• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೈಮ್ ಲೈನ್ : ವಿದೇಶದ ಬ್ಯಾಂಕುಗಳಲ್ಲಿ ಕಪ್ಪು ಹಣ

By Mahesh
|

ಬೆಂಗಳೂರು, ಅ.28: ವಿದೇಶದಲ್ಲಿರುವ ಅನೇಕ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವ ಭಾರತೀಯರು ತೆರಿಗೆ ವಂಚಿಸಿ ಅಕ್ರಮವಾಗಿ ಹಣ ಸಂಗ್ರಹಿಸಿರುವ ಪ್ರಕರಣಕ್ಕೆ ಸೋಮವಾರ ಮಹತ್ವದ ತಿರುವು ಸಿಕ್ಕಿತ್ತು. ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದೇ ಮೊದಲ ಬಾರಿಗೆ ತೆರಿಗೆ ವಂಚಕ ಖಾತೆದಾರರ ಹೆಸರುಗಳನ್ನು ಬಹಿರಂಗಗೊಳಿಸಿತು.

ಕಪ್ಪು ಹಣ ವಾಪಸ್ ಪ್ರಕರಣದ ತನಿಖೆಯಲ್ಲಿ ಕಾಂಗ್ರೆಸ್ಸಿನ ನಾಲ್ವರು ನಾಯಕರ ಹೆಸರು ಇದೆ ಎಂಬುದು ಈಗ ಸ್ಪಷ್ಟವಾಗಿದೆ. ಈ ಪೈಕಿ ಮನಮೋಹನ್ ಸಿಂಗ್ ಅವರ ಅಧಿಕಾರ ಅವಧಿಯಲ್ಲಿ ಸಚಿವರಾಗಿದ್ದು, ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಕಾಂಗ್ರೆಸ್ ನಾಯಕರ ಹೆಸರು ಇದೆ ಎಂಬ ಸುದ್ದಿಯಿದೆ. [ಕಪ್ಪು ಹಣ ಖಾತೆದಾರರ ಹೆಸರು ಬಹಿರಂಗ]

ಆದರೆ, ಸದ್ಯಕ್ಕೆ ಎನ್ ಡಿಎ ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಟಿಂಬ್ಲೋ ಕಂಪನಿಯ ರಾಧಾ ಸೇರಿದಂತೆ ನಾಲ್ವರು, ಡಾಬರ್ ನ ಪ್ರದೀಪ್ ಬರ್ಮನ್ ಹಾಗೂ ಷೇರು ಮಾರುಕಟ್ಟೆ ತಜ್ಞ ಪಂಕಜ್ ಚಿಮನ್ ಲಾಲ್ ಲೋಧಿಯಾ ಹೆಸರು ಸೇರಿ ಒಟ್ಟು 7 ಜನರಿದ್ದಾರೆ.

2009ರಲ್ಲಿ ವಿದೇಶದ ಬ್ಯಾಂಕುಗಳಿಂದ ಕಪ್ಪು ಹಣ ವಾಪಸ್ ತರುವ ವಿಚಾರದಲ್ಲಿ ಕೋರ್ಚ್ ವಿಚಾರಣೆಗೆ ಚಾಲನೆ ಸಿಕ್ಕಿತು. ಆದರೆ, ಕಪ್ಪು ಹಣದ ಬಗ್ಗೆ ಮೊಟ್ಟ ಮೊದಲ ಬಾರಿಗೆ ಸುದ್ದಿ ಲೀಕ್ ಆಗಿದ್ದು ಸ್ವಿಸ್ ಮ್ಯಾಗಜೀನ್ ನಿಂದ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರಿನಿಂದ ಈ ಕಪ್ಪು ಹಣ ಹೊಂದಿರುವ ಭಾರಿ ಕುಳಗಳ ಚರಿತ್ರೆ ಶುರುವಾಗುತ್ತದೆ. ಈ ಪ್ರಕರಣದ ಟೈಮ್ ಲೈನ್ ಇಂತಿದೆ:

ನವೆಂಬರ್ 1991: ಸ್ವಿಸ್ ಮ್ಯಾಗಜೀನ್ ಸ್ಕವೆಜರ್ ಇಲೆಸ್ಟ್ರೇಟ್ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರು ಸೇರಿದಂತೆ 14 ಜನ ರಾಜಕಾರಣಿಗಳ ಪಟ್ಟಿಯನ್ನು ಪ್ರಕಟಿಸಿತ್ತು. ಸ್ವಿಸ್ ಬ್ಯಾಂಕ್ ನಲ್ಲಿ 2.2 ಬಿಲಿಯನ್ ಡಾಲರ್ ಮೊತ್ತದ ಹಣವನ್ನು ರಾಜೀವ್ ಗಾಂಧಿ ಇರಿಸಿದ್ದರು ಎಂದು ವರದಿ ಮಾಡಲಾಗಿತ್ತು.

