8 ಗಂಟೆಗೆ ಕಚೇರಿ ಬಿಡಿ: ಇನ್ಫಿ ಟೆಕ್ಕಿಗಳಿಗೆ ತಾಕೀತು

ಕಂಪನಿಯ ಟೆಕ್ಕಿಗಳೇ ದಯವಿಟ್ಟು ರಾತ್ರಿಪಾಳಿಯಲ್ಲೂ ಕೆಲಸ ಮಾಡುವ ಚಾಳಿ ಬಿಡಿ. ದಿನದ ಕೆಲಸ ಮುಗಿಯುತ್ತಿದ್ದಂತೆ ರಾತ್ರಿ ವೇಳೆಗೇ ಶೀಘ್ರವೇ ಕಚೇರಿ ಬಿಟ್ಟು, ಬೇಗನೇ ಮನೆ ಸೇರಿಕೊಳ್ಳಿ ಎಂದು ಇನ್ಫೋಸಿಸ್ ಕಂಪನಿಯು ಪುಣೆಯಲ್ಲಿರುವ ತನ್ನ ಉದ್ಯೋಗಿಗಳಿಗೆ ತಾಕೀತು ಮಾಡಿದೆ. ಇದು ಬೇರೆ ನಗರಗಳಲ್ಲೂ ಇರುವ ಕಂಪನಿಯ ಕ್ಯಾಂಪಸ್ಸುಗಳಿಗೆ ಅನ್ವಯವಾಗುತ್ತದಾ/ ವಿಸ್ತರಣೆಯಾಗುತ್ತದಾ? ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ಸದ್ಯಕ್ಕೆ ನಿರಾಶಾದಾಯಕ ಸ್ಥಿತಿ ತಲುಪಿರುವ ಇನ್ಫೋಸಿಸ್ ಟೆಕ್ನಾಲಜೀಸ್ ಕಂಪನಿ ಚುಕ್ಕಾಣಿಯನ್ನು ಮತ್ತೆ ತಮ್ಮ ಅಧೀನಕ್ಕೆ ತೆಗೆದುಕೊಂಡಿರುವ 'ಇನ್ಫಿ ದೊಡ್ಡಣ್ಣ' ಎನ್ ಆರ್ ನಾರಾಯಣ ಮೂರ್ತಿ ಅವರು ತಮ್ಮ ಉದ್ಯೋಗಳಿಗೆ ಈ ಹಿಂದೆ ಆತ್ಮೀಯ/ ಅರ್ಥಗರ್ಭಿತ ಪತ್ರ ಬರೆದು ಇಂತಹುದೇ ಶಿಷ್ಟಾಚಾರಗಳನ್ನು ಪಾಲಿಸಲು ಸೂಚಿಸಿದ್ದರು ಎನ್ನಲಾಗಿತ್ತು. ಆದರೆ ಅದು ಯಾರೋ ಕಿಡಿಗೇಡಿಗಳು ಕುಯುಕ್ತಿಯಿಂದ ಅಂತರ್ಜಾಲದಲ್ಲಿ ಪೋಸ್ಟ್ ಮಾಡಿದ್ದ ಪತ್ರವಾಗಿತ್ತು. (ಇನ್ಫಿ ಮೂರ್ತಿ ಉದ್ಯೋಗಿಗಳಿಗೆ ಬರೆದ ಪತ್ರದಲ್ಲೇನಿದೆ?)
ಆದರೆ ಇದೀಗ ಕಂಪನಿಯು ನಿಜವಾಗಿಯೂ ಇಂತಹುದೇ ಪತ್ರವನ್ನು ಪುಣೆ ಇನ್ಫೋಸಿಸ್ ಕ್ಯಾಂಪಸ್ಸಿನಲ್ಲಿ ಕಾರ್ಯನಿರತ ಟೆಕ್ಕಿಗಳಿಗೆ ಬರೆದಿದೆ. ಇನ್ಫೋಸಿಸ್ ತನ್ನ ಮಾನವ ಸಂಪನ್ಮೂಲ ನೀತಿಯಲ್ಲಿ late-stay policyಗೆ ತುಸು ಬದಲಾವಣೆ ತಂದಿದ್ದು, ರಾತ್ರಿಯೆಲ್ಲಾ ಕಚೇರಿಯಲ್ಲೇ ಉಳಿಯುವ ಮನಸು ಮಾಡಬೇಡಿ ಎಂದಿದೆ.
ಕಂಪನಿಯು ಈ ವಿಷಯವನ್ನು ಮೊನ್ನೆ ತನ್ನ ಉದ್ಯೋಗಿಗಳಿಗೆ ಇ-ಮೇಲ್ ಮೂಲಕ ತಿಳಿಸಿದೆ. ಕಂಪನಿಯ ಪೂನಾ ಕ್ಯಾಂಪಸ್ಸಿನಲ್ಲಿ ಲಭ್ಯವಿರುವ ಮನರಂಜನಾ ಸೌಲಭ್ಯಗಳನ್ನು ಇನ್ಮುಂದೆ ರಾತ್ರಿ 7.45ಕ್ಕೆಲ್ಲಾ ಬಂದ್ ಮಾಡಲಾಗುತ್ತದೆ. ಅಂದರೆ indoor/ outdoor games, gym ಮತ್ತು locker facilities ಸಹ ಬಂದ್ ಮಾಡಲಾಗುತ್ತದೆ. weekend timingsಗಳಲ್ಲೂ ಸಹ ಇಂತಹುದೇ ಮಾರ್ಪಾಡುಗಳಿರುತ್ತವೆ ಎಂದು ಕಂಪನಿ ಮೂಲಗಳು ಹೇಳಿವೆ.












Click it and Unblock the Notifications