MPox: ಭಾರತದ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ದೃಢ: ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ WHO
ನವದೆಹಲಿ, ಸೆಪ್ಟಂಬರ್ 23: ಮಂಕಿಫಾಕ್ಸ್ ವೇಗವಾಗಿ ಹರಡಬಹುದಾಗಿ ಒಂದು ವೈರಸ್ ಆಗಿದೆ. ಒಂದು ವಾರದ ಹಿಂದಷ್ಟೇ ಕೇರಳದ ವ್ಯಕ್ತಿಯೊಬ್ಬರಿಗೆ ಈ ಸೋಂಕು ಇರುವುದು ದೃಢವಾಗಿತ್ತು. ಈ ಮೂಲಕ ಭಾರತವು ಮೊದಲ ಮಂಕಿಫಾಕ್ಸ್ ವೈರಲ್ ಇರುವುದು ಖಚಿತವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದು ಈಗ ವಿಶ್ವ ಆರೋಗ್ಯ ಸಂಸ್ಥೆ (WHO)ಯು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಲು ಕಾರಣವಾಗಿದೆ ಎಂದು ಅಧಿಕೃತ ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗೆ ಕೇರಳದ ಮಲ್ಲಪ್ಪುರಂ ನಿವಾಸಿ 38 ವರ್ಷ ವ್ಯಕ್ತಿಯು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ದೇಶಕ್ಕೆ ಮರಳಿದ್ದರು. ಅವರ ಆರೋಗ್ಯ ತಪಾಸಣೆ ಮಾಡಿದಾಗ ಅವರಿಗೆ ಕ್ಲಾಡ್ 1 ಬಿ ಸ್ಟ್ರೈನ್ ಸೋಂಕು ತಗುಲಿರುವುದು ಖಚಿತವಾಗಿತ್ತು. ಸದ್ಯ ರೋಗಿಯ ಆರೋಗ್ಯವು ಸ್ಥಿರವಾಗಿದೆ. ಈ ಪ್ರಕರಣವು ಎರಡನೇ ಭಾರಿಗೆ ಡಬ್ಲುಎಚ್‌ಓ ತುರ್ತು ಪರಿಸ್ಥಿತಿ ಘೋಷಣೆಗೆ ಕಾರಣವಾಗಿದೆ.

ಒಂದು ತಿಂಗಳ ಹಿಂದಷ್ಟ ದೇಶದ ರಾಜಧಾನಿ ನವದೆಹಲಿಯಲ್ಲಿ ಮಂಕಿಪಾಕ್ಸ್ ಆತಂಕ ಎದುರಾಗಿತ್ತು. ಆಗ ಹರಿಯಾಣದ ಹಿಸಾರ್ ಮೂಲಕದ 26 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಈ ವ್ಯಕ್ತಿ ಆಫ್ರಿಕಾದಿಂದ ಮರಳಿದ್ದರಿಂದ ಪರೀಕ್ಷೆ ನಡೆಸಲಾಗಿತ್ತು.
ವಿಶ್ವ ಆರೋಗ್ಯ ಸಂಸ್ಥೆಯು (WHO) 2022 ರಲ್ಲಿಯೇ ಮಂಕಿಫಾಕ್ಸ್ (MPox) ಅನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಅಂತಾರಾಷ್ಟ್ರೀಯ ಕಾಳಜಿ ವಹಿಸಲು ಘೋಷಣೆ ಮಾಡಿತ್ತು. ಅದಾದ ಬಳಿಕ ಈವರೆಗೆ ಭಾರತದಲ್ಲಿ ಬರೋಬ್ಬರಿ 30 ಮಂಕಿಫಾಕ್ಸ್ ಪಾಸಿಟಿವ್ ಪ್ರಕರಣಗಳು ವರದಿ ಆಗಿವೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಮಟ್ಟದಲ್ಲಿ ನೋಡುವುದಾದರೆ ಸಾರ್ವಜನಿಕ ತುರ್ತು ಪರಿಸ್ಥಿತಿ ಇದೊಂದು ಮಹತ್ವ ಎಚ್ಚರಿಕೆ ಎನ್ನಬಹುದು. ಆಗಸ್ಟ್‌ನಲ್ಲಿ ವಿಶ್ವಸಂಸ್ಥೆ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ, ಕಾಳಜಿಯಲ್ಲಿ ಘೋಷಿಸಿತ್ತು. ಇದಾಗಿ ಮಂಕಿಪಾಕ್ಸ್ ಎರಡನೇ ಬಾರಿಗೆ ಪತ್ತೆಯಾದ ಬಳಿಕ ಇದೀಗ ಮತ್ತೊಮ್ಮೆ ಆರೋಗ್ಯ ಕಾಳಜಿಗೆ ಅಂತಾರಾಷ್ಟ್ರಮಟ್ಟದಲ್ಲಿ ಸೂಚನೆ ನೀಡಿದೆ. ಇ ಹಿಂದೆ ಜುಲೈ 2022ರಲ್ಲಿ ಮತ್ತು 2023ರ ಮಧ್ಯೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.
Mpox ಅನ್ನು ಹಿಂದೆ ಮಂಕಿಪಾಕ್ಸ್ ಅಂತಲೂ ಕರೆಯಲಾಗುತ್ತದೆ. ಈ ಸೋಂಕು ತಗುಲಿದ ವ್ಯಕ್ತಗಳಿಗೆ ನಿರಂತರ ಜ್ವರ, ತಲೆನೋವು, ಸ್ನಾಯು ನೋವು, ಬೆನ್ನು ನೋವು, ರೋಗನಿರೋಧಕ ಶಕ್ತಿ ಕುಂದುವುದು ಕಂಡು ಬರುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.












Click it and Unblock the Notifications