Gautham Adani: ಭಾರತ-ವಿಯೇಟ್ನಾಂ ಸಂಬಂಧ, ಆ ದೇಶದ ದೂರದೃಷ್ಟಿ ಶ್ಲಾಘಿಸಿದ ಅದಾನಿ
ವಿಯೆಟ್ನಾಂನ ದಿಟ್ಟ ಸುಧಾರಣೆಗಳ ಬಗ್ಗೆ ಶ್ಲಾಘಿಸಿದೆ ಅದಾನಿ ಗ್ರೂಪ್ ನ ಅಧ್ಯಕ್ಷ ಗೌತಮ್ ಅದಾನಿ ಅವರು ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಭಾರತ-ವಿಯೆಟ್ನಾಂ ನಡುವಿನ ಸಂಬಂಧದಲ್ಲಿ ಪ್ರಮುಖ ಮೈಲಿಗಲ್ಲನ್ನು ಗುರುತಿಸಿದ್ದಾರೆ. ಇಂಧನ, ಲಾಜಿಸ್ಟಿಕ್ಸ್, ಬಂದರುಗಳು ಮತ್ತು ವಾಯುಯಾನದಲ್ಲಿ ಈ ಎರಡು ದೇಶಗಳು ಉತ್ತಮ ಸಹಯೋಗದ ಸಾಮರ್ಥ್ಯ ಹೊಂದಿವೆ ಎಂಬುದನ್ನು ವಿವರಿಸಿದ್ದಾರೆ.
ವಿಯೆಟ್ನಾಂ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹೆಚ್.ಇ. ಟೋ ಲಾಮ್ ಅವರನ್ನು ಭೇಟಿ ಮಾಡುವುದು ಒಂದು ಯಾಗುವುದು "ಒಂದು ಸೌಕರ್ಯ" ಇದ್ದಂತೆ ಎಂದು ಬಣ್ಣಿಸಿದ್ದಾರೆ. ಬಂದರು, ಇಂಧನ, ಲಾಜಿಸ್ಟಿಕ್ಸ್ ಮತ್ತು ವಾಯುಯಾನದಲ್ಲಿ ವಿಯೆಟ್ನಾಂ ಅನ್ನು ಪ್ರಾದೇಶಿಕ ನಾಯಕನನ್ನಾಗಿ ಮಾಡಲು ಪ್ರಧಾನ ಕಾರ್ಯದರ್ಶಿಗಳು 'ಮಹತ್ವದ ಸುಧಾರಣೆ ಕ್ರಮಗಳು, ಅವರ ದೂರದೃಷ್ಟಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಒಟ್ಟಾರೆ ವಿಯೆಟ್ನಾಂ ದೂರ ದೃಷ್ಟಿಯನ್ನು ಅದಾನಿ ಹೊಗಳಿದರು.

ಎರಡು ದೇಶಗಳ ಮಧ್ಯೆ ಸಾಂಸ್ಥಿಕ ಸಂಬಂಧ ಚೆನ್ನಾಗಿವೆ. ಕಳೆದ 2024-25 ರ ಹಣಕಾಸು ವರ್ಷದಲ್ಲಿ ಭಾರತ-ವಿಯೆಟ್ನಾಂ ದ್ವಿಪಕ್ಷೀಯ ವ್ಯಾಪಾರವು 15.76 ಬಿಲಿಯನ್ ಡಾಲರ್‌ಗೆ ತಲುಪಿತ್ತು. ಇದು ಅದರ ಹಿಂದಿನ ವರ್ಷಕ್ಕಿಂತ 6.4ರಷ್ಟು ಅಧಿಕ. ವಿಯೆಟ್ನಾಂಗೆ ಭಾರತದ ರಫ್ತು 5.43 ಬಿಲಿಯನ್ ಡಾಲರ್ ಆಗಿದ್ದು, ಅಲ್ಲಿಂದ ಭಾರತ 10.33 ಬಿಲಿಯನ್ ಡಾಲರ್ ಉತ್ಪಾದನೆಯನ್ನು ಆಮದು ಮಾಡಿಕೊಳ್ಳುತ್ತದೆ. 2025 ರ ಬ್ರಿಕ್ಸ್ ಶೃಂಗಸಭೆಯ ಸಮಯದಲ್ಲಿ ಈ ಸಂಬಂಧದ ಭಾಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಫಾಮ್ ಮಿನ್ಹ್ ಚಿನ್ ಅವರು ಮರ್ಧಯ ಮಾತುಕತೆಗಳು ನಡೆದಿದ್ದವು.
