Corona: ದೇಶದಲ್ಲಿ ಒಂದೇ ದಿನ 3,095 ಜನರಲ್ಲಿ ಸೋಂಕು ಪತ್ತೆ, ಹೆಚ್ಚಾದ ಕೋವಿಡ್ ತಪಾಸಣೆ, ಅಂಕಿ ಅಂಶ ಮಾಹಿತಿ

ನವದೆಹಲಿ, ಮಾರ್ಚ್‌ 31: ಭಾರತದಲ್ಲಿ ಕೊರೊನಾ ದಿನದಿಂದ ದಿನಕ್ಕೆ ವ್ಯಾಪ್ತಿಸುತ್ತಿರುವ ಲಕ್ಷಣಗಳು ಕಂಡು ಬಂದಿವೆ. ಕಳೆದ ಒಂದು ದಿನದಲ್ಲಿ ದೇಶದಲ್ಲಿ ಮೂರು ಸಾವಿರಕ್ಕೂ ಅಧಿಕ ಕೊರೊನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಮೂಲಕ ಕೊರೊನಾ ಪಾಸಿಟಿವಿಟಿ ದರವು ಹೆಚ್ಚಳವಾಗಿದೆ.

ಭಾರತೀಯ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,095 ಹೊಸ ಕೋವಿಡ್ -19 ಸೋಂಕಿನ ಪಾಸಿಟಿವ್ ಪ್ರಕರಣಗಳೂಲೂ ವರದಿಯಾಗಿವೆ. ದೈನಂದಿನ ಧನಾತ್ಮಕ ಪ್ರಮಾಣದ ದರ (ಪಾಸಿಟಿವಿಟಿ ರೇಟ್) ಶೇಕಡಾ 2.61 ಪ್ರತಿಶತಕ್ಕೆ ಏರಿಕೆ ಆಗಿದೆ.

Indias Newly Recorded 3,095 In Last 24 Hours, 13,528 Total Active Cases

ಹೊಸದಾಗಿ ಈ ಮೂಲಕ ದೇಶದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 13,528ಕ್ಕೆ ಏರಿಕೆ ಆಗಿದೆ. ದೇಶಾದ್ಯಂತ ಈವರೆಗಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4.47 ಕೋಟಿಗೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಕೊರೊನಾ ಮಾಹಿತಿ ದತ್ತಾಂಶ ಪಟ್ಟಿಯಲ್ಲಿ ತಿಳಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಳವಡಿಸಿದರುವ ಮಾಹಿತಿ ಪ್ರಕಾರ, ಸಾವಿನ ಸಂಖ್ಯೆ 530,867 ಕ್ಕೆ ಏರಿದೆ. ಅದು ಸಕ್ರಿಯ ಪ್ರಕರಣಗಳಲ್ಲಿ ಒಟ್ಟು ಸೋಂಕುಗಳಲ್ಲಿ 0.03 ರಷ್ಟು ಎಂದು ಹೇಳಲಾಗಿದೆ. ಕೊರೊನಾ ಅಲೆ, ಭೀತಿ ಅಷ್ಟಾಗಿ ಕಾಣದ ಹಿನ್ನೆಲೆ ಆಸ್ಪತ್ರೆಗಳಿಗಿಂತ ಮನೆಯಲ್ಲಿ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸಚಿವಾಲಯಗಳ ಮೂಲಗಳ ಪ್ರಕಾರ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವ ಪ್ರಮಾಣ ಶೇಕಡಾ 98.78 ರಷ್ಟು ಇದೆ ಎಂದು ತಿಳಿದು ಬಂದಿದೆ.

