India weather: ವಾರಾಂತ್ಯದಲ್ಲಿ ಈ ಭಾಗಗಳಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆ ಮುನ್ಸೂಚನೆ
ನವದೆಹಲಿ, ಡಿಸೆಂಬರ್ 14: ಮೈಚಾಂಗ್ ಚಂಡಮಾರುತ ಹಿನ್ನೆಲೆ ಕಳೆದ ವಾರದಿಂದ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಅಬ್ಬರದ ಮಳೆ ದೊಡ್ಡ ಡೊಡ್ಡ ಅವಾಂತರಗಳನ್ನೇ ಸೃಷ್ಟಿ ಮಾಡಿತ್ತು. ಇದೀಗ ಈ ಚಂಡಮಾರುತದ ಪ್ರಭಾವ ಕಡಿಮೆಯಾಗಿದೆ. ಆದರೂ ಕೂಡ ಈ ವಾರಾಂತ್ಯದಲ್ಲಿ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಶುಕ್ರವಾರದಿಂದ ಮುಂದಿನ ಸೋಮವಾರದವರೆಗೆ (ಡಿಸೆಂಬರ್ 15-18) ತಮಿಳುನಾಡು ಮತ್ತು ಕೇರಳದಾದ್ಯಂತ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ.

ಅಷ್ಟೇ ಅಲ್ಲದೆ ಶನಿವಾರದಿಂದ ಸೋಮವಾರದವರೆಗೆ (ಡಿಸೆಂಬರ್ 16-18) ದಕ್ಷಿಣ ತಮಿಳುನಾರು ಮತ್ತು ಭಾನುವಾರ ಮತ್ತು ಸೋಮವಾರದಂದು (ಡಿಸೆಂಬರ್ 17-18) ಕೇರಳದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆ (64.5-115.5 ಮಿಮೀ) ಬೀಳುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಈ ಎರಡು ರಾಜ್ಯಗಳ ಹಲವೆಡೆ ಯೆಲ್ಲೋ ಅಲರ್ಟ್ ಅನ್ನೂ ಘೋಷಣೆ ಮಾಡಲಾಗಿದೆ.
ತಮಿಳುನಾಡಿನ ನಾಗಪಟ್ಟಣಂ, ತಂಜಾವೂರು, ತಿರುವಾರೂರ್, ಪುದುಕೋಟೈ, ರಾಮನಾಥಪುರಂ, ತೂತುಕುಡಿ, ತಿರುನಲ್ವೇಲಿ ಮತ್ತು ಕನ್ಯಾಕುಮಾರಿ, ಕೇರಳದ ಎರ್ನಾಕುಲಂ ಸೇರಿದಂತೆ ವಾರಾಂತ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಈಗಾಗಲೇ ತಮಿಳುನಾಡಿನ ಚೈನ್ನೈನಲ್ಲಿ ಸುನಾಮಿಯಂತಹ ಮಳೆಯಾಗಿದ್ದು, ಆದ್ದರಿಂದ ಎಚ್ಚೆತ್ತುಕೊಳ್ಳುವಂತೆ ಮುಂಜಾಗ್ರತಾ ಕ್ರಮವಾಗಿ ಜಾಗೃತರಾಗಿರಲು ಸಲಹೆಯನ್ನು ಕೂಡ ನೀಡಲಾಗಿದೆ.
ಭಾನುವಾರದವರೆಗೇ ಭಾರೀ ಮಳೆ ಮುನ್ಸೂಚನೆ
ಚೆನ್ನೈನಲ್ಲಿ ಮೈಚಾಂಗ್ ಚಂಡಮಾರುತದ ಪರಿಣಾಮ ಕಡಿಮೆಯಾಗಿದೆ, ಆದರೆ ತಮಿಳುನಾಡು ರಾಜಧಾನಿ ಈಗ ಮತ್ತೊಂದು ಸಮಸ್ಯೆಯೊಂದಿಗೆ ಹೋರಾಡುತ್ತಿದೆ. ಎನ್ನೋರ್ ಕ್ರೀಕ್‌ನಲ್ಲಿ ತೈಲ ಸೋರಿಕೆಯಾಗಿದ್ದು, ಪ್ರಸ್ತುತ ಜಲಧಾರೆಗಳನ್ನು ಸ್ವಚ್ಛಗೊಳಿಸುವ ಯತ್ನಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ. ಮೈಚಾಂಗ್ ಚಂಡಮಾರುತದ ವೇಳೆ ತಮಿಳುನಾಡು (55 ಮಿ.ಮೀ) ಮತ್ತು ಕೇರಳ (54.4 ಮಿ.ಮೀ) ಎರಡನ್ನೂ 9% ಮತ್ತು 179% ನಷ್ಟು ದೀರ್ಘಾವಧಿಯ ಹೆಚ್ಚುವರಿ ಮಳೆಗಳನ್ನು ದಾಖಲಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications