• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾಗೆ ಸೆಡ್ಡು ಹೊಡೆಯಲು ಇಸ್ರೇಲ್‌ನಿಂದ ಭಾರತ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿ

|

ನವದೆಹಲಿ, ಜುಲೈ 14: ಗಡಿ ರಾಷ್ಟ್ರ ಚೀನಾ ಹಾಗೂ ಪಾಕಿಸ್ತಾನದ ಜತೆಗಿನ ಸಂಬಂಧ ಹದಗೆಡುತ್ತಿರುವ ಬೆನ್ನಲ್ಲೇ ಇಸ್ರೇಲ್‌ನಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಗೆ ಭಾರತ ಮುಂದಾಗಿದೆ.

   ಸದ್ಯಕ್ಕೆ ಸರಿಯಾಗೋದಿಲ್ಲ ಕೊರೊನ ಪರಿಸ್ಥಿತಿ - WHO | Oneindia Kannada

   ಇಸ್ರೇಲ್‌ನ ಅತ್ಯಾಧುನಿಕ ಹೆರಾನ್ ಡ್ರೋನ್, ಹಾಗೂ ಸ್ಪೈಕ್ ಆಂಟಿ ಟ್ಯಾಂಕ್ ಕ್ಷಿಪಣಿಗಳ ತುರ್ತು ಖರೀದಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಲಡಾಖ್‌ನಲ್ಲಿ ಚೀನಾದೊಂದಿಗೆ ಯುದ್ಧೋನ್ಮಾದ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ತುರ್ತು ಹಣಕಾಸು ನಿಧಿಯಿಂದ ಹೆರೋನ್ ಮಾನವ ರಹಿತ ಡ್ರೋನ್ ಹಾಗೂ ಸ್ಪೈಕ್ ಆಂಟಿ ಟ್ಯಾಂಕ್ ಕ್ಷಿಪಣಿ ಖರೀದಿಸಲು ನಿರ್ಧರಿಸಲಾಗಿದೆ.

   ಮಾರಕ ಸಾಧನ: ಜೀವ ಉಳಿಸಲ್ಲ, ಜೀವ ತೆಗೆಯುತ್ತೆ ಡ್ರೋನ್..!

   ಇದರ ಜೊತೆಗೆ ಶಸ್ತ್ರಾಸ್ತ್ರ ಸಹಿತ ಡ್ರೋನ್‌ಗಳ ಖರೀದಿ ಹಾಗೂ ಹಾಲಿ ಇರುವ ಇರುವ ಡ್ರೋನ್ ಗಳಿಗೆ ಶಸ್ತ್ರಾಸ್ತ್ರ ಅಳವಡಿಕೆಗೂ ಅನುಮತಿಸಲಾಗಿದೆ.

   ಇನ್ನೊಂದೆಡೆ ಬಾಲಾಕೋಡ್ ಸರ್ಜಿಕಲ್ ಸ್ಟ್ರೈಕ್‌ಗೆ ಬಳಸಿದ್ದ ಸ್ಪೈಕ್ 2000 ಹೆಚ್ಚುವರಿ ಬಾಂಬ್ ಖರೀದಿಗೆ ಸಮ್ಮತಿಸಲಾಗಿದೆ. ಇದರ ಜೊತೆಗೆಎ ಡಿಆರ್‌ಡಿಓ ವತಿಯಿಂದ ಆಂಟಿಕ್ ಟ್ಯಾಂಕ್ ಕ್ಷಿಪಣಿ ಅಭಿವೃದ್ಧಿ ಯೋಜನೆಗೂ ನಿರ್ಧರಿಸಲಾಗಿದೆ.ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ ವರ್ಷಾಂತ್ಯದೊಳಗೆ ಈ ಖರೀದಿ ನಡೆಯುವ ಸಾಧ್ಯತೆ ಇದೆ.

   ತುರ್ತು ಪರಿಸ್ಥಿತಿಯನ್ನು ಎದುರಿಸುವ ಸಲುವಾಗಿ ಕ್ಷಿಪಣಿಗಳನ್ನು ಖರೀದಿಸಲು ನಿರ್ಧರಿಸಲಾಗಿದ್ದು, ಗಡಿ ವಿಚಕ್ಷಣೆಗೆ ಮಾನವರಹಿತ ಡ್ರೋನ್ ಅತ್ಯಗತ್ಯ ಎಂದು ತಿಳಿದುಬಂದಿದೆ. ಕಳೆದ ಒಂದೆರೆಡು ತಿಂಗಳಿಂದ ಚೀನಾದ ಜೊತೆಗಿನ ಸಂಬಂಧ ಹಳಸಿದ್ದಲ್ಲದೆ ಯುದ್ಧದ ಕರಿ ಛಾಯೆ ಏರ್ಪಟ್ಟಿದೆ. ಹೀಗಾಗಿ ಭಾರತ ಸರ್ಕಾರ ಸೇನೆಯ ತುರ್ತು ಅಗತ್ಯಗಳನ್ನು ಪೂರೈಸಲು ಮುಂದಾಗುತ್ತಿದೆ.ಕೆಲ ದಿನಗಳ ಹಿಂದಷ್ಟೇ ರಷ್ಯಾದಿಂದ ಸುಖೋಯ್ ಯುದ್ಧ ವಿಮಾನ ಖರೀದಿಗೂ ಸಮ್ಮತಿಸಿತ್ತು.

   English summary
   Engaged In a Boundary dispute with China in eastern Ladakh , India is planning to enhance its surveillance capability and firepower by placing orders for Heron Surveillance drones and spike anti tank guided missiles from Isrel under the emergency financial powers granted by the Government.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more