ಮೂಲಸೌಕರ್ಯದಲ್ಲಿ ವಲಯದಲ್ಲಿ ವಿಯೆಟ್ನಾಂ ಹೂಡಿಕೆ ಹೆಚ್ಚಿನ ಹೂಡಿಯನ್ನು ಸಕ್ರಿಯಗೊಳಿಸಿದೆ. 2024 ರಲ್ಲಿ ಅದಾನಿ ಗ್ರೂಪ್ ಲಾಜೆಸ್ಟಿಕ್ಸ್ ಮತ್ತು ವಾಯುಯಾನ ತಂತ್ರದ ಭಾಗವಾಗಿ ಬಂದರು ಅಭಿವೃದ್ಧಿಯೊಂದಿಗೆ ಹೂಡಿಕೆ ಮಾಡುತ್ತಿದೆ. ಅದು ಲಾಂಗ್ ಥಾನ್ ಮತ್ತು ಚು ಲೈ ವಿಮಾನ ನಿಲ್ದಾಣಗಳಲ್ಲಿ ಹೂಡಲು ಪ್ಲಾನ್ ಮಾಡಿಕೊಂಡಿದೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ನವೀಕರಿಸಬಹುದಾದ ಇಂಧನ ಯೋಜನೆ ಹಾಗೂ ಹೂಡಿಕೆ ಯೋಜನೆಗಳು 10 ಬಿಲಿಯನ್ ಡಾಲರ್‌ಗೂ ಹೆಚ್ಚಾಗುವ ನಿರೀಕ್ಷೆ ಇದೆ. ಲಾಜಿಸ್ಟಿಕ್ಸ್ ಅಂಗವಾದ ಅದಾನಿ ಬಂದರುಗಳು ಮತ್ತು ಎಸ್‌ಇಝಡ್ (APSEZ) ಡಾ ನಾಂಗ್‌ನಲ್ಲಿ ಬಂದರಿಗೆ ಅನುಮೋದನೆ ಸಿಕ್ಕಿದೆ. ಇದರಿಂದ ಅದಾನಿ ಗ್ರೂಪ್‌ನ ಉದ್ದೇಶ, ಯೋಜನೆಗಳು ವಿಸ್ತರಣೆ ಆಗಲಿವೆ.
ವಿಶಾಲ ದೃಷ್ಟಿಕೋನ, ಪರಿವರ್ತನೆ ಗುರಿ
ಅದಾನಿಯ ಅವರು ಹೇಳಿಕೆ ಹಿಂದೆ ಸುವ್ಯವಸ್ಥಿತ ಕಾರ್ಯತಂತ್ರದ ಉದ್ದೇಶ ಅಡಗಿದೆ. ಲಾಜಿಸ್ಟಿಕ್ಸ್ ಹಾಗೂ ಬಂದರು ಕ್ಷೇತ್ರಗಳ ಮೇಲಿನ ಹೂಡಿಕೆಯು ದೇಶದ ಮಹತ್ತರ ದೃಷ್ಟಿಕೋನ ಮತ್ತು ಇಂಡೋ-ಪೆಸಿಫಿಕ್‌ನಾದ್ಯಂತ ಮಹತ್ವದ ಸಹಕಾವನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗುತ್ತದೆ. ವಾಯುಯಾನ ಮೂಲಸೌಕರ್ಯ ವೃದ್ಧಿಯು ವಿಯೆಟ್ನಾಂನ ಬೆಳವಣಿಗೆಯ ಪಥಕ್ಕೆ ಅನುಗುಣವಾಗಿದೆ.
ಮೂಲಸೌಕರ್ಯ ವಿಸ್ತರಣೆ
ಅದಾನಿ ಗ್ರೂಪ್ ಹುಡಿಕೆಯು ಸಾರ್ವಜನಿಕ ಅನುಮೋದನೆ ಮತ್ತು ಖಾಸಗಿ ಹೂಡಿಕೆ ಯೋಜನೆಗಳ ಏಕ ಮುಖ ಚಲನೆ ಸ್ಪಷ್ಟವಾದ ಮಾರ್ಗಸೂಚಿ ಸೂಚಿಸುತ್ತದೆ. ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಅದಾನಿ ಹೂಡಿಕೆಗಳು, ವಿಯೆಟ್ನಾಂನ ಪ್ರಾದೇಶಿಕ ಸಂಪರ್ಕ ಮತ್ತು ವ್ಯಾಪಾರ ಸಾಮರ್ಥ್ಯವು ಮೂಲಸೌಕರ್ಯ ವಿಸ್ತರಣೆಗೆ ಕಾರಣವಾಗುತ್ತದೆ. ಉತ್ತಮ ಇಂಧನ ಸಹಯೋಗದಿಂದ ಇಂಧನ ಮೂಲಗಳಲ್ಲಿ ಅದಾನಿಯ ಬೆಳೆಯುತ್ತಿರುವ ಪರಿಯು ಗ್ರೀನ್ ಎನರ್ಜಿ (ಹಸಿರು ಶಕ್ತಿ) ಮೇಲಿನ ಆಸಕ್ತಿ ಗಳು ಹೆಚ್ಚಾಗಿ ಎರಡು ಕಡೆಗಿನ ಯೋಜನೆಗಳಿಗೆ ದಾರಿ ಮಾಡಿಕೊಡುತ್ತವೆ. ಇನ್ನೂ ಪ್ರಾದೇಶಿಕವಾಗಿ ಇದೆಲ್ಲ ಸಂಬಂದ, ಹೂಡಿಕೆ ಬೆಳವಣಿಗೆಗಳು ದೊಡ್ಡ ಇಂಡೋ-ಪೆಸಿಫಿಕ್ ವಾಸ್ತುಶಿಲ್ಪದಂತೆ ಕಾಣುತ್ತವೆ. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ.
ಹಕ್ಕು ನಿರಾಕರಣೆ (DISCLAIMER)
ಈ ಸಂದೇಶ ಮತ್ತು ಅದರೊಂದಿಗೆ ಇರುವ ಮಾಹಿತಿ, ಎಲ್ಲ ಡಾಕ್ಯುಮೆಂಟ್‌ಗಳು ಸಂಪೂರ್ಣವಾಗಿ ಗೌಪ್ಯ ಮತ್ತು ಸ್ವಾಮ್ಯದ ಮಾಹಿತಿ ಸೇರಿವೆ. ಇವುಗಳನ್ನು ಕೇವಲ ನಿರ್ದಿಷ್ಟ ಗುರಿಯುಳ್ಳ ಸ್ವೀಕರಿಸುವವರ ಉಪಯೋಗಕ್ಕಾಗಿ ಮಾತ್ರ ರಚಿಸಲಾಗಿದೆ. ಈ ಸಂದೇಶವು ನಿಮ್ಮ ಗುರಿ ಅಲ್ಲದವರಿಗಾಗಿದ್ದರೆ, ಅದರ ಮಾಹಿತಿಯು ಯಾವುದೇ ರೀತಿಯ ವೀಕ್ಷಣೆ, ಬಳಕೆ, ಹಂಚಿಕೆ, ಪ್ರಸಾರ, ಪ್ರತಿ, ಅಥವಾ ಬಹಿರಂಗಗೊಳಿಸುವುದನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ. ಈ ಸಂದೇಶವನ್ನು ನೀವು ಸ್ವೀಕರಿಸಿದರೆ, ದಯವಿಟ್ಟು ತಕ್ಷಣ ಕಳುಹಿಸುವ ವ್ಯಕ್ತಿಯನ್ನು ಮಾಹಿತಿ ನೀಡಬೇಕು. ಮುದ್ರಿತವಾಗಿರಲಿ ಅಥವಾ ಡಿಜಿಟಲ್ ಮಾಧ್ಯಮದಲ್ಲಿ, ಸಂಪೂರ್ಣವಾಗಿ ಅಳಿಸಬೇಕು. ಈ ಸಂದೇಶದಲ್ಲಿ ಪ್ರಸ್ತಾಪಿಸಿ ಎಲ್ಲ ಅಭಿಪ್ರಾಯಗಳು ಅಥವಾ ತೀರ್ಮಾನಗಳು, ವೈಯಕ್ತಿಕ ದೃಷ್ಟಿಕೋನ ವರ್ಸೆ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ ಅಧಿಕೃತ ನಿಲುವು ಪ್ರತಿಬಿಂಬಿಸುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು.












Click it and Unblock the Notifications