Trains: ಹುಬ್ಬಳ್ಳಿ ಸೇರಿ ಈ ಮಾರ್ಗದ ರೈಲುಗಳಿಗೆ ಹೆಚ್ಚುವರಿ ಬೋಗಿ; ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ದಕ್ಷಿಣ ಮಧ್ಯ ಮತ್ತು ಉತ್ತರ ಮಧ್ಯ ರೈಲ್ವೆ ವಲಯಗಳು ಕೆಲವು ಮಾರ್ಗಗಳ ಎಕ್ಸ್ಪ್ರೆಸ್‌ ರೈಲುಗಳಲ್ಲಿ ಹೆಚ್ಚುವರಿ ಬೋಗಿಗಳನ್ನು ಕಾಯಂ ಆಗಿ ಜೋಡಿಸಲು ನಿರ್ಧರಿಸಿವೆ. ಯಾವೆಲ್ಲ ಮಹಾನಗರಗಳನ್ನು ಸಂಪರ್ಕಿಸುವ ರೈಲುಗಳಿಗೆ ಹೆಚ್ಚು ಬೋಗಿಗಳನ್ನು ಹೊಂದಲಿವೆ ಎಂಬ ಮಾಹಿತಿ ಇಲ್ಲಿದೆ.

* ದಕ್ಷಿಣ ಮಧ್ಯ ರೈಲ್ವೆಯು ಸಿಕಂದರಾಬಾದ್-ವಾಸ್ಕೋ ಡ ಗಾಮ-ಸಿಕಂದರಾಬಾದ್ ದ್ವಿ-ಸಾಪ್ತಾಹಿಕ ಎಕ್ಸ್'ಪ್ರೆಸ್ ರೈಲುಗಳಿಗೆ ರೈಲು (17039/17040) ಒಂದು ಹೆಚ್ಚುವರಿ ಎಸಿ 3-ಟೈರ್ ಬೋಗಿಯನ್ನು ಸೇರಿಸಲು ನಿರ್ಧರಿಸಿದೆ. ಇದರಿಂದಾಗಿ ಈಗಿರುವ ಎಲ್‌ಎಚ್'ಬಿ (LHB) ಬೋಗಿಗಳ ಸಂಖ್ಯೆ 19 ರಿಂದ 20 ಕ್ಕೆ ಏರಿಕೆಯಾಗಲಿದೆ.

Indian Railways Adds Permanent Coaches to Secunderabad-Vasco and Hubballi-Prayagraj Express Trains

ಇನ್ನೂ ಈ ಬದಲಾವಣೆಯು ಸಿಕಂದರಾಬಾದ್‌ನಿಂದ ಹೊರಡುವ ರೈಲಿಗೆ (17039) ದಿನಾಂಕ ಸೆಪ್ಟಂಬರ್ 02 ರಿಂದ ಮತ್ತು ವಾಸ್ಕೋ ಡ ಗಾಮಾದಿಂದ ಹೊರಡುವ ರೈಲಿಗೆ (17040) ಸೆಪ್ಟಂಬರ್ 03ರಿಂದ ಅನ್ವಯವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರಿಷ್ಕೃತ ಬೋಗಿಗಳ ಸಂಯೋಜನೆಯಲ್ಲಿ 02 ಎಸಿ 2-ಟೈರ್, 06 ಎಸಿ 3-ಟೈರ್, 06 ಸ್ವೀಪರ್ ಕ್ಲಾಸ್, 04 ಕಾಯ್ದಿರಿಸದ ದ್ವಿತೀಯ ದರ್ಜೆ (ಜನರಲ್), 01 ದಿವ್ಯಾಂಗ ಸ್ನೇಹಿ ಬೋಗಿ ಹೊಂದಿರುವ ದ್ವಿತೀಯ ದರ್ಜೆ ಲಗೇಜ್ ಮತ್ತು ಬ್ರೇಕ್ ವ್ಯಾನ್ ಹಾಗೂ 01 ಜನರೇಟರ್-ಕಮ್-ಲಗೇಜ್/ಬ್ರೇಕ್ ವ್ಯಾನ್ ಒಳಗೊಂಡಿವೆ.

ಹುಬ್ಬಳ್ಳಿ-ಪ್ರಯಾಗ್‌ರಾಜ್ ರೈಲಿಗೆ ಹೆಚ್ಚುವರಿ ಬೋಗಿ

* ಉತ್ತರ ಮಧ್ಯ ರೈಲ್ವೆಯು ಪ್ರಯಾಗ್'ರಾಜ್-ಎಸ್‌ಎಸ್‌ಎಸ್‌ ಹುಬ್ಬಳ್ಳಿ-ಪ್ರಯಾಗ್‌ರಾಜ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ಗೆ ರೈಲುಗಳಿಗೆ (04113/04114) ಒಂದು ಹೆಚ್ಚುವರಿ ಸ್ವೀಪರ್ ಕ್ಲಾಸ್ ಬೋಗಿಯನ್ನು ಕಾಯಂ ಆಗಿ ಜೋಡಿಸಲು ನಿರ್ಧರಿಸಿದೆ. ಇದರಿಂದಾಗಿ ಈಗಿರುವ ಐಸಿಎಫ್ (ICF) ಬೋಗಿಗಳ ಸಂಖ್ಯೆ 22 ರಿಂದ 23 ಕ್ಕೆ ಏರಿಕೆಯಾಗಲಿದೆ.

ಈ ಹೆಚ್ಚಳವು ಪ್ರಯಾಗ್‌ರಾಜ್'ನಿಂದ ಹೊರಡುವ ರೈಲಿಗೆ (04113) ಸೆಪ್ಟಂಬರ್ 05ರಿಂದ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಡುವ ರೈಲು (04114) ಸೆಪ್ಟಂಬರ್ 08ರಿಂದ ಜಾರಿಗೆ ಬರಲಿದೆ.

ರೈಲಿನ ಪರಿಷ್ಕೃತ ಸಂಯೋಜನೆಯಲ್ಲಿ 03 ಎಸಿ 3-ಟೈರ್, 10 ಸ್ವೀಪರ್ ಕ್ಲಾಸ್, 08 ಕಾಯ್ದಿರಿಸದ ದ್ವಿತೀಯ ದರ್ಜೆ (ಜನರಲ್) ಮತ್ತು 02 ದಿವ್ಯಾಂಗ ಸ್ನೇಹಿ ಬೋಗಿ ಹೊಂದಿರುವ ದ್ವಿತೀಯ ದರ್ಜೆ ಸಿಟ್ಟಿಂಗ್, ಲಗೇಜ್ ಹಾಗೂ ಬ್ರೇಕ್ ವ್ಯಾನ್‌ಗಳನ್ನು ಒಳಗೊಂಡಿರಲಿದೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಬ್ಬಳ್ಳಿ- ರಾಮೇಶ್ವರಂ ರೈಲು ಸೇವೆ ವಿಸ್ತರಣೆ

ಎಸ್ಎಸ್ಎಸ್ ಹುಬ್ಬಳ್ಳಿ -ರಾಮೇಶ್ವರಂ -ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್'ಪ್ರೆಸ್ ರೈಲುಗಳ (07355/07356) ಸೇವೆಯನ್ನು ರೈಲ್ವೆ ಮಂಡಳಿಯು ಮುಂದಿನ ಆದೇಶದವರೆಗೆ ವಿಸ್ತರಣೆ ಮಾಡಿದೆ. ಸಾಪ್ತಾಹಿಕ ವಿಶೇಷ ಎಕ್ಸ್'ಪ್ರೆಸ್ ರೈಲುಗಳು ಇದಾಗಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಒದಗಿಸಲಿವೆ.

ಎಸ್ಎಸ್ಎಸ್ ಹುಬ್ಬಳ್ಳಿ - ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್'ಪ್ರೆಸ್ ರೈಲು (07355) ಅಕ್ಟೋಬರ್ 04 ರಿಂದ ನವೆಂಬರ್ 29ರವರೆಗೆ ಹಾಗೂ ರಾಮೇಶ್ವರಂ -ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್'ಪ್ರೆಸ್ ರೈಲು (07356) ಅಕ್ಟೋಬರ್ 5 ರಿಂದ ನವೆಂಬರ್ 30ವರೆಗೆ ವಿಸ್ತರಣೆ ಮಾಡಲಾಗಿದೆ. ನಿಲುಗಡೆ ನಿಲ್ದಾಣ, ಸಮಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ರೈಲ್ವೆ ಮಂಡಳಿ ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+