400 ವಿಶೇಷ ರೈಲನ್ನು ಓಡಿಸಲಿದೆ ಭಾರತೀಯ ರೈಲ್ವೆ
ನವದೆಹಲಿ, ಏಪ್ರಿಲ್ 30 : ಲಾಕ್ ಡೌನ್‌ನಿಂದ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರ ಸಂಚಾರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಬಸ್‌ಗಳಲ್ಲಿ ಕಾರ್ಮಿಕರನ್ನು ಕಳುಹಿಸಲು ತೀರ್ಮಾನಿಸಲಾಗಿದೆ. ಆದರೆ, ಕೆಲವು ರಾಜ್ಯಗಳು ವಿಶೇಷ ರೈಲುಗಳ ಸಂಚಾರಕ್ಕಾಗಿ ಬೇಡಿಕೆ ಇಟ್ಟಿವೆ.
Recommended Video
ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಇದ್ದರೆ ರೈಲುಗಳ ಮೂಲಕ ಕಳಿಸಲು ಚಿಂತನೆ ನಡೆಸಲಾಗುತ್ತಿದೆ. ಭಾರತೀಯ ರೈಲ್ವೆ ಇದಕ್ಕಾಗಿ 400 ವಿಶೇಷ ರೈಲುಗಳನ್ನು ಓಡಿಸಲಿದ್ದು, ಯೋಜನೆ ತಯಾರಾಗುತ್ತಿದೆ.
ಲಾಕ್ ಡೌನ್ ಹಿನ್ನಲೆಯಲ್ಲಿ ಪ್ರಯಾಣಿಕ ರೈಲುಗಳ ಸಂಚಾರ ಮೇ 3ರ ತನಕ ರದ್ದಾಗಿದೆ. ಕಾರ್ಮಿಕರನ್ನು ಹೇಗೆ ವಾಪಸ್ ಕಳಿಸಬಹುದು ಎಂದು ರಾಜ್ಯಗಳು ಯೋಜನೆ ಸಿದ್ಧಪಡಿಸಿ ಇಲಾಖೆಗೆ ಸಲ್ಲಿಕೆ ಮಾಡಲಿವೆ. ಬಳಿಕ ವಿಶೇಷ ರೈಲು ಸಂಚಾರದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
ಈಗ ಸಿದ್ಧವಾಗಿರುವ ಯೋಜನೆ ಪ್ರಕಾರ ಹವಾನಿಯಂತ್ರಣ ರಹಿತ ವಿಶೇಷ ರೈಲುಗಳು ಕಾರ್ಮಿಕರನ್ನು ಕರೆದುಕೊಂಡು ಹೋಗಲಿವೆ. ಒಂದು ರೈಲಿನಲ್ಲಿ ಕೇವಲ 1000 ಜನರು ಮಾತ್ರ ಪ್ರಯಾಣ ಮಾಡಬಹುದಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತದೆ.

ಬಸ್‌ನಲ್ಲಿ ಎಷ್ಟು ಜನ
ಸಾಮಾಜಿಕ ಅಂತರ ಕಾಯ್ದುಕೊಂಡು ಬಸ್‌ನಲ್ಲಿ 25 ಕಾರ್ಮಿಕರು ಪ್ರಯಾಣ ಬೆಳೆಸಬಹುದಾಗಿದೆ. ಆದರೆ, ರೈಲಿನಲ್ಲಿ ಹೆಚ್ಚು ಜನರು ಪ್ರಯಾಣ ಮಾಡಬಹುದು. ಕಾರ್ಮಿಕರು ರೈಲು ಹತ್ತುವುದಕ್ಕೂ ಮೊದಲು ಸ್ಕ್ರೀನಿಂಗ್ ಮಾಡುವುದು, ರೈಲನ್ನು ಸ್ಯಾನಿಟೈಸರ್ ಮೂಲಕ ಸ್ವಚ್ಛಗೊಳಿಸುವ ಪ್ರಕ್ರಿಯೆ ನಡೆಯಲಿದೆ.

ಪರಿಸ್ಥಿತಿ ಅವಲೋಕನ ನಡೆಸಲಿದೆ
ವಲಸೆ ಕಾರ್ಮಿಕರು ದೂರದ ರಾಜ್ಯಗಳಿಗೆ ಸಂಚಾರ ನಡೆಸುವವರು ಆಗಿದ್ದರೆ ಬಸ್‌ಗಳಿಗಿಂತ ರೈಲು ಉತ್ತಮ ವಿಧಾನವಾಗಿದೆ. ಆದರೆ, ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ನೋಡಿಕೊಂಡು ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ನೀಡುವ ಕುರಿತು ಅಂತಿನ ತೀರ್ಮಾನ ಕೈಗೊಳ್ಳಲಿದೆ.
|
ಮುಖ್ಯಮಂತ್ರಿಗಳ ಟ್ವೀಟ್
ರಾಜಸ್ಥಾನ ಮುಖ್ಯಮಂತ್ರಿ ಸರ್ಕಾರ ಕಾರ್ಮಿಕರ ಓಡಾಟಕ್ಕೆ ರೈಲು ಬಳಕೆ ಮಾಡುವ ಕುರಿತು ಟ್ವೀಟರ್‌ನಲ್ಲಿ ಸುಳಿವು ನೀಡಿದ್ದಾರೆ.

ಪ್ರಯಾಣಿಕ ರೈಲು ಸಂಚಾರವಿಲ್ಲ
ಮೇ 3ರಂದು 2ನೇ ಹಂತದ ಲಾಕ್ ಡೌನ್ ಮುಕ್ತಾಯಗೊಳ್ಳಲಿದೆ. ಆದರೆ, ಮೇ 4 ರಿಂದ ಪ್ರಯಾಣಿಕರ ರೈಲು ಸಂಚಾರ ಆರಂಭಿಸುವ ಕುರಿತು ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಮಾತ್ರ ಓಡಿಸುವ ನೀರಿಕ್ಷೆ ಇದೆ.












Click it and Unblock the Notifications