Get Updates
Get notified of breaking news, exclusive insights, and must-see stories!

Wayanad: 31 ಗಂಟೆ, 140 ಜನ, 190 ಫೀಟ್‌ ಉದ್ದದ ಬ್ರಿಡ್ಜ್‌: ಎರಡು ಗ್ರಾಮಗಳ ನಡುವೆ ಸಂಪರ್ಕ ಕೊಂಡಿ

ವಾಯನಾಡ್‌: ಕೇರಳದ ವಾಯನಾಡ್‌ನಲ್ಲಿ ಭೂ ಕಸಿತ ಸಂಭವಿಸಿದ್ದು ಜನರ ಜೀವನದ ಜೊತೆ ಚೆಲ್ಲಾಟವಾಡಿದೆ. ರಕ್ಷಣಾ ಕಾರ್ಯಕ್ಕೆ ಸೇನೆ ಸಹ ಕೈ ಜೋಡಿಸಿದೆ. ಇದೇ ವೇಳೆ ಭಾರತೀಯ ಸೇನಾ ತಂಡ ಕೇವಲ 31 ಗಂಟೆಗಳಲ್ಲಿ ನಿರ್ಮಿಸಿದ ಬ್ರಿಡ್ಜ್‌ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸೈನಿಕರು ನಿರ್ಮಿಸಿದ ಬ್ರಿಡ್ಜ್‌ ಭೂಕುಸಿತದಿಂದ ಭಾರೀ ಅನಾಹುತಕ್ಕೆ ಈಡಾದ ಚೂರಲ್ಮಲಾ ಮತ್ತು ಮುಂಡಕ್ಕೈ ಪ್ರದೇಶಗಳಿಗೆ ಜೀವ ಸೇತುವೆ ಆಗಿದೆ. ಈ ಸೇತುವೆಯನ್ನು ಸೈನಿಕರ ತಂಡ ಕೇಲವ 31 ಗಂಟೆಗಳಲ್ಲಿ ನಿರ್ಮಿಸಿ ಸಾಧನೆ ಗೈದಿದೆ. 190 ಫೀಟ್‌ ಉದ್ದದ ಬೈಲಿ ಬ್ರಿಡ್ಜ್‌ ಈಗ ಎಲ್ಲರ ಗಮನ ಸೆಳೆದಿದೆ.

Indian Army Constructs 190-Foot Bailey Bridge in 31 Hours to Connect Landslide-Hit Villages in Wayanad

ಬ್ರಿಡ್ಜ್‌ ನಿರ್ಮಿಸಿದ್ದು ಹೇಗೆ?

ಮಂಗಳವಾರ ವಯನಾಡಿನಲ್ಲಿ ಭೂ ಕುಸಿತವಾಗುತ್ತಿದ್ದಂತೆ ಅಲರ್ಟ್‌ ಆದ ಸೇನಾ ತಂಡ, ಎರಡು ಗ್ರಾಮಗಳ ಜೋಡಣೆಗೆ ಒಂದು ಸೇತುವೆ ನಿರ್ಮಿಸುವ ಬ್ಲ್ಯೂ ಪ್ರಿಂಟ್‌ ಅದಾಗಲೇ ನಿರ್ಮಿಸಿ ಆಗಿತ್ತು. ಅದಕ್ಕಾಗಿ ಬೆಂಗಳೂರಿನಿಂದ 10 ಅಡಿ ಉದ್ದದ ಪ್ಯಾನಲ್‌ಗಳನ್ನು 20 ಟ್ರಕ್‌ಗಳಲ್ಲಿ ಬೆಂಗಳೂರಿನಿಂದ ಚೂರಲ್‌ಮಲಾಗೆ ಸಾಗಿಸಲಾಯಿತು. ಈ ಬ್ರಿಡ್ಜ್‌ ನಿರ್ಮಿಸಲು ಒಟ್ಟಾರೆಯಾಗಿ 19 ಸ್ಟೀಲ್‌ ಪ್ಯಾನಲ್‌ಗಳ ಸಹಾಯದಿಂದ 190 ಅಡಿ ಬ್ರಿಡ್ಜ್‌ ನಿರ್ಮಿಸಲಾಯಿತು.

ಈ ಬ್ರಿಡ್ಜ್‌ ನಿರ್ಮಾಣ ಕಾರ್ಯಕ್ಕೆ ಮಂದ್ರಾಸ್‌ನಿಂದ ನುರಿತ ಇಂಜಿನಿಯರ್‌ಗಳ ತಂಡ ಸೇನೆಯೊಂದಿಗೆ ಕೈ ಜೋಡಿಸಿತು. ಇಂಜಿನಿಯರ್‌ಗಳು ಜುಲೈ 31 ಬೆಳಗ್ಗೆ 9 ಗಂಟೆಗೆ ಸ್ಥಳಕ್ಕೆ ಬಂದಿಳಿಯಿತು. 140 ಅಧಿಕಾರಿಗಳ ತಂಡದಿಂದ ಬ್ರಿಡ್ಜ್‌ ನಿರ್ಮಾಣ ಕಾರ್ಯ ಆರಂಭವಾಯಿತು. ಈ ಸೇತುವೆ ಮೇಲೆ ಒಂದು ಟ್ರಕ್‌ ಓಡಾಡುವ ಸ್ಥಳವನ್ನು ನಿರ್ಮಿಸಲಾಯಿತು. ಈ ಬ್ರಿಡ್ಜ್‌ ಸುಮಾರು 24 ಟನ್‌ಗಳ ಭಾರವನ್ನು ಸಹಿಬಲ್ಲದಾಗಿದೆ.

Indian Army Constructs 190-Foot Bailey Bridge in 31 Hours to Connect Landslide-Hit Villages in Wayanad

ಸೈನಿಕರ ತಂಡದ ಶ್ರಮದಿಂದ ಆಗಸ್ಟ್‌ 1, ಸಂಜೆ 6 ಗಂಟೆಗೆ ಈ ಬ್ರಿಡ್ಜ್‌ ನಿರ್ಮಾಣ ಕಾರ್ಯ ಪೂರ್ಣ ಗೊಂಡಿತು. ಎಲ್ಲೆಡೆ ಹರ್ಷೋದ್ಘಾರ.. ಮೊದಲು ಸೇನಾ ವಾಹನ ಚಲಾಯಿಸಿತು. ನಂತರ ಆಂಬ್ಯುಲೆನ್ಸ್‌ ಹೋಗಲು ಅನುವು ಮಾಡಿಕೊಡಲಾಯಿತು. ಸೈನಿಕರ ಈ ಮಹತ್ತರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಕನ್ನಡಿಗರ ನರಳಾಟ

ಕೇರಳದ ಭೂ ಕುಸಿತದಲ್ಲಿ ಕರ್ನಾಟಕದ 40 ರಿಂದ 45 ಕುಟುಂಬಗಳು ಸಿಲುಕಿಕೊಂಡಿವೆ. ಈ ಕುಟುಂಬಗಳು ಸದ್ಯ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ರಾಜ್ಯದ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಅನೇಕ ಕುಟುಂಬಗಳು ತಮ್ಮ ಆತ್ಮೀಯರನ್ನು ಕಳೆದುಕೊಂಡಿವೆ. ತಮ್ಮವರನ್ನು ಗುರುತಿಸಲು ಅಲದಾಟ ನಡೆಸುತ್ತಿದ್ದಾರೆ.

Indian Army Constructs 190-Foot Bailey Bridge in 31 Hours to Connect Landslide-Hit Villages in Wayanad

ದಿನಗೂಲಿ ಕೆಲಸಗಾರರು

ಕರ್ನಾಟಕದಿಂದ ಹಲವು ಜನ ಜೀವನೋಪಾಯಕ್ಕಾಗಿ ವಾಯನಾಡಿಗೆ ತೆರಳಿದ್ದರು. ಅಲ್ಲಿ ದಿನಗೂಲಿ ಕೆಲಸವನ್ನು ಮಾಡುತ್ತಿದ್ದರು. ಟೀ ಎಸ್ಟೆಟ್‌ಗಳಲ್ಲಿ ರಾಜ್ಯದ ಜನರು ಹೆಚ್ಚಾಗಿ ಕಂಡು ಬರುತ್ತಿದ್ದರು. ಈ ಘಟನೆಯಲ್ಲಿ ನಾಪತ್ತೆಯಾದ 15 ಜನರಲ್ಲಿ ಮೂರು ಮಂಡ್ಯ ಹಾಗೂ ನಾಲ್ವರು ಚಾಮರಾಜನಗರದವರು ಮೃತ ಪಟ್ಟಿರುವುದು ಧೃಡಪಟ್ಟಿದೆ. ನಾಪತ್ತೆಯಾದವರ ಶೋಧ ಕಾರ್ಯ ಭರದಿಂದ ನಡೆಯುತ್ತಿದೆ.

ಮೂರ್ನಾಲ್ಕು ದಿನಗಳಿಂದ ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಬದುಕಿಳಿದವರನ್ನು ರಕ್ಷಿಸುವ ಕೆಲಸಕ್ಕೆ ಚುರುಕು ಮುಟ್ಟಿದೆ. ಇನ್ನು ಭೂಕುಸಿತದ ಸ್ಥಳದಲ್ಲಿ ಸ್ಥಾಪಿಸಲಾ ಗಂಜಿ ಕೇಂದ್ರಗಳಲ್ಲಿ ನೋವಿನ ಆಕ್ರಂದನ ಮುಗಿಲು ಮುಟ್ಟಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+