ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 43 ಲಕ್ಷದ ಗಡಿ ದಾಟಿತು ಕೊವಿಡ್-19 ಪ್ರಕರಣಗಳ ಸಂಖ್ಯೆ

|
Google Oneindia Kannada News

ನವದೆಹಲಿ, ಸಪ್ಟೆಂಬರ್.08: ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 43 ಲಕ್ಷದ ಗಡಿ ದಾಟಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಬಿಡುಗಡೆಗೊಳಿಸಿದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 75,809 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 42,80,423ಕ್ಕೆ ಏರಿಕೆಯಾಗಿತ್ತು.

ಮಂಗಳವಾರ ರಾತ್ರಿ 11 ಗಂಟೆಯ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ 60683 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಒಟ್ಟು ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು 43,38,267ಕ್ಕೆ ಏರಿಕೆಯಾಗಿದೆ.

ಮೈ ಮೇಲೆ ಸೂರ್ಯನ ಕಿರಣ ಬೀಳದಿದ್ದರೆ ಕೊರೊನಾವೈರಸ್ ಪಾಸಿಟಿವ್! ಮೈ ಮೇಲೆ ಸೂರ್ಯನ ಕಿರಣ ಬೀಳದಿದ್ದರೆ ಕೊರೊನಾವೈರಸ್ ಪಾಸಿಟಿವ್!

ದೇಶದಲ್ಲಿ 686 ಜನರು ಮಹಾಮಾರಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆಯು 73502ಕ್ಕೆ ಏರಿಕೆಯಾಗಿದೆ. 33,77,530 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದರೆ, 8,87,235 ಸಕ್ರಿಯ ಪ್ರಕರಣಗಳಿರುವುದು ದೃಢಪಟ್ಟಿದೆ.

Indias Coronavirus Case Tally Crosses 43 Lakh-Mark

ಮಂಗಳವಾರ ಪ್ರತಿರಾಜ್ಯದಲ್ಲೂ ಸಾವಿರ ಸಾವಿರ ಪ್ರಕರಣ:

ಭಾರತದಲ್ಲಿ ಮಂಗಳವಾರ ಪ್ರತಿರಾಜ್ಯಗಳಲ್ಲೂ ಸಾವಿರ ಸಾವಿರ ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಮಹಾರಾಷ್ಟ್ರದಲ್ಲೇ 20131 ಹೊಸ ಕೊವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಆಂಧ್ರ ಪ್ರದೇಶ 10,600, ಕರ್ನಾಟಕದ 7866, ಉತ್ತರ ಪ್ರದೇಶ 6743, ತಮಿಳುನಾಡು 5684, ಮಧ್ಯಪ್ರದೇಶ 1864, ಪಂಜಾಬ್ 1964, ಗುಜರಾತ್ 1295, ಪಶ್ಚಿಮ ಬಂಗಾಳ 3091, ಜಮ್ಮು-ಕಾಶ್ಮೀರ 1355 ಕೊವಿಡ್-19 ಪ್ರಕರಣಗಳು ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಮಾಹಿತಿ ನೀಡಿವೆ.

English summary
India's Coronavirus Case Tally Crosses 43 Lakh-Mark After 60683 New Cases Found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X