ಮಾನವ ಪರೀಕ್ಷೆಗೆ ಅನುಮೋದನೆ ಪಡೆದ ದೇಶದ ಮೊದಲ ಎಂಆರ್‌ಎನ್‌ಎ ಲಸಿಕೆ

ನವದೆಹಲಿ, ಡಿಸೆಂಬರ್ 11: ಪುಣೆ ಮೂಲದ ಔಷಧ ತಯಾರಿಕಾ ಸಂಸ್ಥೆ ಜೆನ್ನೋವಾ ಅಭಿವೃದ್ಧಿಪಡಿಸಿದ ಲಸಿಕೆ ಮಾನವ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ಪಡೆದ ಭಾರತದ ಮೊದಲ ಸ್ವದೇಶಿ ನಿರ್ಮಿತ ಎಂಆರ್‌ಎನ್‌ಎ ಲಸಿಕೆ ಎನಿಸಿಕೊಂಡಿದೆ.

ಎಂಆರ್‌ಎನ್‌ಎ ಲಸಿಕೆಗಳು ಮನುಷ್ಯರ ದೇಹದಲ್ಲಿ ಪ್ರತಿರಕ್ಷಣಾ ಸ್ಪಂದನೆಯನ್ನು ಉತ್ಪಾದಿಸುವ ಸಾಂಪ್ರದಾಯಿಕ ಮಾದರಿಯನ್ನು ಬಳಸುವುದಿಲ್ಲ. ಹೀಗಾಗಿ ಜೆನ್ನೋವಾದ ಲಸಿಕೆ ಭಾರತದಲ್ಲಿ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ಪಡೆದ ಮೊದಲ ಎಂಆರ್‌ಎನ್ಎ ಲಸಿಕೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.

'ವೈರಸ್‌ನ ಸಿಂಥೆಟಿಕ್ ಆರ್‌ಎನ್‌ಎ ಮೂಲಕ ದೇಹದೊಳಗೆ ಪ್ರೋಟೀನ್ ಸೃಷ್ಟಿಸುವ ಆಣ್ವಿಕ ಸೂಚನೆಗಳನ್ನು ಎಂಆರ್‌ಎನ್‌ಎ ಲಸಿಕೆ ನಡೆಸುತ್ತದೆ' ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

 Indias First Homemade MRNA Vaccine By Gennova Gets Permission For Human Trails

'ಸಾಂಕ್ರಾಮಿಕವಲ್ಲದ, ಸಂಯೋಜನೆಗೊಳ್ಳದ ಗುಣಹೊಂದಿರುವುದರಿಂದ ಮತ್ತು ಗುಣಮಟ್ಟದ ಸೆಲ್ಯುಲರ್ ಯಾಂತ್ರಿಕತೆ ಕಾರಣ ಎಂಆರ್‌ಎನ್‌ಎ ಲಸಿಕೆಗಳು ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಅಮೆರಿಕದ ಕಂಪೆನಿಗಳಾದ ಫೈಜರ್ ಮತ್ತು ಮಾಡೆರ್ನಾಗಳು ಎಂಆರ್‌ಎನ್‌ಎ ಮಾದರಿಯಿಂದಲೇ ಅಭಿವೃದ್ಧಿಯಾಗಿದ್ದು ಶೇ 90ರಷ್ಟು ಪರಿಣಾಮಕಾರಿ ಎಂದು ತಿಳಿಸಿವೆ.

ಜೆನ್ನೋವಾ ಸಂಸ್ಥೆಯು ಅಮೆರಿಕದ ಎಚ್‌ಡಿಟಿ ಬಯೋಟೆಕ್ ಕಾರ್ಪೊರೇಷನ್ ಸಹಯೋಗದಲ್ಲಿ ಲಸಿಕೆ ಅಭಿವೃದ್ಧಿಪಡಿಸಿದೆ. ಈ ಲಸಿಕೆಗೆ ಎಚ್‌ಜಿಸಿಒ 19 ಎಂಬ ಕೋಡ್ ಹೆಸರು ನೀಡಲಾಗಿದೆ. ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಅದು ಈಗಾಗಲೇ ಸುರಕ್ಷತೆ, ಪ್ರತಿರಕ್ಷಣಾ ಸಾಮರ್ಥ್ಯ ವೃದ್ಧಿ, ಆಂಟಿಬಾಡಿ ಸಕ್ರಿಯತೆ ತಟಸ್ಥಗೊಳಿಸುವಿಕೆಗಳನ್ನು ಪ್ರದರ್ಶಿಸಿದೆ. ಇಲಿಗಳ ಮೇಲೆ ನಡೆಸಿದ ಆಂಟಿಬಾಡಿ ಪರೀಕ್ಷೆಯಲ್ಲಿ ಅದು ಪರಿಣಾಮಕಾರಿ ಎನಿಸಿದೆ ಎಂದು ಹೇಳಿಕೆ ತಿಳಿಸಿದೆ.

ಅಮೆರಿಕದ ಕಂಪೆನಿಗಳು ಅಭಿವೃದ್ಧಿಪಡಿಸಿದ ಎಂಆರ್‌ಎನ್‌ಎ ಲಸಿಕೆಗಳಿಗೆ ಸ್ಥಿರತೆ ಕಾಯ್ದುಕೊಳ್ಳಲು ಶೂನ್ಯ ಉಷ್ಣಾಂಶ ಬೇಕಿದ್ದರೆ, ಎಚ್‌ಜಿಸಿಒ19 ಲಸಿಕೆಯು 2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಎರಡು ತಿಂಗಳು ಸ್ಥಿರತೆಯನ್ನು ಉಳಿಸಿಕೊಳ್ಳಬಲ್ಲದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+