• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂವಹನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ದಾಟಿದ ಭಾರತ

By Mahesh
|

ಬೆಂಗಳೂರು, ಡಿ.7: ಸಂವಹನ ಕ್ಷೇತ್ರದಲ್ಲಿ ಭಾರತ ಹೊಸ ಮೈಲಿಗಲ್ಲು ದಾಟಿದೆ. ಭಾನುವಾರ ಮುಂಜಾನೆ ಫ್ರೆಂಚ್ ಗಯಾನಾದಲ್ಲಿ ಭಾರತದ ಜಿ-ಸ್ಯಾಟ್-16 ಅನ್ನು, ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಪ್ರತಿಕೂಲ ಹವಾಮಾನದ ಪರಿಣಾಮ ಎರಡು ಬಾರಿ ಉಡಾವಣೆ ದಿನಾಂಕವನ್ನು ಮುಂದೂಡಲಾಗಿತ್ತು.

ಫ್ರೆಂಚ್ ಗಯಾನಾದ ಕೌರೌ ಉಪಗ್ರಹ ಉಡಾವಣಾ ಕೇಂದ್ರದಿಂದ ನಭಕ್ಕೆ ಹಾರಿದ 3,181 ಕೆಜಿ ತೂಕದ ಜಿ-ಸ್ಯಾಟ್ ಮುಂದಿನ 12 ವರ್ಷಗಳವರೆಗೆ ಸಂವಹನ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲಿದೆ. ಏರಿಯನ್-5 ನೌಕೆ ಉಪಗ್ರಹವನ್ನು ಕಕ್ಷೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಮುಂಜಾನೆ 2.10 ಸುಮಾರಿಗೆ ಆಗಸಕ್ಕೆ ಉಪಗ್ರಹ ಹೊತ್ತ ನೌಕೆ ಹಾರುತ್ತಿದ್ದಂತೆ ಜಿ ಸ್ಯಾಟ್ ಸಮೂಹದ ಏರಿಯನ್ ಸರಣಿಯ 221ನೇ ಯಶಸ್ವಿ ಉಡಾವಣೆಗೆ ಸಾಕ್ಷಿಯಾಯಿತು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ) ನಿರ್ಮಿತ 48 ಟ್ರಾನ್ ಪಾಂಡರ್ ಗಳನ್ನು ಹೊತ್ತೊಯ್ಡಿರುವ ಜಿ ಸ್ಯಾಟ್ 16 ಜೊತೆಗೆ ಅಮೆರಿಕದ ಡೈರೆಕ್ಟ್​​ ಟಿವಿ-14 ಉಪಗ್ರಹವೂ ಸುರಕ್ಷಿತವಾಗಿ ಕಕ್ಷೆಗೆ ತಲುಪಿದೆ ಎಂದು ಏರಿಯನ್ ಸ್ಪೇಸ್ ಹೇಳಿದೆ.

ಜಿ ಸ್ಯಾಟ್ 16ರ ನಿಯಂತ್ರಣವನ್ನು ಹಾಸನದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿಯಲ್ಲಿ ನಡೆಸಲಾಗುತ್ತಿದ್ದು, ಉಪಗ್ರಹ ಸುಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ. ಸೋಮವಾರ ಮುಂಜಾನೆ 3.50 ರ ಸುಮಾರಿಗೆ ಕಕ್ಷೆ ಕೋನ ಬದಲಿಸುವ ಕಾರ್ಯ ನಡೆಸಲಾಗುವುದು ಜಿ ಸ್ಯಾಟ್ 8, ಐಆರ್ ಎನ್ ಎಸ್ ಎಸ್ 1ಎ ಹಾಗೂ 1ಬಿ ಉಪಗ್ರಹಗಳ ಜೊತೆಗೆ ಜಿ ಸ್ಯಾಟ್ 16 ಸ್ಥಾಪನೆಯಾಗಲಿದೆ.

ಎರಡು ದಿನಗಳ ಕಾಲ ಪ್ರತಿಕೂಲ ಹವಮಾನ ಇತ್ತು. ಇದರಿಂದ ಸ್ವಲ್ಪಮಟ್ಟಿಗೆ ಆತಂಕ ಶುರುವಾಗಿತ್ತು. ಅದರೆ, ಇಂದು ಹವಮನ ಅನುಕೂಲಕರವಾಗಿತ್ತು. ಈ ಉಪಗ್ರಹ ಉಡಾವಣೆಯಲ್ಲಿ ಕಾರ್ಯ ನಿರ್ವಹಿಸಲಿದ ಎಲ್ಲರಿಗೂ ಧನ್ಯವಾದಗಳು ಎಂದು ಐಸಾಕ್ ನಿರ್ದೇಶಕ ಶಿವಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Augmenting India's space capacity to boost communication services, its latest satellite GSAT-16 was successfully launched on board Arianespace rocket from the space port of Kourou in French Guiana in the early hours today(Dec 7), after a delay of two days due to bad weather.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more