2009: ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿ, ಕಪ್ಪು ಹಣ ವಾಪಸ್ ತರುವ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ಕ್ರಮವನ್ನು ಪ್ರಶ್ನಿಸಿದರು.[ಮೊದಲ ಮೂವರು ಉದ್ಯಮಿಗಳ ವಿವರ]

ಫೆಬ್ರವರಿ 2011 : 'Indian Black Money Abroad in Secret Banks and Tax Havens' ಹೆಸರಿನಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಕಿರು ಹೊತ್ತಿಗೆ ಪ್ರಕಟಿಸಿತ್ತು. ಇದರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅಕೆ ಪತಿ ರಾಜೀವ್ ಗಾಂಧಿ ಹೆಸರು ಉಲ್ಲೇಖಿಸಲಾಗಿತ್ತು.

ಜೂನ್ 2011 : ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿದೇಶದಲ್ಲಿರುವ ಕಪ್ಪು ಹಣದ ಅಂದಾಜು ಲೆಕ್ಕಾಚಾರ (89.16 ಬಿಲಿಯನ್ ಡಾಲರ್) ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು. ಅದರೆ, ಕಪ್ಪು ಹಣ ವಾಪಸ್ ತರುವ ಬಗ್ಗೆ ಮೊದಲ ಬಾರಿಗೆ ಹೇಳಿಕೆ ನೀಡಿದ್ದರು.

* ಆಗಿನ ಸಿಬಿಡಿಟಿ ಚೇರ್ಮನ್ ಎಂ.ಸಿ ಜೋಶಿ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಕಪ್ಪುಹಣ ನಿಯಂತ್ರಣದ ಬಗ್ಗೆ ನಿಗಾ ಇರಿಸುವಂತೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸೂಚಿಸಿದ್ದರು.

ನವೆಂಬರ್ 2011: ಕಪ್ಪು ಹಣ ವಿರುದ್ಧ ಜಾಗತಿಕ ಸಮರ ಸಾರಿರುವುದಾಗಿ ಜಿ20 ಶೃಂಗಸಭೆಯಲ್ಲಿ ಭಾರತ ಹೇಳಿಕೆ ನೀಡಿತು. ತೆರಿಗೆ ವಂಚನೆ ಪ್ರಕರಣದಲ್ಲಿ ಪರಸ್ಪರ ಸಹಕಾರಕ್ಕೆ ಅನುಗುಣವಾದ ಒಪ್ಪಂದಕ್ಕೆ ಸಹಿ ಹಾಕಲಾಯಿತು.[ಜೇಟ್ಲಿ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ಸಿಗರು]

* ಲಿಸ್ಟೆನ್ ಸ್ಟೈನ್ ನ ಬ್ಯಾಂಕುಗಳಲ್ಲಿರುವ ಭಾರತೀಯ ಮೂಲದ ಖಾತೆದಾರರ ವಿವರಗಳನ್ನು ಬಹಿರಂಗಪಡಿಸಲು ಏಕೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತು.

* ಎಚ್ ಎಸ್ ಬಿಸಿ ಜಿನಿವಾದಿಂದ ಸುಮಾರು 600ಕ್ಕೂ ಅಧಿಕ ಭಾರತೀಯ ಖಾತೆದಾರರ ವಿವರಗಳನ್ನು ಫ್ರಾನ್ಸ್ ಪಡೆದುಕೊಂಡಿತು ನಂತರ ಇದೇ ದಾಖಲೆಯನ್ನು ಭಾರತಕ್ಕೆ ಕಳಿಸಿತು.

ನವೆಂಬರ್ 2013: ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಅವರು ವಿದೇಶದಿಂದ ಕಪ್ಪು ಹಣ ವಾಪಸ್ ತರಲು ಬಲಿಷ್ಠವಾದ ಕಾನೂನು ರೂಪಿಸುವ ಅಗತ್ಯವಿದೆ ಎಂದರು. ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣೆ ಪ್ರಚಾರದಲ್ಲೂ ಇದೇ ಮಾತನ್ನು ಮೋದಿ ಪುನರುಚ್ಚರಿಸಿದರು.

ಫೆಬ್ರವರಿ 2014: ಕಪ್ಪು ಹಣ ಕುರಿತಂತೆ ಮಾಹಿತಿ ಇದ್ದರೂ ತಮ್ಮ ಅಧಿಕಾರ ಅವಧಿಯಲ್ಲಿ ಕಪ್ಪು ಹಣ ವಾಪಸ್ ತರಲು ವಿವಿಧ ಮಿತ್ರ ಪಕ್ಷಗಳ ಒಮ್ಮತವಿರಲಿಲ್ಲ. ಈ ಬಗ್ಗೆ ವಿವಿಧ ಪಕ್ಷಗಳ ಮುಖಂಡರ ಜೊತೆ ಚರ್ಚಿಸುವುದು ಅನಿವಾರ್ಯವಾಗಿತ್ತು ಎಂದು ಮನಮೋಹನ್ ಸಿಂಗ್ ಹೇಳಿದರು.

ಏಪ್ರಿಲ್ 2014: ಲಿಸ್ಟೆಸ್ಟೈನ್ ಬ್ಯಾಂಕುಗಳಲ್ಲಿರುವ 26 ಖಾತೆದಾರರ ವಿವರಗಳನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಯುಪಿಎ ಸರ್ಕಾರ.

* ಆಮ್ ಅದ್ಮಿ ಪಕ್ಷ ಕಪ್ಪು ಹಣವನ್ನು ವಾಪಸ್ ತರುವುದಾಗಿ ಜನರಿಗೆ ಭರವಸೆ ನೀಡಿತು. [ಸ್ವಿಸ್ ಖಾತೆಗಳ ರಹಸ್ಯ ಸಿಕ್ಕಿದ್ದು ಹೇಗೆ?]

ಮೇ 2014: ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮೇ ತಿಂಗಳಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(SIT) ರಚಿಸಿತು. ನಿವೃತ್ತ ನ್ಯಾ. ಎಂ.ಬಿ ಶಾ ಸಮಿತಿ ಮುಖ್ಯಸ್ಥರಾಗಿದ್ದಾರೆ.

ಜುಲೈ 2014 : ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ ಕಪ್ಪು ಹಣ ವಾಪಸ್ ವಿಷಯ ಪ್ರಸ್ತಾಪಿಸಿ ಸ್ವಿಸ್ ಬ್ಯಾಂಕುಗಳ ಜೊತೆ ಮಾತುಕತೆ ಆರಂಭವಾಗಿದೆ ಎಂದರು.

* ಕೇಂದ್ರ ಬಜೆಟ್ ಮಂಡನೆಯಲ್ಲೂ ಕಪ್ಪು ಹಣ ವಾಪಸ್ ತರುವ ಬಗ್ಗೆ ವಿಶೇಷ ಉಲ್ಲೇಖ ಕಂಡು ಬಂದಿತ್ತು. [ಕಪ್ಪು ಹಣ ಕೇಸ್: HSBC ಬ್ಯಾಂಕಿಗೆ ಕುತ್ತು]

ಅಕ್ಟೋಬರ್ 2014: ತೆರಿಗೆ ವಂಚಕರ ಹೆಸರು ಬಹಿರಂಗ ಪಡಿಸಲು ಸರ್ಕಾರ ಹಿಂದೇಟು ಹಾಕುತ್ತಿಲ್ಲ. ಅದರೆ, ಎರಡು ದೇಶಗಳ ನಡುವಿನ ತೆರಿಗೆ ಸಂಬಂಧಿಸಿದ ಕಾನೂನಿಗೆ ಬೆಲೆ ಕೊಟ್ಟು ಹೆಸರನ್ನು ಗೌಪ್ಯವಾಗಿಡಲು ಸರ್ಕಾರ ನಿರ್ಧರಿಸಿತ್ತು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದರು.

* ಅ.27, 2014ರಂದು ಉದ್ಯಮಿಗಳಾದ ಪ್ರದೀಪ್ ಬರ್ಮನ್, ಪಂಕಜ್ ಲೋಧಿಯಾ, ಟಿಂಬ್ಲೋ ಪ್ರೈ ಲಿ. ನ ರಾಧಾ ಸತೀಶ್, ಚೇತನ್ ಎಸ್, ರೋಹನ್ ಎಸ್, ಅಣ್ಣಾ ಸಿ, ಮಲ್ಲಿಕಾ ಆರ್ ಅವರನ್ನು ಕಪ್ಪು ಹಣ ಹೊಂದಿರುವ ಖಾತೆದಾರರು ಎಂದು ಹೆಸರಿಸಿ ಎನ್ ಡಿಎ ಸರ್ಕಾರ ಸುಪ್ರೀಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The central government on Monday disclosed the names of Seven people, including Pradeep Burman, who hold bank accounts in foreign countries and are now under the lens of the income tax authorities. Here is the time line of events.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more