ಮಲ್ಯನನ್ನು ಹಿಡಿದರೆ 1ಲಕ್ಷ, ಜಗತ್ತನೇ ಮೆಚ್ಚಿಸಿದ ವಿಕಲಚೇತನರು

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,14: ಒಂದೆಡೆ ವಿಶ್ವ ಸಾಂಸ್ಕೃತಿಕ ಉತ್ಸವದ ವೈಭವ, ಖಾಕಿ ಬಣ್ಣದ ಚಡ್ಡಿಯಿಂದ ಕಂದು ಬಣ್ಣದ ಪ್ಯಾಂಟ್ ಗೆ ಬದಲಾದ ಆರ್ ಎಸ್ ಎಸ್, ಮೈಸೂರಲ್ಲಿ ಕಾವೇರಿದ ಜನರ ಆಕ್ರೋಶ ಹೀಗೆ ನಾನಾ ಘಟಾನೆಗಳು ಸೋಮವಾರ ಘಟಿಸಿವೆ.

ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೀಗೆ ನಾನಾ ಗಣ್ಯರು ಆಗಮಿಸಿದ್ದರು.[ಕಲಾವೈಭವದ ಸಿಂಚನದಲ್ಲಿ ಝಗಮಗಿಸಿದ ಸಂಸ್ಕೃತಿ ಉತ್ಸವ]

ರಾಜಸ್ತಾನ, ಅಸ್ಸಾಂ, ಕೇರಳ ಹೀಗೆ ನಾನಾ ರಾಜ್ಯಗಳ, ದೇಶಗಳ ಕಲೆಗಳು ಈ ಉತ್ಸವದ ರಂಗನ್ನು ಇಮ್ಮಡಿಗೊಳಿಸಿತು. ಒಟ್ಟಿನಲ್ಲಿ ಆರ್ಟ್ ಆಫ್ ಲೀವಿಂಗ್ ಸಂಸ್ಥೆಯಿಂದ ಮೂರು ದಿನಗಳ ಕಾಲ ನಡೆದ ವಿಶ್ವ ಸಾಂಸ್ಕೃತಿಕ ಸಮ್ಮೇಳನ ಇಡೀ ಜಗತ್ತನ್ನು ಪ್ರತಿನಿಧಿಸಿದ್ದು ಮಾತ್ರ ಸತ್ಯ. ಈ ಸುದ್ದಿಯ ಜೊತೆ ಇನ್ನಷ್ಟು ವಿಶೇಷ, ವೈವಿಧ್ಯ ಸುದ್ದಿಗಳು ಇಲ್ಲಿವೆ.

ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಅಸ್ಸಾಂ

ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಅಸ್ಸಾಂ

ವಿಶ್ವ ಸಾಂಸ್ಕೃತಿಕ ಉತ್ಸವದ ಮೊದಲ ದಿನ ಕೇರಳ ನೃತ್ಯ ಜನರನ್ನು ಸೆಳೆದರೆ, ಕೊನೆಯ ದಿನ ಅಸ್ಸಾಂ ರಾಜ್ಯದ ಸಾಂಪ್ರದಾಯಿಕ ನೃತ್ಯ ಜನರ ಮನಸೂರೆಗೊಂಡಿತು.

ಜಗತ್ತು ಮೆಚ್ಚಿದ ವಿಕಲಚೇತನರ ನೃತ್ಯ

ಜಗತ್ತು ಮೆಚ್ಚಿದ ವಿಕಲಚೇತನರ ನೃತ್ಯ

ರಾಜಸ್ತಾನ ಸಂಗೀತ ಅಕಾಡೆಮಿಯು ಜೋಧ್ ಪುರದಲ್ಲಿ ಆಯೋಜಿಸಿದ್ದ ಆಲ್ ಇಂಡಿಯಾ ಡ್ಯಾನ್ಸ್ ಫೆಸ್ಟಿವಲ್ ನಲ್ಲಿ ವಿಶೇಷ ವಿಕಲಚೇತನರು ಭರತನಾಟ್ಯ ನೃತ್ಯ ಪ್ರದರ್ಶಿಸಿ ಕುಳಿತವರನ್ನು ದಿಗ್ಬ್ರಮೆಗೊಳಿಸಿದರು.

ಗೆಲುವನ್ನು ಹುತಾತ್ಮರಿಗೆ ಒಪ್ಪಿಸಿದ ವಿಜೇಂದರ್

ಗೆಲುವನ್ನು ಹುತಾತ್ಮರಿಗೆ ಒಪ್ಪಿಸಿದ ವಿಜೇಂದರ್

ಭಾರತದ ಬಾಕ್ಸರ್ ವಿಜೇಂಧರ್ ಸಿಂಗ್ ಅವರು ವೃತ್ತಿಪರ ಬದುಕಿನ ನಾಲ್ಕನೇ ಜಯವನ್ನು ಪಂಜಾಬಿನ ಪಠಾಣ್ ಕೋಟ್ ನಲ್ಲಿ ನಡೆದ ಉಗ್ರರ ಧಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಅರ್ಪಿಸಿದ್ದಾರೆ.

10 ರೂ ನಾಣ್ಯಗಳು

10 ರೂ ನಾಣ್ಯಗಳು

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಲಹಾಬಾದಿನಲ್ಲಿ 10ರೂ ನಾಣ್ಯಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ತಿರಾಠ್ ಸಿಂಗ್ ಥಾಕೂರ್, ಉತ್ತರ ಪ್ರದೇಶ ರಾಜ್ಯಾಧ್ಯಕ್ಷ ರಾಮ್ ನಾಯ್ಕ್, ಅಲಹಾಬಾದ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ಧನಂಜಯ ಯಶ್ವಂತ್ ಚಂದ್ರ ಭಾಗವಹಿಸಿದ್ದರು.

ಕಂದು ಬಣ್ಣದ ಪ್ಯಾಂಟ್ ತೊಡಲಿದ್ದಾರೆ ಆರ್ ಎಸ್ಎಸ್

ಕಂದು ಬಣ್ಣದ ಪ್ಯಾಂಟ್ ತೊಡಲಿದ್ದಾರೆ ಆರ್ ಎಸ್ಎಸ್

91 ವರ್ಷಗಳ ನಂತರ ಆರ್ ಎಸ್ಎಸ್ ಖಾಕಿ ಚಡ್ಡಿಯಿಂದ ಕಂದು ಬಣ್ಣದ ಚಡ್ಡಿಗೆ ಬದಲಾಗಿದೆ. ಅಂದರೆ ತಮ್ಮ ವಸ್ತ್ರದಲ್ಲಿ ಕೊಂಚ ಬದಲಾವಣೆ ತಂದು ಜನರಲ್ಲಿ ಆಶ್ವರ್ಯ ಹುಟ್ಟಿಸಿದೆ.

ಹೆಣ್ಣು ಮಕ್ಕಳನ್ನು ಉಳಿಸಿ

ಹೆಣ್ಣು ಮಕ್ಕಳನ್ನು ಉಳಿಸಿ

ಮಧ್ಯಪ್ರದೇಶದ ಇಂಧೋರ್ ನಲ್ಲಿ ಮಹಿಳಾ ಸಂಘದ ಕಾರ್ಯಕರ್ತರು ಮಹಿಳಾ ದಿನಾಚರಣೆ ಆಚರಿಸಿದ್ದು, ಹೆಣ್ಣು ಮಗುವನ್ನು ಪ್ರತಿನಿಧಿಸುವ ಗೊಂಬೆಗಳನ್ನು ಹಿಡಿದು ಹೆಣ್ಣು ಮಕ್ಕಳನ್ನು ಉಳಿಸಿ ಎಂಬ ಸಂದೇಶ ಸಾರಿದರು.

ಹಿಮದಿಂದ ಆವೃತ್ತವಾದ ಕೇದರನಾಥ ದೇವಾಲಯ

ಹಿಮದಿಂದ ಆವೃತ್ತವಾದ ಕೇದರನಾಥ ದೇವಾಲಯ

ಉತ್ತರಖಾಂಡ ರಾಜ್ಯದಲ್ಲಿರುವ ಕೇದರನಾಥ ದೇವಾಲಯದ ಆವರಣದಲ್ಲಿ ಹಿಮ ಆವೃತವಾಗಿದ್ದು, ಜನರನ್ನು ಇನ್ನಷ್ಟು ಆಕರ್ಷಿಸುತ್ತಿದೆ.

ಅರ್ಧಶತಕ ಬಾರಿಸಿದ ಅಮೀರ್ ಖಾನ್

ಅರ್ಧಶತಕ ಬಾರಿಸಿದ ಅಮೀರ್ ಖಾನ್

51 ವರ್ಷಕ್ಕೆ ಕಾಲಿಟ್ಟ ಅಮೀರ್ ಖಾನ್ ತಮ್ಮ ಹುಟ್ಟುಹಬ್ಬವನ್ನು ಮುಂಬೈನಲ್ಲಿ ಆಚರಿಸಿಕೊಂಡರು.

ವಿಜಯ ಮಲ್ಯ ಹಿಡಿದುಕೊಟ್ಟವರಿಗೆ ಒಂದು ಲಕ್ಷ

ವಿಜಯ ಮಲ್ಯ ಹಿಡಿದುಕೊಟ್ಟವರಿಗೆ ಒಂದು ಲಕ್ಷ

ಕೋಟ್ಯಾಂತರ ರೂ ಸಾಲ ಮಾಡಿ ಲಂಡನ್ ಗೆ ಕಾಲುಕಿತ್ತ ಸಾಲದ ದೊರೆ ವಿಜಯ ಮಲ್ಯವನ್ನು ಹಿಡಿದುಕೊಟ್ಟವರಿಗೆ ಒಂದುಲಕ್ಷ ಬಹುಮಾನ ನೀಡುವುದಾಗಿ ಪೋಸ್ಟರ್ ಮಾಡಿಕೊಂಡು ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲೆ ಕಿಡಿಕಾರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
inshort News of World culture festival, womens day, Assamese artists perform at the World Culture Festival on the banks of Yamuna River in New Delhi, Physically challenged persons perform at the 'All India Dance Festival' organised by Rajasthan Sangeet Natak Academy at Town Hall in Jodhpur
Please Wait while comments are loading...