ದಸರಾ, ದೀಪಾವಳಿಗಾಗಿ ವಿಶೇಷ ರೈಲುಗಳ ಸಂಚಾರ
ಬೆಂಗಳೂರು, ಸೆ. 20: ದೇಶದೆಲ್ಲೆಡೆ ಸೆಪ್ಟೆಂಬರ್ 21ರಿಂದ ದಸರಾ ಸಂಭ್ರಮ ಆರಂಭವಾಗಲಿದೆ. ದಸರಾ ಹಾಗೂ ಮುಂದಿನ ತಿಂಗಳಿನ ದೀಪಾವಳಿ ಹಬ್ಬದ ಪ್ರಯುಕ್ತ ರೈಲ್ವೆ ಇಲಾಖೆಯು ವಿಶೇಷ ರೈಲುಗಳನ್ನು ಸಂಚಾರಕ್ಕೆ ಮುಕ್ತಗೊಳಿಸಿದೆ.
ಸೆಪ್ಟೆಂಬರ್ 22ರಿಂದ ವಿಶೇಷ ರೈಲುಗಳು ಸಂಚಾರ ಶುರುವಾಗಲಿದ್ದು, ಅಕ್ಟೋಬರ್ 30ರವರೆಗೆ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ ಪಡೆಯಬಹುದಾಗಿದೆ.

ದೇಶದಾದ್ಯಂತ 4 ಸಾವಿರ ವಿಶೇಷ ರೈಲುಗಳು ಸಂಚರಿಸಲಿವೆ. ಹಲವೆಡೆ ವಿಶೇಷ ನಿಲುಗಡೆಯನ್ನು ನೀಡಲಾಗುತ್ತಿದೆ. ವಿಶೇಷ ರೈಲಿನಲ್ಲಿ ಸುರಕ್ಷತೆ ಹಾಗೂ ಸೌಕರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು. ನವರಾತ್ರಿ, ದುರ್ಗಾ ಪೂಜೆ, ದೀಪಾವಳಿ, ಛಠ್ ವ್ರತ ಹಬ್ಬದ ಹಿನ್ನೆಲೆಯಲ್ಲಿ ಸುಮಾರು 4 ಸಾವಿರ ರೈಲುಗಳು ಹೆಚ್ಚುವರಿಯಾಗಿ ಸಂಚರಿಸಲಿವೆ ಎಂದು ರೈಲ್ವೆ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ.
306 ನಿಯಮಿತ ರೈಲಿನ ಬೋಗಿಯಲ್ಲಿ ಹೆಚ್ಚಳ ಮಾಡಲಾಗಿದೆ. 9,500 ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿದೆ. ಮೈಸೂರು ಕೆಎಸ್ ಆರ್ ಬೆಂಗಳೂರು ಅನ್ ರಿಸರ್ವ್ಡ್ ವಿಶೇಷ ರೈಲು( ನಂ 06215) ವಿಶೇಷ ರೈಲು ವಿಜಯದಶಮಿ ದಿನದಂದು ಸಂಚರಿಸಲಿದೆ. ಸೆ.30ರಂದು 10.30PMಗೆ ಮೈಸೂರು ಬಿಟ್ಟು ಕೆಎಸ್ಆರ್ ಬೆಂಗಳೂರು ನಿಲ್ದಾಣಕ್ಕೆ 1.30 AM ಗೆ ತಲುಪಲಿದೆ.
Photos : 407ನೇ ಮೈಸೂರು ದಸರಾಗೆ ವೈಭವದ ಚಾಲನೆ
ಅಕ್ಟೋಬರ್ 01ರಂದು ನಂ 06216 ರೈಲು ಬೆಂಗಳೂರನ್ನು 2 AM ಗೆ ಬಿಟ್ಟು ಮೈಸೂರನ್ನು 4.45 AM ಗೆ ತಲುಪಲಿದೆ.
ಇದಲ್ಲದೆ ಯಶವಂತಪುರ- ಕಣ್ಣೂರು ಡೈಲಿ ಎಕ್ಸ್ ಪ್ರೆಸ್ ಗೆ ಹೆಚ್ಚುವರಿ ಬೋಗಿಗಳು, ಕಾಚಿಗುಡ, ಕಾಕಿನಾಡ, ವಿಶಾಖಪಟ್ಟಣಂಗೆ ಹೆಚ್ಚುವರಿ ರೈಲುಗಳು ಸಂಚರಿಸಲಿವೆ.












Click it and Unblock the Notifications