ಹಾರಾಟಕ್ಕೆ ಅಣಿಯಾಗಿದೆ ಭಾರತದ ಮೊದಲ ಜೈವಿಕ ಇಂಧನ ವಿಮಾನ
ನವದೆಹಲಿ, ಆಗಸ್ಟ್ 24: ದೇಶದ ಮೊದಲ ಜೈವಿಕ ಇಂಧನ ಚಾಲಿತ ವಿಮಾನವು ಸೋಮವಾರ ಹಾರಾಟ ನಡೆಸುವ ನಿರೀಕ್ಷೆಯಿದೆ.
ಈ ಪರ್ಯಾಯ ಇಂಧನವನ್ನು ಬಳಸಿದ ಸ್ಪೈಸ್‌ಜೆಟ್ ಕ್ಯೂ-400 ವಿಮಾನವು ಡೆಹರಾಡೂನ್‌ನಿಂದ ದೆಹಲಿಗೆ ಹಾರಾಟ ನಡೆಸಲಿದೆ.
ಅಮೆರಿಕ ಮತ್ತು ಆಸ್ಟ್ರೇಲಿಯಾಗಳಂತಹ ಕೆಲವು ಮುಂದುವರಿದ ದೇಶಗಳು ಈಗಾಗಲೇ ಜೈವಿಕ ಇಂಧನ ಬಳಸಿದ ವಾಣಿಜ್ಯ ವಿಮಾನಗಳ ಹಾರಾಟಗಳ ಯಶಸ್ವಿ ಪ್ರಯೋಗ ನಡೆಸಿವೆ. ಇಂತಹ ಪ್ರಯತ್ನ ನಡೆಸುತ್ತಿರುವ ಅಭಿವೃದ್ಧಿಶೀಲ ದೇಶಗಳಲ್ಲಿ ಭಾರತವೂ ಒಂದಾಗಿದೆ.

ಸ್ಪೈಸ್ ಜೆಟ್‌ನ ವಿಮಾನವು ಜೈವಿಕ ಇಂಧನ ಬಳಸಿ ಡೆಹರಾಡೂನ್ ನಗರದ ಮೇಲೆ ಹತ್ತು ನಿಮಿಷ ಹಾರಾಟದ ಪರೀಕ್ಷೆ ನಡೆಸಿ ನಿಲ್ದಾಣಕ್ಕೆ ಮರಳಲಿದೆ. ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಕಂಡುಬರದಿದ್ದರೆ ವಿಮಾನವು ದೆಹಲಿಯತ್ತ ಪ್ರಯಾಣ ಬೆಳೆಸಲಿದೆ.
ಡಿಜಿಸಿಎ ಸೇರಿದಂತೆ ವಿವಿಧ ನಿಯಂತ್ರಣ ಸಂಸ್ಥೆಗಳ ಅಧಿಕಾರಿಗಳು ಈ ವಿಮಾನ ಪರೀಕ್ಷೆಯ ಫಲಿತಾಂಶ ತಿಳಿದುಕೊಳ್ಳಲು ವಿಮಾನವೇರಲಿದ್ದಾರೆ.
ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ತಗ್ಗಿಸುವ ಸಲುವಾಗಿ ಭಾರತ ಜೈವಿಕ ಇಂಧನಕ್ಕೆ ಆದ್ಯತೆ ನೀಡಲು ಮುಂದಾಗಿದೆ.












Click it and Unblock the Notifications