ಎವರೆಸ್ಟ್ ಹತ್ತಿದ್ದ ಚಂದಾ, ಕಾಂಚನಜುಂಗಾದಲ್ಲಿ ನಾಪತ್ತೆ
ಡಾರ್ಜಲಿಂಗ್, ಮೇ.22: ವಿಶ್ವದ ಅತಿ ಎತ್ತರದ ಪರ್ವತ ಎವರೆಸ್ಟ್ ಆರೋಹಣ ಮಾಡಿದ್ದ ಪಶ್ಚಿಮ ಬಂಗಾಳ ಮೂಲದ ಚಂದಾ ಗಯೇನ್ ಅವರು ಕಾಂಚನಜುಂಗಾ ಪರ್ವತಾರೋಹಣ ವೇಳೆ ನಾಪತ್ತೆಯಾಗಿರುವ ಘಟನೆ ಸಂಭವಿಸಿದೆ.
ಮೌಂಟ್ ಎವರೆಸ್ಟ್ ಏರಿದ ಎರಡನೇ ಮಹಿಳೆ ಎಂಬ ಸಾಹಸಕ್ಕೆ ಪಾತ್ರವಾಗಿದ್ದ ಚಂದಾ ಅವರು ಕಾಂಚನಜುಂಗಾ ಪರ್ವತಾರೋಹಣ ವೇಳೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಪ್ರಕಟಿಸಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೇಪಾಳ ಸರ್ಕಾರಕ್ಕೂ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿ ನೆರವು ಕೋರಿದ್ದಾರೆ.

ಚಂದಾ ಅವರ ಹುಡುಕಾಟಕ್ಕೆ ವಿಶೇಷ ಪಡೆ ಬಳಸಿಕೊಳ್ಳಲಾಗುತ್ತಿದ್ದು, ರಕ್ಷಣಾ ಕಾರ್ಯ ತ್ವರಿತಗತಿಯಲ್ಲಿ ಸಾಗಿದೆ ಎಂದು ವಸತಿ ಸಚಿವ ಅರುಪ್ ಬಿಸ್ವಾಸ್ ಅವರು ಕೋಲ್ಕತ್ತಾದಲ್ಲಿ ಹೇಳಿದ್ದಾರೆ. ಗಯೇನ್ ಅವರು ಇಬ್ಬರು ಶೆರ್ಪಾಗಳ ಜತೆ ಕಾಂಚನಜುಂಗಾ ಪರ್ವತ ಹತ್ತಲು ಆರಂಭಿಸಿದ್ದರು. ಸಮುದ್ರಮಟ್ಟದಿಂದ ಸುಮಾರು 28,169 ಅಡಿ ಎತ್ತರದಲ್ಲಿರುವ ಕಾಂಚನಜುಂಗಾದಲ್ಲಿ ಐದು ಶ್ರೇಣಿಗಳಿದ್ದು ಭಾರತದ ಸಿಕ್ಕಿಂ ಹಾಗೂ ನೇಪಾಳದ ಟಾಪಲ್ ಜುಂಗ್ ಜಿಲ್ಲೆಗಳಿಗೆ ಸೇರುತ್ತದೆ. ಮೌಂಟ್ ಎವೆರೆಸ್ಟ್ ಎತ್ತರವನ್ನು ಅಳೆಯುವುದಕ್ಕೂ ಮೊದಲು ಕಾಂಚನಜುಂಗಾವನ್ನೇ ವಿಶ್ವದ ಅತಿ ಎತ್ತರ ಪರ್ವತ ಎಂದು ಪರಿಗಣಿಸಲಾಗುತ್ತಿತ್ತ್ತು.
2013ರ ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದಿಂದ ಮೌಂಟ್ ಎವರೆಸ್ಟ್ ಏರಿದ ಎರಡನೇ ಮಹಿಳೆ ಎಂಬ ಗೌರವಕ್ಕೆ ಚಂದಾ ಗಯೇನ್ ಅವರು ಪಾತ್ರವಾಗಿದ್ದರು. ಇದಕ್ಕೂ ಮುನ್ನ 1993 ಮೇ 22 ರಂದು ದಾರ್ಜಲಿಂಗ್ ಮೂಲದ ಕುಂಗಾ ಭೂತಿಯಾ ಅವರು ಮೊದಲ ಬಾರಿಗೆ ವಿಶ್ವದ ಅತಿ ಎತ್ತರದ ಪರ್ವತ ಶ್ರೇಣಿಯ ಮೇಲೆ ಕಾಲೂರಿ ದಾಖಲೆ ಬರೆದಿದ್ದರು.
ಕಾಂಚನಜುಂಗಾ ಪರ್ವತಾರೋಹಣ ವಿಷಯಕ್ಕೆ ಬಂದರೆ , 1955ರಲ್ಲಿ, ಜೋ ಬ್ರೌನ್ ಮತ್ತು ಜಾರ್ಜ್ ಬ್ಯಾಂಡ್‌ರು ಮೇ 25ರಂದು ಮೊಟ್ಟಮೊದಲ ಬಾರಿಗೆ ಪಾದಾರ್ಪಣೆ ಮಾಡಿದರು. 1998ರಲ್ಲಿ ಜಿನೆಟ್ಟೆ ಹ್ಯಾರಿಸನ್ ಶಿಖರವನ್ನು ತಲುಪಿದ ಪ್ರಥಮ ಮಹಿಳೆಯಾಗಿದ್ದಾರೆ. ನಂತರ ಸ್ಪೇನ್, ನಾರ್ವೆ, ಪೊಲೆಂಡ್ ನ ಮಹಿಳೆಯರು ಪರ್ವತದ ಸಮೀಟ್ ಪೂರ್ಣಗೊಳಿಸಿದ್ದಾರೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications