ಭಾರತದ ಬಹು ತರಂಗಾಂತರ ಉಪಗ್ರಹ 'AstroSat'ನಿಂದ ಅಪರೂಪದ ಆವಿಷ್ಕಾರ
ನವದೆಹಲಿ,ಆಗಸ್ಟ್ 25: ಭಾರತದ ಬಹುತರಂಗಾಂತರ ಉಪಗ್ರಹ ಆಸ್ಟ್ರೋಸ್ಯಾಟ್ 'AstroSat' ಅಪರೂಪದ ಆವಿಷ್ಕಾರವನ್ನು ಮಾಡಿದೆ.
ಇದು ಭೂಮಿಯಿಂದ 9.3 ಶತಕೋಟಿ ದೂರದಲ್ಲಿರುವ ನಕ್ಷತ್ರಪುಂಜದಿಂದ ನೇರಳಾತೀತ ಬೆಳಕನ್ನು ಪತ್ತೆ ಮಾಡಿದೆ.
ಐಯುಸಿಎಎ ಸಹಾಯಕ ಪ್ರಾಧ್ಯಾಪಕ ಡಾ.ಕನಕ್ ಸಹಾ ಮಾತನಾಡಿ, ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ದೂರವನ್ನು ಪ್ರಕಾಶ್ ವರ್ಷ ಎಂದು ಕರೆಯಲಾಗುತ್ತದೆ.
ಇದು ಸುಮಾರು 95 ಟ್ರಿಲಿಯನ್ ಕಿಲೋಮೀಟರ್‌ಗೆ ಸಮಾನವಾಗಿರುತ್ತದೆ ಎಂದಿದ್ದಾರೆ. ತೀವ್ರವಾದ ನೇರಳಾತೀತ ಕಿರಣಗಳನ್ನು ಹುಡುಕುವ ಜಾಗತಿಕ ತಂಡದ ನೇತೃತ್ವ ಡಾ. ಕನಕ್ ಸಹಾ ವಹಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಅವರ ತಂಡ ನಡೆಸಿರುವ ಈ ಸಂಶೋಧನೆಯನ್ನು ಆಗಸ್ಟ್ 24 ರ 'ನೇಚರ್ ಆಸ್ಟ್ರೋನಮಿ' ಎಂಬ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ.

ಈ ತಂಡದಲ್ಲಿ ಯಾವ್ಯಾವ ದೇಶಗಳಿವೆ?
ಈ ತಂಡದಲ್ಲಿ ಭಾರತ, ಫ್ರಾನ್ಸ್,ಸ್ವಿಡ್ಜರ್‌ಲೆಂಡ್, ಅಮೆರಿಕ, ಜಪಾನ್ ಮತ್ತು ನೆದರ್‌ಲೆಂಡ್ ವಿಜ್ಞಾನಿಗಳು ಶಾಮೀಲಾಗಿದ್ದಾರೆ. ಈ ನೇರಳಾತೀತ ಕಿರಣಗಳು 2016 ರ ಅಕ್ಟೋಬರ್ ತಿಂಗಳಲ್ಲಿ ಸತತ 28 ದಿನಗಳವರೆಗೆ ಗೋಚರಿಸಿದ್ದವು. ಆದರೆ ಅವುಗಳನ್ನು ವಿಶ್ಲೇಷಿಸಲು ವಿಜ್ಞಾನಿಗಳಿಗೆ ಎರಡು ವರ್ಷಗಳಿಗಿಂತ ಹೆಚ್ಚು ಸಮಯ ಕಾಲಾವಕಾಶ ಬೇಕಾಯಿತು.

ಬಾಹ್ಯಾಕಾಶದ ಕತ್ತಲೆಯ ಆಳದಲ್ಲಿ ಬೆಳಕಿನ ಕಿರಣಗಳು
ಈ ಕುರಿತು ಹೇಳಿಕೆ ನೀಡಿರುವ IUCAA ನಿರ್ದೇಶಕ ಡಾ. ಸೋಮಕ್ ರಾಯ್ ಚೌಧರಿ, ದೂರದ ಬಾಹ್ಯಾಕಾಶದ ಕತ್ತಲೆಯ ಆಳದಲ್ಲಿ ಇಂದಿಗೂ ಕೂಡ ಬೆಳಕಿನ ಕಿರಣಗಳು ತೆಲಾಡುತ್ತಿವೆ. ಅವುಗಳ ಹುಡುಕಾಟಕ್ಕೆ ನಮಗೆ ಕಾಲಾವಕಾಶ ಬೇಕು. ಆದರೆ, ಈ ಎಲ್ಲ ಮಾಹಿತಿಗಳ ಆಧಾರದ ಮೇಲೆ ಭೊಮಿ ಹಾಗೂ ಬಾಹ್ಯಾಕಾಶದ ಉಗಮದ ಆರಂಭ, ಅವುಗಳ ವಯಸ್ಸು ಹಾಗೂ ಅವುಗಳ ಸಂಭವನೀಯ ಅಂತ್ಯದ ದಿನಾಂಕಗಳನ್ನು ಪತ್ತೆಹಚ್ಚಬಹುದು ಎಂದು ಹೇಳಿದ್ದಾರೆ.

ಹೊಸ ನಕ್ಷತ್ರಗಳ ಸೃಷ್ಟಿ
ಕೆಲವು ಸಣ್ಣ-ಪುಟ್ಟ ಗ್ಯಾಲಕ್ಸಿಗಳು ಕ್ಷೀರಪಥದ ನಕ್ಷತ್ರಪುಂಜಕ್ಕಿಂತ 10-100 ಪಟ್ಟು ವೇಗದಲ್ಲಿ ಹೊಸ ನಕ್ಷತ್ರಗಳನ್ನು ಸೃಷ್ಟಿಸುತ್ತವೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಬ್ರಹ್ಮಾಂಡದ ಶತಕೋಟಿ ಗ್ಯಾಲಕ್ಸಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿಕ್ಕ-ಚಿಕ್ಕ ಗೆಲಕ್ಸಿಗಳಿವೆ ಎಂದು ಎಂದು ಅವರು ವಿವರಿಸಿದ್ದಾರೆ, ಇದರ ದ್ರವ್ಯರಾಶಿ ಕ್ಷೀರಪಥದ ಗೆಲಕ್ಸಿಗಳಿಗಿಂತ 100 ಪಟ್ಟು ಕಡಿಮೆಯಾಗಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ.

ಗ್ಯಾಲೆಕ್ಸಿಗಳ ವಿಚಿತ್ರ ವರ್ತನೆ
ಎರಡು ಭಾರತೀಯ ದೂರದರ್ಶಕಗಳ ಮೂಲಕ ನಡೆಸಲಾಗಿರುವ ಈ ಅಧ್ಯಯನದಲ್ಲಿ ವಿಜ್ಞಾನಿಗಳು ಈ ಗ್ಯಾಲಕ್ಸಿಗಳ ವಿಚಿತ್ರ ವರ್ತನೆಯು ಅವುಗಳಲ್ಲಿ ಅಸ್ತವ್ಯಸ್ತಗೊಂಡ ಹೈಡ್ರೋಜನ್ ವಿತರಣೆ ಮತ್ತು ಗ್ಯಾಲಕ್ಸಿಗಳ ನಡುವಿನ ಘರ್ಷಣೆಯಿಂದಾಗಿ ಕಂಡುಬಂದಿದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಯಾವುದೇ ನಕ್ಷತ್ರದ ರಚನೆಗೆ ಹೈಡ್ರೋಜನ್ ಅತ್ಯಗತ್ಯ ಅಂಶವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಗ್ಯಾಲಕ್ಸಿಗಳಿಗೆ ಹೆಚ್ಚಿನ ಸಂಖ್ಯೆಯ ನಕ್ಷತ್ರಗಳನ್ನು ರೂಪಿಸಲು ಹೆಚ್ಚಿನ ಸಾಂಧ್ರತೆಯ ಹೈಡ್ರೋಜನ್ ಆವಶ್ಯಕವಾಗಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications