ಒಟಿಟಿ ಕಂಟೆಂಟ್ ಸೆನ್ಸಾರ್ ಮಾಡಲು ಮುಂದಾದ ಕೇಂದ್ರ ಸರ್ಕಾರ: ವಿರೋಧಿಸಿದ ಕಂಪನಿಗಳು
ಮುಂಬೈ, ಜುಲೈ 15: ಭಾರತದಲ್ಲಿ ಪ್ರಸಾರವಾಗುವ ಒಟಿಟಿ ಕಂಟೆಂಟ್ ಅನ್ನು ಸೆನ್ಸಾರ್ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಲೈಂಗಿಕತೆಯನ್ನು ಪ್ರಚೋದಿಸುವ ಹಾಗೂ ಆಕ್ಷೇಪಾರ್ಹ ವಿಚಾರಗಳನ್ನು ಹೊಂದಿರುವ ಕಂಟೆಂಟ್‌ಗೆ ಕಡಿವಾಣ ಹಾಕಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ರಾಯಟರ್ಸ್ ವರದಿ ಮಾಡಿದೆ.
ಕಂಟೆಂಟ್‌ಗಳನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹಾಕುವ ಮೊದಲು ಹಿಂಸಾಚಾರ ಮತ್ತು ಅಶ್ಲೀಲತೆಯ ಬಗ್ಗೆ ಸ್ವತಂತ್ರವಾಗಿ ಪರಿಶೀಲನೆ ಮಾಡಲಾಗುತ್ತದೆ. ಅದಕ್ಕೊಸ್ಕರ ಏಜೆನ್ಸಿಯೊಂದನ್ನು ನೇಮಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ.

ಜೂನ್ 20 ರಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಟಿಟಿ ಉದ್ಯಮದ ಪ್ರತಿನಿಧಿಗಳಿಗೆ ಈ ಪ್ರಸ್ತಾಪವನ್ನು ಮಾಡಲಾಗಿದೆ ಎಂದು ವರದಿ ಹೇಳಿದೆ.
ಸಂಸತ್ ಸದಸ್ಯರು ಹಾಗೂ ಸಾರ್ವಜನಿಕರ ಪರವಾಗಿ ಪ್ರಸ್ತಾವನೆಯನ್ನು ಮಾಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಸರ್ಕಾರವು 'ನೀತಿಸಂಹಿತೆ' ಕುರಿತು ಮಾತನಾಡಿದ್ದು ಪ್ರಸ್ತಾವಿತ ವಿಚಾರದಲ್ಲಿ ಅಂತರರಾಷ್ಟ್ರೀಯ ಕಂಟೆಂಟ್‌ಗಳನ್ನು ಸೇರಿಸುವಂತೆಯೂ ಸೂಚಿಸಿದೆ ಎಂದು ವರದಿಯಾಗಿದೆ.
ನೆಟ್‌ಫ್ಲಿಕ್ಸ್, ಡಿಸ್ನಿ ಮತ್ತು ಇತರ ಆನ್‌ಲೈನ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಈ ನೀತಿ ಸಂಹಿತಿಯನ್ನು ಜಾರಿಗೊಳಿಸಲು ಭಾರತ ಸರ್ಕಾರ ಮುಂದಾಗಿದೆ. ಆನ್‌ಲೈನ್‌ನಲ್ಲಿ ತೋರಿಸುವ ಮೊದಲು ಅಶ್ಲೀಲತೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದ ಕಂಟೆಂಟ್ ಅನ್ನು ಸ್ವತಂತ್ರವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಸರ್ಕಾರ ಹೇಳಿದೆ.

ಜೂನ್ 20 ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪವನ್ನು ಓವರ್-ದಿ-ಟಾಪ್ (ಒಟಿಟಿ) ವೇದಿಕೆಗಳಿಗೆ ತಲುಪಿಸಲಾಗಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಆದಾಗ್ಯೂ, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಪ್ರಸ್ತಾವನೆಯನ್ನು ವಿರೋಧಿಸಿವೆ. ಯಾವುದೇ ಅಂತಿಮ ನಿರ್ಧಾರವನ್ನು ಒಟಿಟಿ ಕಂಪನಿಗಳು ಹೇಳಿವೆ ಎಂದು ತಿಳಿದುಬಂದಿದೆ.
Amazon, Viacom18, ಮತ್ತು Apple TV ಪ್ರತಿನಿಧಿಗಳು ಸಹ ಈ ಸಭೆಯಲ್ಲಿ ಭಾಗವಹಿಸಿದ್ದವು ಎಂದು ತಿಳಿದುಬಂದಿದೆ. ಒಟಿಟಿ ಕಂಟೆಂಟ್ ಅನ್ನು ಸೆನ್ಸಾರ್ ಮಾಡಲು ಸ್ವತಂತ್ರ ಪ್ಯಾನಲ್ ಅನ್ನು ರಚಿಸುವುದಾಗಿ ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.

ಒಟಿಟಿ ಪ್ಲಾಟ್‌ಫಾರ್ಮ್‌ಗಳು ತೋರಿಸಿರುವ ಅಶ್ಲೀಲತೆ ಈಗ ದೇಶದಲ್ಲಿ ಚರ್ಚೆಯ ವಿಷಯವಾಗಿದೆ. ಸ್ಟ್ರೀಮಿಂಗ್ ಸೇವೆ ಪೂರೈಕೆದಾರರು ತೋರಿಸಿರುವ ಕಂಟೆಂಟ್ ಸೆನ್ಸಾರ್ ಮಾಡಲು ಸಹ ಕರೆಗಳು ಬಂದಿವೆ ಎಂದು ಸರ್ಕಾರ ತಿಳಿಸಿದೆ.
ಭಾರತೀಯ ಚಲನಚಿತ್ರಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ನಿಂದ ಪರಿಶೀಲಿಸಲಾಗುತ್ತದೆ. ಅದೇ ರೀತಿ ಒಟಿಟಿ ಕಂಟೆಂಟ್‌ಗಳನ್ನು ಸೆನ್ಸಾರ್ ಮಾಡಲು ಸರ್ಕಾರ ಚಿಂತಿಸಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications