Indian Railways: ಕಾಯ್ದಿರಿಸಿದ 20,000 ಟಿಕೆಟ್‌ಗಳ ರದ್ದು, ರೈಲ್ವೆ ಇಲಾಖೆಗೆ ಆದ ನಷ್ಟ ಎಷ್ಟು ಕೋಟಿ ಗೊತ್ತಾ?
ನವದೆಹಲಿ, ಜನವರಿ, 08: ಮಳೆಗಾಲ ಮುಗಿದು ಇದೀಗ ಚಳಿಗಾಲ ಆವರಿಸಿದ್ದು, ಬಹುತೇಕ ರಾಜ್ಯಗಳಲ್ಲಿ ಬೆಳಗ್ಗೆ 10 ಗಂಟೆಯಾದರೂ ಮಂಜು ಕವಿದ ವಾತಾವರಣವೇ ಮುಂದುವರೆಯುತ್ತಿದೆ. ಅದರಲ್ಲೂ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ದಟ್ಟವಾದ ಮಂಜು ಕವಿದ ಹಿನ್ನೆಲೆ ಭಾರತೀಯ ರೈಲ್ವೆಯ ಮೊರಾದಾಬಾದ್ ವಿಭಾಗವು ಡಿಸೆಂಬರ್ 2023ರಲ್ಲಿ 20,000 ಕಾಯ್ದಿರಿಸಿದ ಟಿಕೆಟ್‌ಗಳ ರದ್ದು ಮಾಡಲಾಗಿದೆ. ಹಾಗಾದರೆ ರೈಲ್ವೇ ಇಲಾಖೆಗೆ ಆದ ನಷ್ಟ ಎಷ್ಟು ಕೋಟಿ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.
ಮೊರಾದಾಬಾದ್ ವಿಭಾಗದ ಡಿವಿಜನಲ್ ರೈಲ್ವೇ ಮ್ಯಾನೇಜರ್ ರಾಜ್ ಕುಮಾರ್ ಸಿಂಗ್ ನೀಡಿದ ಮಾಹಿತಿ ಪ್ರಕಾರ, ರಿಸರ್ವೇಶನ್ ಅಡಿಯಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರು ರೈಲುಗಳ ವಿಳಂಬದಿಂದ ತಮ್ಮ ಟಿಕೆಟ್‌ಗಳನ್ನು ರದ್ದುಪಡಿಸಿದ ಹಿನ್ನೆಲೆ ಇಲಾಖೆಗೆ ಸುಮಾರು 1.22 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟು ರದ್ದಾದ ಕಾಯ್ದಿರಿಸಲಾದ ಟಿಕೆಟ್‌ಗಳಲ್ಲಿ 4,230 ಬರೇಲಿಯಲ್ಲಿ ರದ್ದುಗೊಳಿಸಲಾಗಿದ್ದು, 3,239 ಟಿಕೆಟ್‌ಗಳನ್ನು ಮೊರಾದಾಬಾದ್‌ನಲ್ಲಿ ರದ್ದುಗೊಳಿಸಲಾಗಿದೆ. 3,917 ಟಿಕೆಟ್‌ಗಳು ಹರಿದ್ವಾರದಲ್ಲಿ ಮತ್ತು 2,448 ಟಿಕೆಟ್‌ಗಳನ್ನು ರದ್ದುಗೊಳಿಸಲಾಗಿದೆ ಮತ್ತು ಇತರವುಗಳಲ್ಲಿ 2,448 ರದ್ದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಮತ್ತೊಂದೆಡೆ ಜನವರಿ 6ರವರೆಗೆ ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ಪೂರ್ವ ರಾಜಸ್ಥಾನದ ಕೆಲವು ಭಾಗಗಳಲ್ಲಿ ರಾತ್ರಿ ಮತ್ತು ಬೆಳಗ್ಗೆ ವೇಳೆ ದಟ್ಟವಾದ ಮಂಜಿನ ಪರಿಸ್ಥಿತಿಗಳು ಮುಂದುವರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
12 ಪ್ರಮುಖ ರೈಲುಗಳ ಸಂಚಾರ ರದ್ದು
ಕಾಮಗಾರಿಗಳು ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರೈಲುಗಳ ಸಂಚಾರ ರದ್ದು ಮಾಡಲಾಗುತ್ತದೆ. ಅದೇ ರೀತಿ ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ರೈಲ್ವೆ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆ ಇತ್ತೀಚೆಗಷ್ಟೇ ರಾಜ್ಯದಲ್ಲಿ ಸಂಚರಿಸುವ 12 ಪ್ರಮುಖ ರೈಲುಗಳ ಸಂಚಾರವನ್ನು 10 ದಿನಗಳ ಕಾಲ ರದ್ದು ಮಾಡಲಾಗಿತ್ತು. ಹಾಗಾದರೆ ಯಾವೆಲ್ಲ ಮಾರ್ಗಗಗಳ ರೈಲುಗಳ ಸಂಚಾರವನ್ನು ರದ್ದಪಡಿಸಲಾಗಿತ್ತು ಎಂದು ಇಲ್ಲಿ ತಿಳಿಯಿರಿ.
ಗುಳೇದಗುಡ್ಡ - ಬಾಗಲಕೋಟ ವಿಭಾಗದಲ್ಲಿ ಡಬಲ್ ಲೈನ್ ಮಾಡಲು ಪೂರ್ವ ಇಂಟರ್‌ಲಾಕಿಂಗ್ ಮತ್ತು ಇಂಟರ್‌ಲಾಕಿಂಗ್ ಕಾಮಗಾರಿ ಕಾರಣ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿತ್ತು.
ಪೂರ್ಣ ಪ್ರಮಾಣದಲ್ಲಿ ರದ್ದಾಗಿದ್ದ ರೈಲುಗಳು
* ರೈಲು ಸಂಖ್ಯೆ 06919 ಎಸ್‌ಎಸ್‌ಎಸ್ ಹುಬ್ಬಳ್ಳಿ - ವಿಜಯಪುರ ದೈನಂದಿನ ಪ್ಯಾಸೆಂಜರ್ ಡಿಸೆಂಬರ್ 19, 2023 ರಿಂದ 28ರವರೆಗೆ ಪ್ರಯಾಣವನ್ನು ರದ್ದುಪಡಿಸಲಾಗಿದೆ.
* ರೈಲು ಸಂಖ್ಯೆ 06920 ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಪ್ರಯಾಣವನ್ನು ಡಿಸೆಂಬರ್ 19, 2023ರಿಂದ 29ರವರೆಗೆ ರದ್ದು ಮಾಡಲಾಗಿತ್ತು.
* ರೈಲು ಸಂಖ್ಯೆ 07322 ಧಾರವಾಡ - ಸೋಲಾಪುರ ದೈನಂದಿನ ಪ್ಯಾಸೆಂಜರ್ ಡಿಸೆಂಬರ್ 19, 2023ರಿಂದ 28ರವರೆಗೆ ರದ್ದು ಮಾಡಲಾಗಿತ್ತು.
* ರೈಲು ಸಂಖ್ಯೆ 07331 ಸೋಲಾಪುರ - ಎಸ್‌ಎಸ್‌ಎಸ್ ಹುಬ್ಬಳ್ಳಿ ದೈನಂದಿನ ಪ್ರಯಾಣಿಕ ಪ್ರಯಾಣವನ್ನು ಡಿಸೆಂಬರ್ 20, 2023ರಿಂದ 29 ರವರೆಗೆ ರದ್ದು ಮಾಡಲಾಗಿತ್ತು.
* ರೈಲು ಸಂಖ್ಯೆ 11305 ಸೋಲಾಪುರ - ಹೊಸಪೇಟೆ ಡೈಲಿ ಎಕ್ಸ್‌ಪ್ರೆಸ್ ಡಿಸೆಂಬರ್ 19, 2023ರಿಂದ 28ರವರೆಗೆ ಪ್ರಯಾಣವನ್ನು ರದ್ದು ಮಾಡಲಾಗಿತ್ತು.
* ರೈಲು ಸಂಖ್ಯೆ 11306 ಹೊಸಪೇಟೆ - ಸೊಲ್ಲಾಪುರ ಡೈಲಿ ಎಕ್ಸ್‌ಪ್ರೆಸ್ ಡಿಸೆಂಬರ್ 20, 2023ರಿಂದ 29ರವರೆಗೆ ಪ್ರಯಾಣವನ್ನು ರದ್ದು ಮಾಡಲಾಗಿತ್ತು.
* ರೈಲು ಸಂಖ್ಯೆ 07329 ಎಸ್‌ಎಸ್‌ಎಸ್ ಹುಬ್ಬಳ್ಳಿ - ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ಡಿಸೆಂಬರ್ 19, 2023ರಿಂದ 28ರವರೆಗೆ ಪ್ರಯಾಣವನ್ನು ರದ್ದು ಮಾಡಲಾಗಿತ್ತು.
* ರೈಲು ಸಂಖ್ಯೆ 07330 ವಿಜಯಪುರ - ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ಡಿಸೆಂಬರ್ 20, 2023ರಿಂದ 29ರವರೆಗೆ ಪ್ರಯಾಣವನ್ನು ರದ್ದುಪಡಿಸಲಾಗಿತ್ತು.
ಭಾಗಶಃ ರದ್ದಾದ ರೈಲುಗಳು?
* ರೈಲು ಸಂಖ್ಯೆ 17307 ಮೈಸೂರು - ಬಾಗಲಕೋಟೆ ಡೈಲಿ ಎಕ್ಸ್‌ಪ್ರೆಸ್ ಡಿಸೆಂಬರ್ 19, 2023ರಿಂದ 28ರವರೆಗೆ ಮೈಸೂರಿನಿಂದ ಪ್ರಯಾಣವನ್ನು ಆರಂಭಿಸಿ ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿತ್ತು. ಈ ರೈಲು ಪ್ರಯಾಣ ವಿಜಯಪುರದಲ್ಲಿ ಕೊನೆಯಾಗುತ್ತದೆ.
* ರೈಲು ಸಂಖ್ಯೆ 17308 ಬಾಗಲಕೋಟ - ಮೈಸೂರು ಡೈಲಿ ಎಕ್ಸ್‌ಪ್ರೆಸ್ ಬಾಗಲಕೋಟೆಯಿಂದ ಡಿಸೆಂಬರ್ 20, 2023ರಿಂದ 29ರವರೆಗೆ ಬಾಗಲಕೋಟೆ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳುತ್ತು. ಈ ರೈಲು ವಿಜಯಪುರ ನಿಲ್ದಾಣದಿಂದ ಆರಂಭ ಆಗಲಿದೆ.
* ರೈಲು ಸಂಖ್ಯೆ 07378 ಮಂಗಳೂರು - ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ಡಿಸೆಂಬರ್ 19, 2023ರಿಂದ 28ರವರೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿತ್ತು. ಈ ರೈಲು ಇದು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದಲ್ಲಿ ಕೊನೆಯಾಗುತ್ತದೆ.
* ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಡೈಲಿ ಎಕ್ಸ್‌ಪ್ರೆಸ್ ಡಿಸೆಂಬರ್ 19, 2023ರಿಂದ 28ರವರೆಗೆ ವಿಜಯಪುರ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿತ್ತು. ಇದು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಆರಂಭ ಆಗಲಿದೆ.












Click it and Unblock the Notifications