ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡಿದ್ದ ಭಯೋತ್ಪಾದಕ ಖಾಲೀದ್ ಹತ್ಯೆ
ಶ್ರೀನಗರ, ಅಕ್ಟೋಬರ್ 9: ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ಜಮ್ಮು ಮತ್ತು ಕಾಶ್ಮೀರದ ಲಾದೂರ್ ಎಂಬಲ್ಲಿ ಇಂದು ನಡೆದ ಗುಂಡಿನ ಕಾಳಗದಲ್ಲಿ ಜೈಶ್ ಇ ಮೊಹ್ಮದ್ ಸಂಘಟನೆಯ ಕುಖ್ಯಾತ ಭಯೋತ್ಪಾದಕ ಖಾಲೀದ್ ಎಂಬುವವನ್ನನ್ನು ಬಲಿಹಾಕುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ.
ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿದ್ದ ಎಲ್ಲ ಭಯೋತ್ಪಾದಕ ಚಟುವಣಿಕೆಗಳ ಸೂತ್ರಧಾರನಾಗಿದ್ದ ಖಾಲೀದ್ ಹತ್ಯೆ ಭದ್ರತಾ ಪಡೆಗೆ ಮತ್ತಷ್ಟು ಬಲತಂದುಕೊಟ್ಟಿದೆ.

ಕಳೆದ ಕೆಲ ದಿನಗಳ ಹಿಂದೆ 12 ಭಯೋತ್ಪಾದಕರು ಭಾರತಕ್ಕೆ ನುಸುಳಲು ಈತ ಸಹಾಯ ಮಾಡಿದ್ದ ಎಂಬ ಮಾಹಿತಿಯನ್ನು ಗುಪ್ತಚರ ದಳ ನೀಡಿತ್ತು.












Click it and Unblock the Notifications