ಮೇ.11ರಿಂದ ಪ್ಯಾಸೆಂಜರ್ ರೈಲುಗಳಿಗೆ ಆನ್ ಲೈನ್ ಬುಕ್ಕಿಂಗ್ ಸೇವೆ
ನವದೆಹಲಿ, ಮೇ.10: ನೊವೆಲ್ ಕೊರೊನಾ ವೈರಸ್ ನಿಯಂತ್ರಿಸುವ ಉದ್ದೇಶದಿಂದ ಭಾರತ ಲಾಕ್ ಡೌನ್ ಘೋಷಿಸಿದ ನಂತರ ಭಾರತೀಯ ರೈಲ್ವೆ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಸುಮಾರ ಒಂದೂವರೆ ತಿಂಗಳ ನಂತರ ಪ್ಯಾಸೆಂಜರ್ ರೈಲ್ವೆ ಸೇವೆ ಆರಂಭಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.
ಮೇ.11ರ ಸೋಮವಾರದಿಂದ ಪ್ಯಾಸೆಂಜರ್ ರೈಲುಗಳಿಗೆ ಆನ್ ಲೈನ್ ರಿಸರ್ವೇಶನ್ ಸೇವೆ ಆರಂಭಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಭಾರತೀಯ ರೈಲ್ವೆ ಇಲಾಖೆಯ ಅಧಿಕೃತ ವೆಬ್ ಸೈಟ್ ಐಆರ್ ಸಿಟಿಸಿಯಲ್ಲಿ ಸಂಜೆ 4 ಗಂಟೆಯಿಂದ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ನೀಡಲಾಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿ, ದಿಬ್ರುಘರ್, ಅಗರ್ತಲಾ, ಹೌರಾ, ಪಾಟ್ನಾ, ಬಿಸಲ್ ಪುರ್, ರಾಂಚಿ, ಭುವನೇಶ್ವರ್, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡಗಾವ್, ಕೇಂದ್ರ ಮುಂಬೈ, ಅಹ್ಮದಾಬಾದ್ ಹಾಗೂ ಜಮ್ಮುವಿನಲ್ಲಿ ರೈಲ್ವೆ ಸೇವೆ ಆರಂಭಿಸಲು ತೀರ್ಮಾನಿಸಲಾಗಿದೆ.

ಮೇ.12ರಿಂದ ಭಾರತೀಯ ರೈಲ್ವೆ ಸೇವೆ ಆರಂಭ:
ಭಾರತ ಲಾಕ್ ಡೌನ್ ಘೋಷಣೆ ಬಳಿಕ ಸ್ಥಗಿತಗೊಂಡ ರೈಲ್ವೆ ಸೇವೆಯನ್ನು ಆರಂಭಿಸಲು ಭಾರತೀಯ ರೈಲ್ವೆ ಇಲಾಖೆ ತೀರ್ಮಾನಿಸಿದೆ. ಸೋಮವಾರದಿಂದ ಬುಕ್ಕಿಂಗ್ ಸೇವೆ ಆರಂಭವಾದ ಮರುದಿನ ಅಂದರೆ ಮೇ.12ರ ಮಂಗಳವಾರದಿಂದಲೇ 30 ರೈಲುಗಳು ಸಂಚಾರ ಆರಂಭಿಸಲಿವೆ ಎಂದು ಭಾರತೀಯ ರೈಲ್ವೆ ಸಚಿವಾಲಯವು ಸ್ಪಷ್ಟಪಡಿಸಿದೆ.












Click it and Unblock the Notifications