Breaking: ದೇಶದಲ್ಲಿ ಒಂದೇ ದಿನ 20 ಸಾವಿರ ಕೊರೊನಾ ಸೋಂಕಿತರು ಪತ್ತೆ
ನವದೆಹಲಿ, ಜುಲೈ 3: ಭಾರತದಲ್ಲಿ ಒಂದೇ ದಿನ 20 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದೇ ಮೊದಲ ಬಾರಿಗೆ 24 ಗಂಟೆಗಳಲ್ಲಿ ಇಷ್ಟೊಂದು ಪ್ರಕರಣಗಳು ಪತ್ತೆಯಾಗಿವೆ.
ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 6.25 ಲಕ್ಷಕ್ಕೆ ಹೆಚ್ಚಳವಾಗಿದೆ. 18,213 ಮಂದಿ ಇಲ್ಲಿಯವರೆಗೆ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ 379 ಮಂದಿ ಸಾವನ್ನಪ್ಪಿದ್ದಾರೆ.

22,74,439 ಸಕ್ರಿಯ ಪ್ರಕರಣಗಳಿವೆ. ಒಂದು ದಿನದಲ್ಲಿ 20,903 ಪ್ರಕರಣಗಳು ದಾಖಲಾಗಿವೆ. ಜುಲೈ 2ರವರೆಗೆ ಒಟ್ಟು ದೇಶದಲ್ಲಿ 92,97,749 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಜುಲೈ 2 ರಂದು ಒಂದೇ ದಿನ 2,41,576 ಮಂದಿಯ ಪರೀಕ್ಷೆ ನಡೆಸಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ತಿಳಿಸಿದೆ.
ಮಹಾರಾಷ್ಟ್ರದಲ್ಲಿ 1,01,172 ಮಂದಿ ಗುಣಮುಖರಾಗಿದ್ದಾರೆ, ಹಾಗೆಯೇ ಗುರುವಾರ 8018 ಮಂದಿಗೆ ಸೋಂಕು ತಗುಲಿದೆ. ಚೇತರಿಕೆ ಪ್ರಮಾಣ ಶೇ.54.2 ರಷ್ಟಿದೆ.
ದೆಹಲಿಯಲ್ಲಿ 63,007 ಮಂದಿ ಗುಣಮುಖರಾಗಿದ್ದಾರೆ. ಹೊಸದಾಗಿ 3015 ಮಂದಿಗೆ ಸೋಂಕು ತಗುಲಿದೆ. ಚೇತರಿಕೆ ಪ್ರಮಾಣ 68.4 ರಷ್ಟಿದೆ.
ಬಾಂಗ್ಲಾದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1.5 ಲಕ್ಷಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಚೇತರಿಕೆ ಪ್ರಮಾಣ ಶೇ.60.7ಕ್ಕೆ ಏರಿಕೆಯಾಗಿದೆ.












Click it and Unblock the Notifications