Infosys: ಟೀಕೆಗಳು ಖಾಸಗಿಯಾಗಿರಲಿ, ಕಂಪನಿ ಲಾಭ ಉದ್ಯೋಗಿಗಳಿಗೂ ಹಂಚಿಕೆ ಆಗಲಿ: Narayana Murthy
ಬೆಂಗಳೂರು, ಮಾರ್ಚ್ 17: ಭಾರತೀಯ ದೈತ್ಯ ಐಟಿ ಕಂಪನಿಗಳಲ್ಲಿ ಒಂದಾಗಿರುವ 'ಇನ್ಫೋಸಿಸ್' ಸಂಸ್ಥೆಯ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿ ಭಾರೀ ಸುದ್ದಿಯಾಗಿದ್ದರು. ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ನೌಕರರ ಏಳಿಗೆ, ಗೌರವ ಮತ್ತು ಯೋಗಕ್ಷೇಮ ಕುರಿತು ಮಾತನಾಡಿದ್ದಾರೆ. ಈ ಹೇಳಿಕೆಯು ಹಲವರಲ್ಲಿ ಅಚ್ಚರಿಗೆ ಉಂಟು ಮಾಡಿದೆ.
ಮುಂಬೈನಲ್ಲಿ ನಡೆದ TiE Con Mumbai 2025 ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ಕಂಪನಿಗಳು ಆಗಲಿ ತಮ್ಮ ನೌಕರರನ್ನು ಉತ್ತಮವಾಗಿ, ಗೌರವಯುತವಾಗಿ ನೋಡಿಕೊಳ್ಳಬೇಕು. ಮಾನವೀಯತೆಯಿಂದ ನಡೆಸಿಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ. ವಾರಕ್ಕೆ ಉದ್ಯೋಗಿಗಳು ಕಂಪನಿಗಾಗಿ 70 ಗಂಟೆ ಕೆಲಸ ಮಾಡಬೇಕು ಎಂಬ ಹೇಳಿಕೆ ಬೆನ್ನಲ್ಲೆ ಉದ್ಯೋಗಿಗಳ ಒಳಿತಿನಿ ಕುರಿತು ಹೇಳಿದ ಅವರ ಮಾತುಗಳು ಚರ್ಚೆಯಾಗುತ್ತಿವೆ.

ಕಂಪನಿ ಲಾಭಾಂಶ ಹಂಚಿ: ಟೀಕೆ ಖಾಸಗಿಯಾಗಿರಲಿ
ಕಾರ್ಪೋರೇಟ್ ರಂಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯ (ನೌಕರ) ಗೌರವ ಎತ್ತಿಹಿಡಿಬೇಕು. ಇಲ್ಲಿನ ವೇತನ ಅಂತವರನ್ನು ಕಡಿಮೆ ಮಾಡಬೇಕು. ಸೂಕ್ತ ವೇತನ ನೀಡುವುದು ಮಾತ್ರವಲ್ಲದೇ, ಕಂಪನಿಯ ಲಾಭಾಂಶವನ್ನು ಸಾಧ್ಯವಾದಷ್ಟು ಉದ್ಯೋಗಿಗಳಿಗೆ ಹಂಚಬೇಕು ಎಂದು ತಿಳಿಸಿದ್ದಾರೆ.
ಕೆಲಸದ ವೇಳೆ ನಿಮ್ಮ ಉದ್ಯೋಗಿಗಳನ್ನು ಹೊಗಳುವ ಸಮಯ ಬಂದಾಗ ಎಲ್ಲರೆದು ಬಹಿರಂಗವಾಗಿಯೇ ಹೊಗಳಬೇಕು. ಒಂದು ವೇಳೆ ಉದ್ಯೋಗಿಯನ್ನು ಟೀಕಿಸುವುವುದರಿದ್ದರೆ ಅದನ್ನು ಬಹಿರಂಗವಾಗಿ ಟೀಕಿಸಬೇಕು. ಅದು ಖಾಸಗಿಯಾಗಿರಲಿ. ನೌಕರರನ್ನು ಮನುಷ್ಯರಂತೆ ನೋಡಬೇಕು. ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ನಾರಾಯಣ ಮೂರ್ತಿ ಅವರು ಸಲಹೆ ನೀಡಿದ್ದಾರೆ.
ಬಡತನ ನಿರ್ಮೂಲನೆ, ಭಾರತದ ಭವಿಷ್ಯ
ಇದೇ ವೇಳೆ ದೇಶದ ಬಡತನ ನಿರ್ಮೂಲನೆ ಹಾಗೂ ಬಂಡವಾಳಶಾಹಿಗಳ ಕುರಿತು ಮಾತನಾಡಿದ ಅವರು, ಸಹಾನುಭೂತಿಯಿಂದ ಬಂಡವಾಳಶಾಹಿಗಳನ್ನು ಸ್ವೀಕರಿಸುವ ವ್ಯವಹಾರಗಳಿಂದ ಬಡತನ ನಿರ್ಮೂಲನೆ ಮಾಡಬಹುದಾಗಿದೆ. ಇದರಲ್ಲಿ ಭಾರತದ ಭವಿಷ್ಯವು ಅಡಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬಂಡವಾಳಶಾಹಿಗಳು ಹೂಡಿಕೆದಾರರಿಗೆ ಸಂಪತ್ತು ಸೃಷ್ಟಿಸಿವವರು ಮಾತ್ರವಲ್ಲದೇ, ಜನರಿಗೆ ಉದ್ಯೋಗ ಸೃಜಿಸಿ ಬಡತನ ಕಡಿಮೆ ಮಾಡಲು, ಸೂಕ್ತ ತೆರಿಗೆ ಪಾವತಿಸಿ ದೇಶದ ಆರ್ಥಿಕತೆಗೆ ಕೊಡುಗೆ ನೀಡುವವರು, ನವೀನ ಆಲೋಚನೆಗಳೊಂದಿಗೆ ಬರುವವರು ಅವಕಾಶ ಸೃಷ್ಟಿಸಿ ಕೊಡುವುದು ಅಗತ್ಯವಿದೆ ಎಂದು ನಾರಾಯಣ ಮೂರ್ತಿ ಅವರು ತಿಳಿಸಿದ್ದಾರೆ.
ನಾರಾಯಣಮೂರ್ತಿ ಅವರ ಹೆಚ್ಚಿನ ಅವಧಿಯ ಕೆಲಸ ಹೇಳಿಕೆಗೆ ಕೆಲವರು ಕಿಡಿ ಕಾರಿದ್ದರು. ಆದರೆ ಅವರು ತಮ್ಮ ಹೇಳಿಕೆಗೆ ಈಗಲೂ ಬದ್ಧ ಎಂದಿದ್ದರು. ನಂತರ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಒಂದಷ್ಟು ಟೀಕೆ ಟಿಪ್ಪಣಿಗಳು ಕೇಳಿ ಬಂದವು. ಇದೀಗ ಅವರೇ ನೌಕರರ ಯೋಗಕ್ಷೇಮ ಕುರಿತು ಮಾತನಾಡಿದ್ದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications