Jio Down: ಭಾರತದ ದೊಡ್ಡ ನೆಟ್‌ವರ್ಕ್ ಅಂಬಾನಿಯ ಜಿಯೋ ನೆಟ್‌ವರ್ಕ್ ಸಿಗ್ತಿಲ್ಲ,ಯಾಕೆ
Jio Down: ಭಾರತದ ಪ್ರತಿಷ್ಠಿತ ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಒಂದಾಗಿರುವ ಜಿಯೋ ನೆಟ್‌ವರ್ಕ್‌ನಲ್ಲಿ ತೊಡಕಾಗಿದ್ದು, ಮೊಬೈಲ್ ನೆಟ್ ವರ್ಕ್ ಸಿಗ್ತಿಲ್ಲ. ಅಂಬಾನಿಯ ಜಿಯೋ ಮೊಬೈಲ್ ಇಂಟರ್‌ನೆಟ್‌ನಲ್ಲಿ ಸಮಸ್ಯೆ ಆಗುತ್ತಿದೆ ಎಂದು ಹಲವು ಗ್ರಾಹಕರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಮಂಗಳವಾರ 11 ಗಂಟೆಯಿಂದ ಜಿಯೋ ಇಂಟರ್‌ನೆಟ್ ಸಮಸ್ಯೆ ಆಗಿರುವುದು ವರದಿಯಾಗಿದೆ. ಜಿಯೋ ಸಂಸ್ಥೆಯ ಮೊಬೈಲ್ ಇಂಟರ್ನೆಟ್ ಸೇವೆ ಸಿಗದೆ ಇರುವುದರಿಂದ ಮೊಬೈಲ್ ಸೇವೆ ಹಾಗೂ ಇಂಟರ್‌ನೆಟ್‌ನಲ್ಲಿ ಅಡಚಣೆ ಉಂಟಾಗುತ್ತಿದೆ.

ರಿಲಯನ್ಸ್‌ನ ಜಿಯೋ ಸೇವೆಯನ್ನು ಬಳಸುತ್ತಿರುವವರಿಗೆ ಮೊಬೈಲ್ ಇಂಟರ್ನೆಟ್ ಸೇವೆ ಸಿಗ್ತಾ ಇಲ್ಲ ಎನ್ನಲಾಗಿದೆ. ನೆಟ್‌ವರ್ಕ್ ಸಮಸ್ಯೆ ಆಗುತ್ತಿರುವ ಬಗ್ಗೆ ಜಿಯೋ ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳತ್ತಿದ್ದಾರೆ.
ಪೋನ್ ಸೇವೆಗೂ ತೊಡಕು
ಜಿಯೋ ನೆಟ್‌ವರ್ಕ್‌ನಿಂದ ಇಂಟರ್‌ನೆಟ್ ಮಾತ್ರವಲ್ಲದೆ ಪೋನ್ ಕರೆಗಳು ಸಹ ಮಾಡಲು ಸಾಧ್ಯವಾಗುತ್ತಿಲ್ಲ. ಪೋನ್ ಮಾಡುವ ಸಂದರ್ಭದಲ್ಲಿ ಸಂಪರ್ಕ ಕಡಿತವಾಗುತ್ತಿದೆ. ಇಲ್ಲವೇ ಸರಿಯಾಗಿ ಕೇಳಿಸುತ್ತಿಲ್ಲ ಎಂದು ಬಳಕೆದಾರರು ಹೇಳುತ್ತಿದ್ದಾರೆ.
ಭಾರತದಲ್ಲಿ ಮೊಬೈಲ್ ನೆಟ್‌ವರ್ಕಿಂಗ್ ವ್ಯವ್ಥೆಯಲ್ಲಿ ಬಾಕಿ ನೆಟ್‌ವರ್ಕಿಂಗ್ ಸಂಸ್ಥೆಗಳಿಗಿಂತಲೂ ಜಿಯೋ ಮುಂದಿದೆ. ಜಿಯೋದ ನೆಟ್‌ವರ್ಕ್ ದೇಶದಲ್ಲೇ ಮುಂದಿದೆ. ಜಿಯೋ ಮೊಬೈಲ್ ನೆಟ್‌ವರ್ಕ್‌ನೊಂದಿಗೆ JioFiber ಸೇವೆಯಲ್ಲೂ ಲೋಪವಾಗಿದೆ ಎನ್ನಲಾಗುತ್ತಿದೆ. ಆದರೆ, ನೆಟ್‌ವರ್ಕಿಂಗ್‌ನಲ್ಲಿ ಯಾವ ಕಾರಣಕ್ಕೆ ಸಮಸ್ಯೆ ಆಗಿದೆ ಎನ್ನುವ ಬಗ್ಗೆ ಇಲ್ಲಿಯವರೆಗೆ ಅಧಿಕೃತ ಪ್ರಕಟಣೆ ಬಂದಿಲ್ಲ.
ಜಿಯೋ ನೆಟ್‌ವರ್ಕ್: ಯಾರಿಗೆಲ್ಲ ಸಮಸ್ಯೆ
ಇನ್ನು ಮಂಗಳವಾರ ಮಧ್ಯಾಹ್ನದಿಂದಲೂ ಜಿಯೋ ಬಳಕೆದಾರರು ನೆಟ್‌ವರ್ಕ್‌ಗಾಗಿ ಪರದಾಡಿರುವುದು ವರದಿಯಾಗಿದೆ. ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ಜಿಯೋ ಭಾರತದಲ್ಲಿ ಹೊಸ ನೆಟ್‌ವರ್ಕ್ ಅನ್ನೇ ಸೃಷ್ಟಿ ಮಾಡಿದೆ. ರಿಲಯನ್ಸ್ ಜಿಯೋ ಉಳಿದ ಎಲ್ಲ ನೆಟ್‌ವರ್ಕ್‌ಗಳನ್ನು ಹಲವು ವಿಷಯಗಳಲ್ಲಿ ಬೀಟ್ ಮಾಡಿದೆ. ಈ ರೀತಿಯ ಬೃಹತ್ ನೆಟ್‌ವರ್ಕಿಂಗ್ ಸಿಸ್ಟಂನಲ್ಲಿ ಸಮಸ್ಯೆ ಆಗಿರುವುದು ಹಲವರಲ್ಲಿ ಅಚ್ಚರಿನ್ನು ಸಹ ಮೂಡಿಸಿದೆ.
ಮಂಗಳವಾರ ಬೆಳಿಗ್ಗೆಯಿಂದಲೇ ಜಿಯೋ ನೆಟ್‌ವರ್ಕ್‌ನಲ್ಲಿ ಅಲ್ಪ ಪ್ರಮಾಣದ ಸಮಸ್ಯೆ ಇತ್ತು. ಮಧ್ಯಾಹ್ನದ ವೇಳೆಗೆ ಇದು ಹೆಚ್ಚಾಗಿದೆ ಎಂದು ಹೇಳಲಾಗಿದೆ. ಇನ್ನು ಶೇಕಡ 67 ರಷ್ಟು ಚಂದಾದಾರರು ಸಿಗ್ನಲ್ ಸಮಸ್ಯೆ ಎದುರಿಸುತ್ತಿರುವುದಾಗಿಯೂ, ಶೇಕಡ 20ರಷ್ಟು ಜನ ಮೊಬೈಲ್ ನೆಟ್ ವರ್ಕ್ ಸಿಗದೆ ಸಂಕಷ್ಟ ಅನುಭವಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಶೇಕಡ 14 ರಷ್ಟು ಪ್ರಮಾಣದ ಜಿಯೋ ಫೈಬರ್ ಬಳಕೆದಾರರಿಗೂ ನೆಟ್‌ವರ್ಕ್ ಕೈಕೊಟ್ಟಿದೆ ಎಂದು ವರದಿಯಾಗಿದೆ.
ಕೈಕೊಟ್ಟ ಜಿಯೋ ನೆಟ್‌ವರ್ಕ್; ಟ್ರೋಲ್
ಜಿಯೋ ನೆಟ್‌ವರ್ಕ್ ಕೈಕೊಟ್ಟ ಬೆನ್ನಲ್ಲೇ ಜಿಯೋದ ಬಗ್ಗೆ ಟ್ರೋಲ್‌ಗಳ ಸುರಿಮಳೆ ಪ್ರಾರಂಭವಾಗಿದೆ. ದೇಶದಾದ್ಯಂತ ಜಿಯೋ ನೆಟ್‌ವರ್ಕಿಂಗ್‌ನಲ್ಲಿ ಸಮಸ್ಯೆ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಜಿಯೋ ನೆಟ್ ವರ್ಕಿಂಗ್ ವ್ಯತ್ಯಾಸವಾಗಿರುವುದರಿಂದ ನೆಟ್‌ವರ್ಕ್ ಸಂಬಂಧಿತ ಕೆಲಸಗಳು ಹಾಗೂ ಮೊಬೈಲ್ ಕರೆ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಈ ವಿಷಯಗಳನ್ನು ಇಟ್ಟುಕೊಂಡು ಜನ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.












Click it and Unblock the Notifications