮಗಳಿಗೆ ಸ್ಪಷ್ಟ ಸಂದೇಶ ನೀಡುತ್ತದೆ. ವ್ಯವಹಾರ ಆರಂಭಿಸಲು ದೊಡ್ಡ ಮಟ್ಟದ ಸಂಪನ್ಮೂಲಗಳ ಅಗತ್ಯವಿಲ್ಲ. ಒಂದು ಉತ್ತಮ ಕಲ್ಪನೆ, ಕೌಶಲ್ಯ ಮತ್ತು ಸ್ಪಷ್ಟ ಉದ್ದೇಶವಿದ್ದರೆ ಸಾಕು.

ಮಾರುಕಟ್ಟೆಯಲ್ಲಿ ಕಲಿಯುತ್ತಾ, ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಮುನ್ನಡೆಯುವುದು ಅಗತ್ಯ. ಜನರಿಗೆ ನಿಜವಾಗಿಯೂ ಅಗತ್ಯವಿರುವ ಮತ್ತು ಗುಣಮಟ್ಟದ ಸೇವೆಯನ್ನು ನೀಡಿದಾಗ ಉದ್ಯಮವು ತಾನಾಗಿಯೇ ದೊಡ್ಡ ಮಟ್ಟದಲ್ಲಿ ಬೆಳೆಯುತ್ತದೆ. ಕನಸುಗಳನ್ನು ನನಸಾಗಿಸಲು ಮೊದಲ ಹೆಜ್ಜೆ ಎಂದರೆ ಧೈರ್ಯವಾಗಿ ನಿರ್ಧಾರ ತೆಗೆದುಕೊಳ್ಳುವುದು. ನಿಮ್ಮ ಪದವಿಯು ಒಂದು ನಿರ್ದಿಷ್ಟ ಕೆಲಸಕ್ಕೆ ಸೀಮಿತವಾಗಿರದೆ, ಸ್ವಂತ ಉದ್ಯಮ ಕಟ್ಟುವ ಹೆಜ್ಜೆಯಾದರೆ ಹೊಸ ಸಾಧನೆ ಸಾಧ್ಯ. ಇದನ್ನು ಈ ಇಬ್ಬರು ಸಹೋದರ, ಸಹೋದರಿ ಸಾಬೀತುಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+