ಪಾಕ್ ಬಂಕರ್ ದ್ವಂಸ: ಪಾಕ್ ಹೀನ ಕೃತ್ಯಕ್ಕೆ ಇದು ಭಾರತದ ಉತ್ತರ!
ಭಾರತೀಯ ಸೈನಿಕರ ದೇಹವನ್ನು ತುಂಡರಿಸಿದ್ದ ಜಾಗದಲ್ಲಿದ್ದ ಪಾಕ್ ಸೇನೆಗೆ ಸೇರಿದ್ದ ಬಂಕರ್ ಗಳನ್ನು ಕೇವಲ 60 ಸೆಕೆಂಡ್ ಗಳಲ್ಲಿ ದ್ವಂಸ ಮಾಡುವ ಮೂಲಕ ಭಾರತ ಪ್ರತ್ಯುತ್ತರ ನೀಡಿದೆ.
ಜಮ್ಮು-ಕಾಶ್ಮೀರ, ಮೇ 08: ಮೇ 1 ರಂದು ಭಾರತೀಯ ಸೇನೆಯ ಇಬ್ಬರು ಯೋಧರ ಶಿರಚ್ಛೇದ ಮಾಡಿದ್ದ ಪಾಕ್ ಸೇನೆಗೆ ಭಾರತೀಯ ಸೇನೆ ಇಂದು ತಕ್ಕ ಉತ್ತರ ನೀಡಿದೆ. ಭಾರತೀಯ ಸೈನಿಕರ ದೇಹವನ್ನು ತುಂಡರಿಸಿದ್ದ ಜಾಗದಲ್ಲಿದ್ದ ಪಾಕ್ ಸೇನೆಗೆ ಸೇರಿದ್ದ 2 ಬಂಕರ್ ಗಳನ್ನು ಕೇವಲ 60 ಸೆಕೆಂಡ್ ಗಳಲ್ಲಿ ದ್ವಂಸ ಮಾಡುವ ಮೂಲಕ ಭಾರತ ಪ್ರತ್ಯುತ್ತರ ನೀಡಿದೆ.
ಪಾಕ್ ಬಂಕರ್ ಅನ್ನು ಗುರಿಯಾಗಿಸಿ 6 ರಾಕೆಟ್ ಗಳನ್ನು ಚಿಮ್ಮಿಸಿದ ಭಾರತ, ಜಮ್ಮು-ಕಾಶ್ಮೀರದ ಗಡಿ ಭಾಗದ ಕೃಷ್ಣ ಘಾಟಿ ಸೆಕ್ಟರ್ ಬಳಿ ಇದ್ದ ಪಾಕ್ ಬಂಕರ್ ಗಳನ್ನು ದ್ವಂಸಗೊಳಿಸುವಲ್ಲಿ ಯಶಸ್ವಿಯಾಗಿದೆ.

ನಮ್ಮ ಯೋಧರನ್ನು ಕಾಡಿದರೆ ಸುಮ್ಮನಿರಲಾರೆವು ಎಂಬ ಸ್ಪಷ್ಟ ಸಂದೇಶವನ್ನು ಭಾರತ ಈ ಮೂಲಕ ನೀಡಿದೆ.

ಪಾಕ್ ಕೃತ್ಯಕ್ಕೆ ಇನ್ನೊಂದು ವಾರದಲ್ಲಿ ತಕ್ಕ ಉತ್ತರ ನೀಡುವುದಾಗಿ ಹೇಳಿದ್ದ ಭಾರತೀಯ ಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.












Click it and Unblock the Notifications