ದೇಶದಲ್ಲಿ ಫೆಬ್ರವರಿ ತಿಂಗಳಿಂದ ಈಚೆಗೆ ಕಂಡು ಬಂದ ಜ್ವರ, ಶೀತ ಜ್ವರ, ಕೆಮ್ಮ, ನೆಗಡಿಯಂತಹ ಅನಾರೋಗ್ಯ ಮತ್ತು ಹೊರ ವೈರಸ್ ಬಳಿಕ ಕೊರೊನಾ ಏರುಗತಿಯಲ್ಲಿ ಸಾಗಿತ್ತು. ಹೀಗಾಗಿ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಾ ಬಂದವರು. ಸದ್ಯಕ್ಕೆ ರಾಜ್ಯವಾರು ಕೊರೊನಾ ಪ್ರಕರಣ ನೋಡುವುದಾದರೆ,ಕರ್ನಾಟಕ ರಾಜ್ಯದಲ್ಲಿ 1,037 ಸಕ್ರಿಯ ಪ್ರಕರಣಗಳು, ಕೇರಳದಲ್ಲಿ 3,852 ಸಕ್ರಿಯ ಪ್ರಕರಣಗಳು, ಮಹಾರಾಷ್ಟ್ರದಲ್ಲಿ 3,016, ಗುಜರಾತ್‌ನಲ್ಲಿ 2,247, ದೆಹಲಿ 932, ತಮಿಳುನಾಡಿನಲ್ಲಿ 726 ಮತ್ತು ಹಿಮಾಚಲ ಪ್ರದೇಶದಲ್ಲಿ 798 ಸಕ್ರಿಯ ಪ್ರಕರಣಗಳು ಇದ್ದು, ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

Indias Newly Recorded 3,095 In Last 24 Hours, 13,528 Total Active Cases

ಕೊರೊನಾ ವೈರಸ್‌ XBB.1.16 ರೂಪಾಂತರಿ ಸೋಂಕು ಪ್ರಸ್ತುತದಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಪ್ರಕರಣಗಳಿಗೆ ಕಾರಣವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ ಪರಿಹಾರದಲ್ಲಿ, ಸೋಂಕು ಸ್ವಭಾವತಃ ಸೌಮ್ಯವಾಗಿರಬೇಕು ಮತ್ತು ಲಸಿಕೆ ಹಾಗೂ ರೋಗಕ್ಕೆ ನೈಸರ್ಗಿಕವಾಗಿ ಒಗ್ಗಿಕೊಳ್ಳುವುದರಿಂದ ಜೊತೆಗೆ ಭಾರತೀಯರು ಹೈಬ್ರಿಡ್ ಪ್ರತಿರಕ್ಷೆಯನ್ನು ಅಭಿವೃದ್ಧಿಪಡಿಸಿದ್ದರಿಂದ ಆಸ್ಪತ್ರೆಗೆ ದಾಖಲಾಗುವ ದರದಲ್ಲಿ ಏರಿಕೆ ಕಂಡು ಬಂದಿಲ್ಲ.

ಹೀಗಿದ್ದರು ಮುಂಜಾಗೃತಾ ದೃಷ್ಟಿಯಿಂದ ಕೊರೊನಾ ಲಸಿಕಾಕರಣದ ಪ್ರಮಾಣವನ್ನು ಹೆಚ್ಚಿಸುವಂತೆ ಅಧಿಕಾರಿಗಳು ಸೂಚಿಸಲಾಗಿದೆ. ಜನನಿಬಿಡ ಸ್ಥಳಗಳಲ್ಲಿ ಮುಖವಾಡಗಳನ್ನು ಧರಿಸಲು ಮತ್ತು ಮಾರ್ಗಸೂಚಿಗಳನ್ನು ಪಾಲಿಸುಂತೆ ಕೇಂದ್ರ ಸರ್ಕಾರ ನಾಗರಿಕರಲ್ಲಿ ಮನವಿ ಮಾಡಿದೆ.

ಕೊರೊನಾ ಸೋಂಕನ್ನು ತಡೆಗಟ್ಟಲು ಹಾಗೂ ನಿಯಂತ್ರಣಕ್ಕೆ ತರಲು ಅಪಾಯದ ಮೌಲ್ಯಮಾಪನ ಆಧಾರಿತ ವಿಧಾನವನ್ನು ಅನುಸರಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮುಂದಾಗಿದೆ. ಈ ಸಂಬಂಧ ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಕ್ತ ನಿರ್ದೇಶನ ನೀಡಿದೆ.

ಕೋವಿಡ್-19 ಪರಿಸ್ಥಿತಿಯನ್ನು ಸೂಕ್ಷ್ಮ ಮಟ್ಟದಲ್ಲಿ (ಜಿಲ್ಲೆ ಮತ್ತು ಉಪ-ಜಿಲ್ಲೆಗಳು) ಪರೀಕ್ಷಿಸಲು ಮತ್ತು ಪರಿಣಾಮಕಾರಿ ಅನುಸರಣೆಯನ್ನು ಸರಿಯಾಗಿ ಖಾತ್ರಿಪಡಿಸಿಕೊಳ್ಳಲು ಕೋವಿಡ್ -19 ರ ತ್ವರಿತ ಮತ್ತು ಪರಿಣಾಮಕಾರಿ ನಿರ್ವಹಣೆಗಾಗಿ ಅಗತ್ಯ ಕ್ರಮಗಳ ಅನುಷ್ಠಾನದ ಮೇಲೆ ಗಮನ ಹರಿಸುವಂತೆ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.

ನಿಯಂತ್ರಣದ ಕ್ರಮಗಳು ಏನು?

ಕೊವಿಡ್ ಟೆಸ್ಟ್-ಟ್ರ್ಯಾಕ್ ಟ್ರೀಟ್-ವ್ಯಾಕ್ಸಿನೇಷನ್ ಮಾರ್ಗಸೂಚಿಗಳ ಪ್ರಕಾರ ಸಾಕಷ್ಟು ಮತ್ತು ಪೂರ್ವಭಾವಿ ಪರೀಕ್ಷೆಯ ಮೇಲೆ ನಿರಂತರ ಗಮನವನ್ನು ಅನುಸರಿಸಬೇಕು. ಹೊಸ ಕೋವಿಡ್ -19 ಪ್ರಕರಣಗಳ ಹೊಸ ಮತ್ತು ಉದಯೋನ್ಮುಖ ಕ್ಲಸ್ಟರ್‌ಗಳನ್ನು ಮೇಲ್ವಿಚಾರಣೆ ಮಾಡಬೇಕು.

ಅಷ್ಟೇ ಅಲ್ಲದೇ ಕೊರೊನಾ ಉಪತಳಿಗಳ ಮೇಲೆ ನಿರಂತವಾಗಿ ನಿಗಾ ವಹಿಸಿರಬೇಕು. ಇನ್ನೂ ಹಿರಿಯ ನಾಗರಿಕರನ್ನು ಹೆಚ್ಚಾಗ ಕಾಡುವ ಅನಾರೋಗ್ಯ (ILI) ಮತ್ತು SARI ಪ್ರಕರಣಗಳು ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಅಥವಾ ಸೋಂಕಿನ ಹರಡುವಿಕೆಯ ಮೊದಲೇ ಎಚ್ಚರಿಕೆ ವಹಿಸಬೇಕು. ಅದಕ್ಕಾಗಿ ಸೋಂಕಿನ ಸಂಕೇತಗಳನ್ನು ಮುಂಚಿತವಾಗೇ ಪತ್ತೆಹಚ್ಚಲು ನಿಯಮಿತವಾಗಿ ಮೀಸಲಾದ ಜ್ವರ ಚಿಕಿತ್ಸಾಲಯಗಳ ಮೂಲಕ ಕಾರ್ಯಾ ನಿರ್ವಹಿಸಬೇಕು. ಕೆಲವು ರಾಜ್ಯಗಳಲ್ಲಿ ಐಎಲ್‌ಐ ಸಾರಿ ಪ್ರಕರಣಗಳು ಈ ಹಿಂದೆ ಹೆಚ್ಚಾಗಿ ಕಂಡ ಬಂದಿದ್ದವರು ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು ಸುಮಾರು 1,18,694 ಕೊರೊನಾ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ. ಇದುವರೆಗೆ ಮಾಡಿರುವ ಒಟ್ಟು ಪರೀಕ್ಷೆಗಳ ಸಂಖ್ಯೆ 92.12 ಕೋಟಿಗೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+