ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

120 ವಿಶೇಷ ರೈಲು ಓಡಿಸಲಿದೆ ಭಾರತೀಯ ರೈಲ್ವೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 01 : ಭಾರತೀಯ ರೈಲ್ವೆ ಮುಂದಿನ ದಿನಗಳಲ್ಲಿ 120 ವಿಶೇಷ ರೈಲುಗಳನ್ನು ಓಡಿಸಲು ತೀರ್ಮಾನಿಸಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಇನ್ನು ಪ್ರಯಾಣಿಕ ರೈಲುಗಳ ಸಂಚಾರ ಸಹಜ ಸ್ಥಿತಿಗೆ ಬಂದಿಲ್ಲ.

Recommended Video

KS Eshwarappa ಅವರಿಗೆ ಕೊರೊನ , ಆಸ್ಪತ್ರೆಗೆ ದಾಖಲು | Oneindia Kannada

ಅಂತರರಾಜ್ಯ ಸಂಚಾರವನ್ನು ಮತ್ತಷ್ಟು ಹೆಚ್ಚಿಸಲು ಭಾರತೀಯ ರೈಲ್ವೆ ಬಯಸಿದೆ. ಇದಕ್ಕಾಗಿ ವಿವಿಧ ರಾಜ್ಯಗಳ ಜೊತೆ ಮಾತುಕತೆಯನ್ನು ನಡೆಸುತ್ತಿದೆ. ಕೇಂದ್ರ ಗೃಹ ಇಲಾಖೆ ಒಪ್ಪಿಗೆ ನೀಡಿದರೆ 100 ರೈಲುಗಳನ್ನು ಘೋಷಣೆ ಮಾಡಲಾಗುತ್ತದೆ.

ವಲಸೆ ಕಾರ್ಮಿಕರ ಕೊರತೆ; ರೈಲ್ವೆ ಯೋಜನೆಗಳು ವಿಳಂಬ ವಲಸೆ ಕಾರ್ಮಿಕರ ಕೊರತೆ; ರೈಲ್ವೆ ಯೋಜನೆಗಳು ವಿಳಂಬ

ಈಗಾಗಲೇ ಹಲವು ಮಾರ್ಗದಲ್ಲಿ ಒಟ್ಟು 230 ವಿಶೇಷ ರೈಲುಗಳು ಸಂಚಾರ ನಡೆಸುತ್ತಿವೆ. ಈ ಮಾರ್ಗದಲ್ಲಿ ಇನ್ನೂ 20 ರೈಲುಗಳ ಓಡಾಟ ಆರಂಭಿಸಲು ರೈಲ್ವೆ ಚಿಂತನೆ ನಡೆಸಿದೆ. ಒಟ್ಟು 120 ರೈಲುಗಳು ಸಂಚಾರ ಆರಂಭಿಸಲಿವೆ.

ದೇಶದಲ್ಲೇ ಮೊದಲು: ಮೈಸೂರಲ್ಲಿ ತಯಾರಾದ ಹೈಸ್ಪೀಡ್ ರೈಲು ಚಕ್ರ ದೇಶದಲ್ಲೇ ಮೊದಲು: ಮೈಸೂರಲ್ಲಿ ತಯಾರಾದ ಹೈಸ್ಪೀಡ್ ರೈಲು ಚಕ್ರ

Indian Railways Likely To Run 120 More Special Trains This Month

"ಹೆಚ್ಚು ವಿಶೇಷ ರೈಲುಗಳನ್ನು ಓಡಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಲಾಗಿದೆ" ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಸೆಪ್ಟೆಂಬರ್ 20ರ ಬಳಿಕ ರೈಲುಗಳು ಸಂಚಾರ ನಡೆಸುವ ನಿರೀಕ್ಷೆ ಇದೆ.

ಅನ್‌ಲಾಕ್‌ 4: ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಅನುಮತಿಅನ್‌ಲಾಕ್‌ 4: ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಅನುಮತಿ

ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಭಾರತೀಯ ರೈಲ್ವೆ ಎಲ್ಲಾ ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಿತ್ತು. ಮೇ 1ರಿಂದ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲು ಆರಂಭಿಸಿತು. ಬಳಿಕ 230 ವಿಶೇಷ ರೈಲುಗಳ ಸಂಚಾರ ಆರಂಭವಾಯಿತು.

ಕೇಂದ್ರ ಗೃಹ ಇಲಾಖೆ ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ಮಹಾನಗರದಲ್ಲಿ ಮೆಟ್ರೋ ಸಂಚಾರ ಆರಂಭಿಸಲು ಅನುಮತಿ ನೀಡಿದೆ. ಸೆಪ್ಟೆಂಬರ್ 7ರಿಂದ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಲಿದೆ.

English summary
Indian Railways is planning to run 120 more special trains. Railways is in talks with concerned state governments. Now 230 special trains running in country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X