• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದಲ್ಲಿ ಮತ್ತೆ ಕೊರೊನಾ ಆತಂಕ; ವಾರದಿಂದ 31% ಏರಿದ ಪ್ರಕರಣ

|

ನವದೆಹಲಿ, ಫೆಬ್ರವರಿ 22: ದೇಶದಲ್ಲಿ ಕಳೆದ ಎರಡು ತಿಂಗಳಿನಿಂದ ಕೊರೊನಾ ಪ್ರಕರಣಗಳು ತಗ್ಗಿದ್ದು, ಇನ್ನೆಲ್ಲವೂ ನಿಯಂತ್ರಣಕ್ಕೆ ಬರಬಹುದು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿಯೇ ಕಳೆದ ಐದು ದಿನಗಳಿಂದ ಏಕಾಏಕಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವುದು ಚಿಂತೆಗೆ ಕಾರಣವಾಗಿದೆ.

ಕಳೆದ ಒಂದು ವಾರಕ್ಕೆ ಹೋಲಿಸಿದರೆ, ದೇಶದಲ್ಲಿ ಕೊರೊನಾ ಪ್ರಕರಣಗಳು 31% ಏರಿಕೆಯಾಗಿರುವುದಾಗಿ ತಿಳಿದುಬಂದಿದೆ. ಮಹಾರಾಷ್ಟ್ರ, ಕೇರಳ, ಛತ್ತೀಸ್‌ಗಡ, ಮಧ್ಯಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ದೇಶದಲ್ಲಿ ಮತ್ತೆ ಕೊರೊನಾ ಸೋಂಕಿನ ಆತಂಕ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು, ಇನ್ನೊಂದು ವಾರದಲ್ಲಿ ಲಾಕ್‌ಡೌನ್‌ ಕುರಿತು ನಿರ್ಧರಿಸಲಾಗುವುದು ಎಂದು ತಿಳಿದುಬಂದಿದೆ. ಮುಂದೆ ಓದಿ...

ಜನರ ನೆಮ್ಮದಿ ಹಾಳು ಮಾಡಲು ಮತ್ತೆ ಚಿಗುರುತ್ತಿದೆ ಕೊರೊನಾ ವೈರಸ್!

 ಕಳೆದ ಐದು ದಿನಗಳಿಂದಲೂ ಸೋಂಕು ಏರಿಕೆ

ಕಳೆದ ಐದು ದಿನಗಳಿಂದಲೂ ಸೋಂಕು ಏರಿಕೆ

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 14,199 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ ಒಟ್ಟು ಸಂಖ್ಯೆ 11 ಮಿಲಿಯನ್‌ಗೆ ಮುಟ್ಟಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. ಕಳೆದ ಐದು ದಿನಗಳಿಂದಲೂ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿರುವುದಾಗಿ ತಿಳಿದುಬಂದಿದೆ.

 ಕಳೆದ ವಾರಕ್ಕೆ ಹೋಲಿಸಿದರೆ 31% ಪ್ರಕರಣಗಳು ಹೆಚ್ಚು

ಕಳೆದ ವಾರಕ್ಕೆ ಹೋಲಿಸಿದರೆ 31% ಪ್ರಕರಣಗಳು ಹೆಚ್ಚು

ಭಾನುವಾರ ದೇಶದಲ್ಲಿ 83 ಮಂದಿ ಸಾವನ್ನಪ್ಪಿದ್ದು, ಇದುವರೆಗೂ 1,56,385 ಮರಣ ಪ್ರಕರಣಗಳು ದಾಖಲಾಗಿವೆ. ಆದರೆ ಕಳೆದ ಐದು ವಾರಗಳಿಂದ ಇದೇ ಮೊದಲ ಬಾರಿಗೆ ಕೊರೊನಾ ಪ್ರಕರಣಗಳ ವಾರದ ಪ್ರಮಾಣ ಒಂದು ಲಕ್ಷವನ್ನು ಮೀರಿದೆ. ಐದು ವಾರಗಳ ನಂತರ ಮತ್ತೆ ಕೊರೊನಾ ಪ್ರಕರಣ ಏರಿಕೆಯಾಗಿರುವುದು ಆತಂಕವನ್ನುಂಟುಮಾಡಿದೆ. ಫೆಬ್ರವರಿ 21ಕ್ಕೆ ಕೊನೆಯಾದಂತೆ ವಾರದಲ್ಲಿ ಭಾರತದಲ್ಲಿ 1,00,990 ಪ್ರಕರಣಗಳು ದಾಖಲಾಗಿವೆ. ಹಿಂದಿನ ವಾರದಲ್ಲಿ 77,284 ಹೊಸ ಕೊರೊನಾ ಪ್ರಕರಣಗಳು ಕಂಡುಬಂದಿದ್ದು, ವಾರದಿಂದ 31% ಪ್ರಕರಣಗಳು ಏರಿಕೆಯಾಗಿರುವುದಾಗಿ ತಿಳಿದುಬಂದಿದೆ.

 ಮಹಾರಾಷ್ಟ್ರದಲ್ಲಿ 81% ಸೋಂಕು ಹೆಚ್ಚಳ

ಮಹಾರಾಷ್ಟ್ರದಲ್ಲಿ 81% ಸೋಂಕು ಹೆಚ್ಚಳ

ಕೊರೊನಾ ಸೋಂಕು ಹೆಚ್ಚಾದ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 6,971 ಪ್ರಕರಣಗಳು ದಾಖಲಾಗಿದ್ದು, 35 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 121 ದಿನಗಳಿಂದ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಕೊರೊನಾ ಪ್ರಕರಣ ದಾಖಲಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ, ರಾಜ್ಯದಲ್ಲಿ ಇದರ ಪ್ರಮಾಣ 81% ಹೆಚ್ಚಾಗಿದೆ.

 ಕೇರಳದಲ್ಲಿಯೂ ಹೆಚ್ಚಿದ ಸೋಂಕು

ಕೇರಳದಲ್ಲಿಯೂ ಹೆಚ್ಚಿದ ಸೋಂಕು

ಮುಂದಿನ ವಾರದ ಹೊತ್ತಿಗೆ ದಾಖಲಾಗುವ ಕೊರೊನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಲಾಕ್ ಡೌನ್ ಕುರಿತು ನಿರ್ಧರಿಸಲಾಗುತ್ತದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ಕೇರಳದಲ್ಲಿಯೂ ಇದ್ದಕ್ಕಿದ್ದಂತೆ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಎರಡು ದಿನಗಳಿಂದ ತಗ್ಗಿರುವುದಾಗಿ ತಿಳಿದುಬಂದಿದೆ. ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 4,070 ಪ್ರಕರಣಗಳು ದಾಖಲಾಗಿವೆ. ಈ ನಡುವೆ ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ತಗ್ಗಿರುವುದು ನೆಮ್ಮದಿಯ ವಿಷಯವಾಗಿದೆ.

English summary
India registered a spike of 31% in corona infection as compared to last week,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X