ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking news: ಇಸ್ರೋದ 2022ರ ಮೊದಲ ಮಿಷನ್ PSLV-C52 ಯಶಸ್ವಿ ಉಡಾವಣೆ

|
Google Oneindia Kannada News

ಅಮರಾವತಿ, ಫೆಬ್ರವರಿ 14: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಫೆಬ್ರವರಿ 14ರ ಸೋಮವಾರದಂದು 2022 ರ ಮೊದಲ ಉಡಾವಣೆಯನ್ನು ಇಂದು ಮುಂಜಾನೆ ನಡೆಸಿದೆ. ಇಸ್ರೋ ಪಿಎಸ್‌ಎಲ್‌ವಿ-ಸಿ52 ಮಿಷನ್ ಎರಡು ಉಪಗ್ರಹಗಳ ಜೊತೆ ಯಶಸ್ವಿಯಾಗಿ ಉಡಾವಣೆ ಆಗಿದೆ.

ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C52) ಉಡಾವಣೆಯು ಇಂದು ಮುಂಜಾನೆ 05:59 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್‌ನಲ್ಲಿ ನಡೆದಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ 2022 ರ ಮೊದಲ ಉಡಾವಣಾ ಕಾರ್ಯಾಚರಣೆ ಇದಾಗಿದ್ದು, ಯಶಸ್ವಿಯಾಗಿ ಉಡಾವಣೆ ಮಾಡಲು ಎಲ್ಲಾ ತಯಾರಿಯನ್ನು ಇಸ್ರೋ ಈಗಾಗಲೇ ಮಾಡಿಕೊಂಡಿತ್ತು.

 ಪ್ರೇಮಿಗಳ ದಿನದಂದು ಇಸ್ರೋದ 2022ರ ಮೊದಲ ಮಿಷನ್ PSLV-C52 ಉಡಾವಣೆ: ವೀಕ್ಷಣೆ ಹೇಗೆ? ಪ್ರೇಮಿಗಳ ದಿನದಂದು ಇಸ್ರೋದ 2022ರ ಮೊದಲ ಮಿಷನ್ PSLV-C52 ಉಡಾವಣೆ: ವೀಕ್ಷಣೆ ಹೇಗೆ?

ಈ ರಾಕೆಟ್​ ಮೂಲಕ ಎರಡು ದೇಶದ ರಾಡಾರ್ ಇಮೇಜಿಂಗ್ ಉಪಗ್ರಹವಾದ RISAT-1A ಅನ್ನು ಉಡಾವಣೆ ಮಾಡಲಾಗಿದೆ. ಈಗ RISAT-1A ಉಪಗ್ರಹವನ್ನು ಭೂ ವೀಕ್ಷಣಾ ಉಪಗ್ರಹ-04 (Earth Observation Satellite-04) ಎಂದು ನಾಮಕರಣ ಮಾಡಲಾಗಿದೆ.

India’s First Space Launch for 2022, a Radar Imaging Satellite Takes off With Two Others

PSLV-C52 ವಿಶೇಷತೆ ಇಲ್ಲಿದೆ...

PSLV-C52 ಅನ್ನು 1710 ಕೆಜಿ ತೂಕದ ಮಿಷನ್‌ ಆಗಿದ್ದು, ಉಡಾವಣೆಯಾದ ಕೇವಲ 17 ನಿಮಿಷಗಳಲ್ಲಿ 1,710 ಕೆಜಿ ತೂಕದ ಭೂ ವೀಕ್ಷಣಾ ಉಪಗ್ರಹವನ್ನು 529 ಕಿಮೀ ದೂರದ ಕಕ್ಷೆಗೆ ತಲುಪಿಸಲಾಗುತ್ತದೆ. ಇದನ್ನು 529 ಕಿಮೀ ಸೂರ್ಯನ ಸಿಂಕ್ರೊನಸ್ ಧ್ರುವೀಯ ಕಕ್ಷೆಯಲ್ಲಿ ಸುತ್ತುವಂತೆ ವಿನ್ಯಾಸಗೊಳಿಸಲಾಗಿದೆ.

ನಾಲ್ಕು ಹಂತಗಳು ಅಥವಾ ಇಂಜಿನ್​ಗಳನ್ನು ಹೊಂದಿರುವ ಪಿಎಸ್​ಎಲ್​ವಿ ರಾಕೆಟ್‌ನ ಒಂದೊಂದು ಹಂತದಲ್ಲಿ ಒಂದೊಂದು ರೀತಿಯ ಇಂಧನವನ್ನು ತುಂಬಲಾಗಿದೆ. ಮೊದಲ ಮತ್ತು ಮೂರನೇ ಹಂತದಲ್ಲಿ ಘನ ಇಂಧನ, ಎರಡನೇ ಮತ್ತು ನಾಲ್ಕನೇ ಹಂತದಲ್ಲಿ ದ್ರವ ಇಂಧನ ಇದೆ.

Recommended Video

ಗೋವಾ, ಉತ್ತರಾಖಂಡ್, ಉತ್ತರ ಪ್ರದೇಶ ಚುನಾವಣೆ:ಬೆಳಿಗ್ಗೆಯಿಂದ‌‌ ಏನೇನಾಯ್ತು? | Oneindia Kannada

44.4 ಮೀಟರ್ ಎತ್ತರ ಮತ್ತು 321 ಟನ್ ತೂಕದ ಪಿಎಸ್‌ಎಲ್‌ವಿ ರಾಕೆಟ್​ನ ಒಟ್ಟು ಇಂಧನದ ತೂಕವೇ 9 ಟನ್ ಇರಲಿದೆ. ಹಾಗೆಯೇ ಆರು ಬೂಸ್ಟರ್ ಮೋಟಾರ್​ಗಳನ್ನು ಇದು ಹೊಂದಿದ್ದು, ಇಂಧನ ಸಾಮರ್ಥ್ಯ ಹೆಚ್ಚಿಸಲಾಗಿದೆ. PSLV-C52 ಮಿಷನ್ ಸಣ್ಣ ಉಪಗ್ರಹಗಳನ್ನು ಒಯ್ಯುತ್ತದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ & ಟೆಕ್ನಾಲಜಿ (IIST) ನಿಂದ ವಿದ್ಯಾರ್ಥಿಗಳು ಮಾಡಿದ ಉಪಗ್ರಹ INSPIREsat-1 ಹಾಗೂ ಇಸ್ರೋ ನಿರ್ಮಾಣ ಮಾಡಿದ INS-2TD ಉಪಗ್ರಹವನ್ನು PSLV-C52 ಮಿಷನ್ ಒಯ್ಯಲಿದೆ. NSPIREsat-1 ಅನ್ನು ಅಮೆರಿಕದ ಕೊಲೊರಾಡೋ ವಿಶ್ವವಿದ್ಯಾಲಯದ ವಾಯುಮಂಡಲ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಪ್ರಯೋಗಾಲಯದ ಸಹಯೋಗದೊಂದಿಗೆ ಈ ಉಪಗ್ರಹ ನಿರ್ಮಾಣ ಮಾಡಲಾಗಿದೆ. (ಒನ್‌ಇಂಡಿಯಾ ಸುದ್ದಿ)

English summary
India's first space launch for 2022, a radar imaging satellite takes off with two others says ISRO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X