ಏಳು ಪಾಕ್ ಸೈನಿಕರ ಕೊಂದು, ಎರಡು ಬಂಕರ್ ಧ್ವಂಸ ಮಾಡಿದ ಭಾರತೀಯ ಸೇನೆ
ಭಾರತೀಯ ಯೋಧರ ದೇಹವನ್ನು ಸೋಮವಾರ ತುಂಡರಿಸಿದ ಪಾಕ್ ಸೇನೆಗೆ ಇಪ್ಪತ್ನಾಲ್ಕು ಗಂಟೆಯೊಳಗೆ ಪ್ರತೀಕಾರ ಹೇಳಲಾಗಿದೆ. ಏಳು ಪಾಕ್ ಸೈನಿಕರನ್ನು ಕೊಂದು, ಎರಡು ಬಂಕರ್ ಧ್ವಂಸ ಮಾಡಲಾಗಿದೆ
ಶ್ರೀನಗರ್, ಮೇ 2: ಭಾರತೀಯ ಸೈನಿಕರ ದೇಹ ತುಂಡರಿಸಿದ ಪಾಕ್ ಸೇನೆಗೆ ಪ್ರಬಲ ಪ್ರತ್ಯುತ್ತರ ನೀಡಲಾಗಿದೆ. ಏಳು ಪಾಕ್ ಸೈನಿಕರನ್ನು ಕೊಂದು, ಎರಡು ಬಂಕರ್ ಗಳನ್ನು ಧ್ವಂಸ ಮಾಡಲಾಗಿದೆ. ಜಮ್ಮುವಿನ ಕೃಷ್ಣ ಘಾಟಿ ಬಳಿಯ ಕಿರ್ಪನ್ ಮತ್ತು ಪಿಂಪಲ್ ಪೋಸ್ಟ್ ಬಳಿ ಪಾಕಿಸ್ತಾನದ ಎರಡು ಬಂಕರ್ ಧ್ವಂಸ ಮಾಡಿದ ಬಗ್ಗೆ ಪ್ರಾಥಮಿಕವಾಗಿ ಸುದ್ದಿ ಬಂತು.
647 ಮುಜಾಹಿದೀನ್ ಬೆಟಾಲಿಯನ್ ನ ಐದರಿಂದ ಎಂಟು ಪಾಕಿಸ್ತಾನ ಸೇನಾ ಯೋಧರು ಒಂದು ಪೋಸ್ಟ್ ನಲ್ಲಿದ್ದರು. ಎರಡು ಪೋಸ್ಟ್ ಗಳನ್ನು ಧ್ವಂಸ ಮಾಡಿ, ಏಳು ಪಾಕಿಸ್ತಾನಿ ಸೈನಿಕರನ್ನು ಭಾರತೀಯ ಯೋಧರ ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿದೆ. ಸೋಮವಾರ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಮ್ ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ಕೃಷ್ಣ ಘಾಟಿಯಲ್ಲಿ ಇಬ್ಬರು ಭಾರತೀಯ ಯೋಧರನ್ನು ಕೊಂದಿತ್ತು.[ಭಾರತೀಯ ಸೈನಿಕರ ದೇಹ ತುಂಡರಿಸಿದ ಪಾಕ್ ಸೇನೆ]

ಯೋಧರ ದೇಹವನ್ನು ಪಾಕ್ ಸೇನೆ ತುಂಡರಿಸಿದೆ ಎಂದು ಸೇನಾ ಪ್ರಕಟಣೆ ತಿಳಿಸಿತ್ತು. ಆದರೆ ಹಿರಿಯ ಅಧಿಕಾರಿಯೊಬ್ಬರು, ಯೋಧರ ಶಿರಚ್ಛೇದ ಮಾಡಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದರು. ಪಾಕಿಸ್ತಾನದ ಸೇನಾ ತಂಡವು ರಾಕೆಟ್ಸ್ ಹಾಗೂ ಮಾರ್ಟರ್ ಬಾಂಬ್ ಬಳಸಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕ್ ನ ಕೃತ್ಯಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು. ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಶ್ರೀನಗರ್ ಗೆ ತೆರಳಿ ಅಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸಿದ್ದರು.












Click it and Unblock the Notifications