ಮುಂಬೈ - ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸಮಯ ಪರಿಷ್ಕರಣೆ

ಮುಂಬೈ, ನ. 3: ಭಾರತೀಯ ರೈಲ್ವೆಯು ಮುಂಬೈ - ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸಮಯವನ್ನು ಮತ್ತೊಮ್ಮೆ ಪರಿಷ್ಕರಿಸಿದೆ. ಮುಂಬೈ ಸೆಂಟ್ರಲ್-ಗಾಂಧಿನಗರ (ರೈಲು ಸಂಖ್ಯೆ 20901/20902)ಕ್ಕೆ ಚಲಿಸುವ ವಂದೇ ಭಾರತ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಸಮಯವನ್ನು ನವೆಂಬರ್ 5 ರಿಂದ ಪರಿಷ್ಕರಿಸಲಾಗುತ್ತದೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ.

ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್, ಬಹು ನಿರೀಕ್ಷಿತ ಹೊಸದಾಗಿ ನಿರ್ಮಿಸಲಾದ ಸೆಮಿ-ಹೈ ಸ್ಪೀಡ್ ರೈಲು, ಅಂತಿಮವಾಗಿ ವಾಣಿಜ್ಯ ಚಾಲನೆ ಶುರು ಮಾಡಿದೆ. ಇದು ಆರಾಮದಾಯಕ ಮತ್ತು ವರ್ಧಿತ ರೈಲು ಪ್ರಯಾಣದ ಅನುಭವದ ಹೊಸ ಯುಗಕ್ಕೆ ನಾಂದಿ ಹಾಡಿದೆ. ಈ ರೈಲು ಗಾಂಧಿನಗರ ಮತ್ತು ಮುಂಬೈ ನಡುವೆ ಸಂಚರಿಸಲಿದ್ದು, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳ ರಾಜಧಾನಿಗಳನ್ನು ಸಂಪರ್ಕಿಸುತ್ತದೆ.

ಸಮಯದ ಬದಲಾವಣೆಗಳ ವಿವರಗಳು ಕೆಳಕಂಡಂತಿವೆ:-

ಸಮಯದ ಬದಲಾವಣೆಗಳ ವಿವರಗಳು ಕೆಳಕಂಡಂತಿವೆ:-

20901 ಎಂಬ ಸಂಖ್ಯೆಯ ಮುಂಬೈ ಸೆಂಟ್ರಲ್ - ಗಾಂಧಿನಗರ ಕ್ಯಾಪಿಟಲ್ ವಂದೇ ಭಾರತ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು 08.04/08.06 ಗಂಟೆಗೆ ಬದಲಾಗಿ 08.00/08.02 ಗಂಟೆಗೆ ವಾಪಿ ನಿಲ್ದಾಣವನ್ನು ತಲುಪುತ್ತದೆ.

ಸೂರತ್ ನಿಲ್ದಾಣವನ್ನು 09.00/09.03 ಗಂಟೆಗೆ ಬದಲಾಗಿ 08.55/08.58 ಗಂಟೆಗೆ ಅದೇ ರೀತಿ ಹಿಂದಿರುಗುವ ದಿಕ್ಕಿನಲ್ಲಿ 20902 ಎಂಬ ಸಂಖ್ಯೆಯ ಗಾಂಧಿನಗರ ರಾಜಧಾನಿ - ಮುಂಬೈ ಸೆಂಟ್ರಲ್ ವಂದೇ ಭಾರತ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ವಡೋದರಾ ನಿಲ್ದಾಣಕ್ಕೆ 15.50/15.55 ಗಂಟೆಗೆ ಬದಲಾಗಿ 15.53/15.56 ಗಂಟೆಗೆ ತಲುಪುತ್ತದೆ. ವಾಪಿ ನಿಲ್ದಾಣವನ್ನು 18.38/18.40 ಗಂಟೆಗೆ ಬದಲಾಗಿ 18.13/18.15 ಗಂಟೆಗೆ ತಲುಪುತ್ತದೆ. ಇತರ ನಿಲ್ದಾಣಗಳಲ್ಲಿ ರೈಲಿನ ಸಮಯ ಬದಲಾಗದೆ ಉಳಿಯುತ್ತದೆ.

ಹೊಸ ಸಮಯ ಅಕ್ಟೋಬರ್ 5 ರಿಂದ ಜಾರಿ

ಹೊಸ ಸಮಯ ಅಕ್ಟೋಬರ್ 5 ರಿಂದ ಜಾರಿ

ಕಳೆದ ತಿಂಗಳು ಪಶ್ಚಿಮ ರೈಲ್ವೆ (ಡಬ್ಲ್ಯುಆರ್) ಹೊಸದಾಗಿ ಪರಿಚಯಿಸಲಾದ ಮುಂಬೈ-ಗಾಂಧಿನಗರ ವಂದೇ ಭಾರತ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣದ ಸಮಯವನ್ನು ಅಕ್ಟೋಬರ್ 5 ರಿಂದ ಜಾರಿಗೆ ತರಲು ನಿರ್ಧರಿಸಿದೆ.

ವಂದೇ ಭಾರತ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಮುಂಬೈ ಸೆಂಟ್ರಲ್‌ನಿಂದ ಗುಜರಾತ್‌ನ ಗಾಂಧಿನಗರದವರೆಗಿನ ದೂರವನ್ನು ಕ್ರಮಿಸಲು ಐದು ನಿಮಿಷಗಳಷ್ಟು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಗಾಂಧಿನಗರದಿಂದ ಮುಂಬೈ ಸೆಂಟ್ರಲ್‌ಗೆ 20 ನಿಮಿಷ ಮುಂಚಿತವಾಗಿ ತಲುಪುತ್ತದೆ ಎಂದು ಪಶ್ಚಿಮ ರೈಲ್ವೆ ಮಂಗಳವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಪರಿಷ್ಕೃತ ವೇಳಾಪಟ್ಟಿ

ಪರಿಷ್ಕೃತ ವೇಳಾಪಟ್ಟಿ

ಅಕ್ಟೋಬರ್ 1 ರಂದು ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಬಳಿಕ ವಂದೇ ಭಾರತ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಓಡಾಟವನ್ನು ಪ್ರಾರಂಭಿಸಿತು. ಮುಂಬೈ ಸೆಂಟ್ರಲ್‌ನಿಂದ ಬೆಳಗ್ಗೆ 6.10ಕ್ಕೆ ಮತ್ತು ಗಾಂಧಿನಗರದಿಂದ ಮಧ್ಯಾಹ್ನ 2.05ಕ್ಕೆ ರೈಲು ಹೊರಡುವ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಎಲ್ಲಾ ಮಾರ್ಗದ ನಿಲ್ದಾಣಗಳು ಮತ್ತು ಗಮ್ಯಸ್ಥಾನಗಳಲ್ಲಿ ರೈಲಿನ ಆಗಮನದ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಗಾಂಧಿನಗರಕ್ಕೆ ಹೋಗುವ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಸ್ತುತ 12.30 ರ ಬದಲಿಗೆ 12.25 ಕ್ಕೆ ತನ್ನ ಗಮ್ಯಸ್ಥಾನವನ್ನು ತಲುಪುತ್ತದೆ. ಸದ್ಯದ ಸಮಯ ರಾತ್ರಿ 8.35ಕ್ಕೆ ಬದಲಾಗಿ ರಾತ್ರಿ 8.15ಕ್ಕೆ ಮುಂಬೈ ಸೆಂಟ್ರಲ್ ತಲುಪಲಿದೆ.

ಮುಂಬೈ - ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್‌ ಟಿಕೆಟ್ ದರ

ಮುಂಬೈ - ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್‌ ಟಿಕೆಟ್ ದರ

ಜೊತೆಗೆ ಮಹಾರಾಷ್ಟ್ರ ಮತ್ತು ಗುಜರಾತ್‌ನ ರಾಜಧಾನಿ ನಗರಗಳನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮೂರನೇ ರೈಲು ಆಗಿದೆ. ಅಂತಹ ಮೊದಲ ರೈಲನ್ನು ನವದೆಹಲಿ-ವಾರಣಾಸಿ ಮಾರ್ಗದಲ್ಲಿ ಪ್ರಾರಂಭಿಸಿದರೆ, ಎರಡನೆಯದನ್ನು ನವದೆಹಲಿ-ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಮಾರ್ಗದಲ್ಲಿ ಪ್ರಾರಂಭಿಸಲಾಯಿತು. WR ವಕ್ತಾರ ಠಾಕೂರ್ ಪ್ರಕಾರ, ಪ್ರಯಾಣಿಕರು ಗಾಂಧಿನಗರ-ಮುಂಬೈ ಸೆಂಟ್ರಲ್ ಪ್ರಯಾಣಕ್ಕಾಗಿ ಚೇರ್ ಕಾರ್ ಟಿಕೆಟ್‌ಗೆ 1,275 ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ಟಿಕೆಟ್‌ಗೆ 2,455 ಅನ್ನು ಪಾವತಿಸಬೇಕಾಗುತ್ತದೆ. ಮುಂಬೈ ಸೆಂಟ್ರಲ್-ಗಾಂಧಿನಗರ ಪ್ರಯಾಣಕ್ಕೆ ಚೇರ್ ಕಾರ್ ಟಿಕೆಟ್ 1,440 ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ಟಿಕೆಟ್ ಬೆಲೆ 2,650 ಇದೆ. ಎರಡು ಪ್ರಯಾಣದ ದರದಲ್ಲಿ ಊಟೋಪಚಾರದ ಶುಲ್ಕದಲ್ಲಿ ವ್ಯತ್ಯಾಸವಿರುತ್ತದೆ.

ವಿಮಾನ ಪ್ರಯಾಣದಂತೆ ಅನುಭವ!

ವಿಮಾನ ಪ್ರಯಾಣದಂತೆ ಅನುಭವ!

ಈ ರೈಲಿನ ವೈಶಿಷ್ಟ್ಯಗಳ ಕುರಿತು ಮಾತನಾಡಿದ ಪಶ್ಚಿಮ ರೈಲ್ವೇ ವಲಯದ ಸಿಪಿಆರ್‌ಒ ಸುಮಿತ್ ಠಾಕೂರ್, "ವಂದೇ ಭಾರತ್ ಎಕ್ಸ್‌ಪ್ರೆಸ್ ಅಸಂಖ್ಯಾತ ಉನ್ನತ ಸೌಕರ್ಯಗಳನ್ನು ಒದಗಿಸುತ್ತದೆ, ಇದು ಪ್ರಯಾಣಿಕರಿಗೆ ಪ್ರಯಾಣದ ಅನುಭವ ಮತ್ತು ಸುಧಾರಿತ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಕವಚ್ ತಂತ್ರಜ್ಞಾನ ಅಂದರೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆ ಹೊಂದಿದೆ'' ಎಂದು ಹೇಳಿದ್ದಾರೆ.

ಈ ರೈಲು ಪ್ರಯಾಣಿಕರಿಗೆ ವಿಮಾನ ಪ್ರಯಾಣದ ಮಾದರಿಯ ಅನುಭವ ನೀಡುತ್ತದೆ. ದೇಶೀಯವಾಗಿ ನಿರ್ಮಾಣವಾಗಿರುವ ಈ ರೈಲು ಅಪಘಾತ ನಿರೋಧಕ ವ್ಯವಸ್ಥೆಯನ್ನು ಹೊಂದಿದೆ. 160 kmph ಗರಿಷ್ಠ ಕಾರ್ಯಾಚರಣೆಯ ವೇಗಕ್ಕಾಗಿ ಸಂಪೂರ್ಣವಾಗಿ ಮೋಟಾರ್‌ಗಳನ್ನು ಹೊಂದಿರುವ ಬೋಗಿಗಳನ್ನು ರೈಲು ಒಳಗೊಂಡಿದೆ, ಜೊತೆಗೆ ಸುಧಾರಿತ ಅತ್ಯಾಧುನಿಕ ಸಸ್ಪೆನ್ಷನ್ ವ್ಯವಸ್ಥೆಯು ಸುಗಮ ಮತ್ತು ಸುರಕ್ಷಿತ ಸವಾರಿ ಮತ್ತು ಪ್ರಯಾಣಿಕರಿಗೆ ಉತ್ತಮ ಸವಾರಿ ಅನುಭವವನ್ನು ನೀಡುತ್ತದೆ. ಪ್ರತಿ ಕೋಚ್‌ನಲ್ಲಿ 32 ಇಂಚಿನ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದ್ದು, ಪ್ರಯಾಣಿಕರ ಮಾಹಿತಿ ಮತ್ತು ಇನ್ಫೋಟೈನ್‌ಮೆಂಟ್ ಅನ್ನು ಒದಗಿಸುತ್ತದೆ. ದಿವ್ಯಾಂಗ ಸ್ನೇಹಿ ವಾಶ್‌ರೂಮ್‌ಗಳು ಮತ್ತು ಬ್ರೈಲ್ ಅಕ್ಷರಗಳಲ್ಲಿ ಸೀಟ್ ಸಂಖ್ಯೆಗಳನ್ನು ಹೊಂದಿರುವ ಸೀಟ್ ಹ್ಯಾಂಡಲ್ ಅನ್ನು ಸಹ ಒದಗಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+