Chandrayaan-3 Mission: ಚಂದ್ರನ ಮೇಲೆ ನಡೆದಾಡಿದ ಭಾರತ; ಲ್ಯಾಂಡರ್‌ನಿಂದ ಯಶಸ್ವಿಯಾಗಿ ಕೆಳಗಿಳಿದ ರೋವರ್!
ಬೆಂಗಳೂರು, ಆಗಸ್ಟ್ 24: ಭಾರತದ ತ್ರಿವಿಕ್ರಮ ಸಾಧನೆಗಳಲ್ಲಿ ಒಂದಾಗಿರುವ ಚಂದ್ರಯಾನ-3ರ ಲ್ಯಾಂಡರ್ ವಿಕ್ರಮ್ ನಿನ್ನೆ ಸಂಜೆ ವೇಳೆಗೆ ಚಂದ್ರನ ಮೇಲೆ ಕಾಲಿಟ್ಟಿದೆ. ಈಗ ಲ್ಯಾಂಡರ್‌ನಿಂದ ಹೊರಬಂದ ರೋವರ್ ಪ್ರಗ್ಯಾನ್ ಕೂಡ ಯಶಸ್ವಿಯಾಗಿ ಹೊರಬಂದಿದೆ ಎಂದು ಗುರುವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಾಹಿತಿಯನ್ನು ಹಂಚಿಕೊಂಡಿದೆ.
ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆದ ಬಳಿಕ 26 ಕೆಜಿ ತೂಕದ ಪ್ರಗ್ಯಾನ್ ರೋವರ್ ಕೂಡ ಚಂದ್ರನ ಮೇಲೆ ಇಳಿಯಲು ಯಶಸ್ವಿಯಾಗಿದೆ. ಈ ಬಗ್ಗೆ ಇಸ್ರೋ ಅಧಿಕೃತವಾಗಿ ಟ್ವೀಟ್ ಮಾಡಿದೆ.

ಈಗ ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ನಡೆದಾಡುವ ಮೂಲಕ ಚಂದ್ರನ ಮೇಲೆ ಭಾರತದ ಹೆಜ್ಜೆ ಗುರುತನ್ನು ಮೂಡಿಸಿದೆ. ಇದರಲ್ಲಿ ವಿಕ್ರಮ್‌ನ ಒಡಲಿನಿಂದ ರಾಂಪ್ ಮೂಲಕ ಪ್ರಗ್ಯಾನ್ ರೋವರ್ ಹೊರಬರುತ್ತಿರುವ ದೃಶ್ಯಾವಳಿಯನ್ನು ತೋರಿಸಲಾಗಿದೆ.ಪ್ರಗ್ಯಾನ್ ರೋವರ್ ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರ್‌ನಿಂದ ಹೊರಬರುವುದರೊಂದಿಗೆ ಚಂದ್ರಯಾನ-3ಯ ದೊಡ್ಡ ಮಟ್ಟದ ಕೆಲಸ ಪೂರ್ಣಗೊಂಡಂತಾಗಿದೆ. ಇನ್ನು 14 ದಿನ ಚಂದ್ರನ ನೆಲದಲ್ಲಿ ಪ್ರಗ್ಯಾನ್ ರೋವರ್ ತನ್ನ ಕೆಲಸಗಳನ್ನು ಮಾಡಲಿದೆ.
ವಿಕ್ರಮ್-ಲ್ಯಾಂಡರ್‌ನ ಒಳಗಿನಿಂದ ಪ್ರಗ್ಯಾನ್-ರೋವರ್ ಅನ್ನು ಯಶಸ್ವಿಯಾಗಿ ನಿಯೋಜಿಸಿದ್ದಕ್ಕಾಗಿ ನಾನು ಮತ್ತೊಮ್ಮೆ ಇಸ್ರೋ ತಂಡವನ್ನು ಮತ್ತು ಎಲ್ಲಾ ಸಹ ನಾಗರಿಕರನ್ನು ಅಭಿನಂದಿಸುತ್ತೇನೆ. ವಿಕ್ರಮ್ ಲ್ಯಾಂಡರ್‌ನ ಕೆಲವು ಗಂಟೆಗಳ ನಂತರ ಅದು ಹೊರಡುವುದು ಇನ್ನೂ ಯಶಸ್ಸನ್ನು ಗುರುತಿಸಿದೆ ಎಂದು ದ್ರೌಪದಿ ಮುರ್ಮು ಹೇಳಿದ್ದಾರೆ.
ಈ ಸಾಧನೆಗೆ ಅಮೆರಿಕ, ಯುರೋಪ್, ರಷ್ಯಾ ಮತ್ತು ನೆರೆಯ ಪಾಕಿಸ್ತಾನದಿಂದಲೂ ಅಭಿನಂದನೆಗಳು ಬಂದಿವೆ.ಇಸ್ರೋದ ಈ ಸಾಧನೆಯನ್ನು ಬಾಹ್ಯಾಕಾಶ ಇತಿಹಾಸದಲ್ಲಿ ಅವಿಸ್ಮರಣೀಯ ಕ್ಷಣ ಎಂದು ಹೇಳಲಾಗಿದೆ. ಇದಕ್ಕೂ ಕೆಲವು ದಿನಗಳ ಹಿಂದೆ ರಷ್ಯಾದ ಮಾನವ ರಹಿತ ಲೂನಾ-25 ಬಾಹ್ಯಾಕಾಶ ನೌಕೆ ನಿಯಂತ್ರಣ ತಪ್ಪಿ ಚಂದ್ರನ ಮೇಲೆ ಬಿದ್ದಿತ್ತು.












Click it and Unblock the Notifications