India weather update: ಮಳೆ, ಬಿಸಿ ಗಾಳಿ ಬಗ್ಗೆ ಹವಾಮಾನ ಇಲಾಖೆ ಅಪ್‌ಡೇಟ್ ಇಲ್ಲಿದೆ
ನವದೆಹಲಿ, ಏಪ್ರಿಲ್. 28: ಭಾರತೀಯ ಹವಾಮಾನ ಇಲಾಖೆಯು ತನ್ನ ಇತ್ತೀಚಿನ ಹವಾಮಾನ ವರದಿಯಲ್ಲಿ, ಮತ್ತೆ ದೇಶದ ಹಲವಾರು ರಾಜ್ಯಗಳನ್ನು ಶಾಖದ ಅಲೆಗಳು ಕಾಡುವ ಬಗ್ಗೆ ಎಚ್ಚರಿಕೆಗಳನ್ನು ನೀಡಿದೆ. ನಿನ್ನೆಯಷ್ಟೇ ಹಲವು ಪ್ರದೇಶದಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದ ಐಎಂಡಿ ಮತ್ತೆ ಬಿಸಿ ಗಾಳಿಯ ಎಚ್ಚರಿಕೆ ನೀಡಿದೆ.
"ಮುಂದಿನ 5 ದಿನಗಳಲ್ಲಿ ಪೂರ್ವ ಮತ್ತು ದಕ್ಷಿಣ ಪೆನಿನ್ಸುಲರ್ ಭಾರತದಲ್ಲಿ ಬಿಸಿ ಗಾಳಿಯಿಂದಾಗಿ ತೀವ್ರತರವಾದ ಶಾಖದ ಅಲೆಗಳು ಮುಂದುವರೆಯುವ ಸಾಧ್ಯತೆಯಿದೆ" ಎಂದು ಹೇಳಿದೆ. ಇದಲ್ಲದೇ, ಪಶ್ಚಿಮ ಹಿಮಾಲಯ ಪ್ರದೇಶವು ಏಪ್ರಿಲ್ 28 ರಿಂದ 30 ರ ನಡುವಿನ ಅವಧಿಯಲ್ಲಿ ಗುಡುಗು ಮತತ್ಉ ಮಿಂಚು ಮತ್ತು ಬಿರುಗಾಳಿಯ ಸಹಿತ ಮಳೆಯನ್ನು ನೋಡಲಿದೆ ಎಂದು ಐಎಂಡಿ ಹೇಳಿದೆ.

ಅದೇ ಏಪ್ರಿಲ್ 28 ಮತ್ತು 29 ರಂದು ವಾಯುವ್ಯ ಭಾರತದ ಬಯಲು ಪ್ರದೇಶಗಳ ಮೇಲೆ ಪರಿಣಾಮ ಬೀರಬಹುದು. ಏಪ್ರಿಲ್ 28 ರಿಂದ ಮೇ 1ರ ಅವಧಿಯಲ್ಲಿ ಈಶಾನ್ಯ ಭಾರತದ ಮೇಲೆ ಪ್ರತ್ಯೇಕವಾದ ಗುಡುಗು/ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಒಡಿಶಾ, ಗಂಗಾನದಿ ಪಶ್ಚಿಮ ಬಂಗಾಳದಲ್ಲಿ ಬಿಸಿಗಾಳಿ
ಒಡಿಶಾ ಮತ್ತು ಗಂಗಾನದಿ ಪಶ್ಚಿಮ ಬಂಗಾಳದಲ್ಲಿ ಕ್ರಮವಾಗಿ ಏಪ್ರಿಲ್ 15 ಮತ್ತು ಏಪ್ರಿಲ್ 17 ರಿಂದ ಬಿಸಿಗಾಳಿ ಹೆಚ್ಚಾಗಿದೆ. ಶನಿವಾರ ಭುವನೇಶ್ವರದಲ್ಲಿ ತಾಪಮಾನವು 44.6 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಇದು ಈ ಬೇಸಿಗೆಯಲ್ಲಿ ಅತ್ಯಂತ ಗರಿಷ್ಠ ತಾಪಮಾನವಾಗಿ ದಾಖಲಾಗಿದೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲು ಇರುವುದರಿಂದ ಜನರು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮನೆಯಿಂದ ಹೊರಗೆ ಬರದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಅದೇ ರೀತಿ ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದಂತೆ, ಐದು ದಿನಗಳು ಬಿಸಿಗಾಳಿ ತೀವ್ರಗೊಳ್ಳುವ ನಿರೀಕ್ಷೆಯಿದೆ. ಇದರಿಂದ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಗರಿಷ್ಠ ಹಗಲಿನ ತಾಪಮಾನದಲ್ಲಿ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಮಾಹಿತಿ ನೀಡಿದೆ.
dConvective clouds are persisting with the possibility of light to moderate spell of rainfall at many places accompanied with isolated thunderstroms, lightning and gusty winds over Northeastern States (Arunachal Pradesh, Assam, east Meghalaya, Nagaland and Manipur) and 1/2 pic.twitter.com/EieBsV0GwW
— India Meteorological Department (@Indiametdept) April 28, 2024
ಹಲವಾರು ರಾಜ್ಯಗಳಲ್ಲಿ ಮಳೆ
ಏಪ್ರಿಲ್ 28 ರಿಂದ 30 ರ ನಡುವಿನ ಅವಧಿಯಲ್ಲಿ ಜಮ್ಮು-ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲ ಪ್ರದೇಶದ ಪ್ರದೇಶಗಳು ತಕ್ಕಮಟ್ಟಿಗೆ ವ್ಯಾಪಕ, ಸಾಧಾರಣ ಮಳೆ ಅಥವಾ ಹಿಮಪಾತಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಇದೇ ಅವಧಿಯಲ್ಲಿ ಉತ್ತರಾಖಂಡದಲ್ಲಿಯೂ ಕೂಡ ಪ್ರತ್ಯೇಕ ಮಳೆ ಬೀಳಲಿದೆ. ಏಪ್ರಿಲ್ 27 ಮತ್ತು 28 ರಂದು ಪಂಜಾಬ್‌ನಲ್ಲಿ ಮತ್ತು ಏಪ್ರಿಲ್ 27 ರಂದು ಹರಿಯಾಣದ ಮೇಲೆ ಪ್ರತ್ಯೇಕವಾದ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ಏಪ್ರಿಲ್ 28 ರಿಂದ ಮೇ 1 ರ ನಡುವೆ, ಅರುಣಾಚಲ ಪ್ರದೇಶದ ಮೇಲೆ ಪ್ರತ್ಯೇಕವಾದ ಗುಡುಗು ಮತ್ತು ಮಿಂಚು ಮತ್ತು ಬಿರುಗಾಳಿಯೊಂದಿಗೆ ವ್ಯಾಪಕ, ಮಧ್ಯಮ ಮಳೆ ಅಥವಾ ಹಿಮಪಾತವಾಗುವ ಸಂಭವವಿದೆ. ಅಸ್ಸಾಂ ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಸಾಕಷ್ಟು ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.
"ಏಪ್ರಿಲ್ 28 ರಿಂದ ಮೇ 1 ರ ಅವಧಿಯಲ್ಲಿ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಮತ್ತು ಮೇಘಾಲಯದಲ್ಲಿ ಪ್ರತ್ಯೇಕವಾದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು ಏಪ್ರಿಲ್ 30 ಮತ್ತು ಮೇ 1 ರಂದು ಅರುಣಾಚಲ ಪ್ರದೇಶದಲ್ಲಿ ಪ್ರತ್ಯೇಕವಾದ ಭಾರೀ ಮಳೆಯಾಗುತ್ತದೆ" ಎಂದು ಹವಾಮಾನ ಇಲಾಖೆಯ ಅಪ್‌ಡೇಟ್ ಹೇಳಿದೆ.
-
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Gold Rate Today: ಮತ್ತೆ ಏರಿಕೆ ಕಂಡ ಚಿನ್ನದ ದರ: ಇಂದು 10 ಗ್ರಾಂ ಬಂಗಾರದ ಬೆಲೆ 1,58,620 ರೂಪಾಯಿ -
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ -
Heavy Rain: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ: ಐಎಂಡಿ -
ಆಲಿಕಲ್ಲು ಮಳೆಗೆ ನೆಲಕಚ್ಚಿದ ಮಾವು, ಹಲಸು, ಕಲ್ಲಂಗಡಿ; ಕೈಗೆ ಬಂದ ತುತ್ತು ಬಾಯಿಗಿಲ್ಲ -
Rain Alert: ಬೇಸಿಗೆ ಮಳೆಗೆ ಬೆಂಗಳೂರಿನ ಕೆಲವೆಡೆ ಸಂಚಾರ ಅಸ್ತವ್ಯಸ್ತ, ಮಾ.21ರವರೆಗೂ ಮಳೆ -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ? -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ -
Viral Video: 'ಓಂಕಾರ' ಚಿತ್ರದ ಬೀಡಿ ಜಲೈಲೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಬ್ರೆಜಿಲ್ ಬೆಡಗಿಯರು -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ











Click it and Unblock the Notifications