Rain Alert: ಚಂಡಮಾರುತ ಪ್ರಸರಣ ತೀವ್ರ: ಸೆಪ್ಟಂಬರ್ 17ರವರೆಗೆ ಈ ಭಾಗಗಳಲ್ಲಿ ರಣಮಳೆ ಎಚ್ಚರಿಕೆ

IMD Cyclone Alert: ದೇಶದ ವಿವಿಧೆಡೆ ಮುಂಗಾರು ಮಳೆ ಪಸರಿಸುತ್ತಿದೆ. ಕರ್ನಾಟಕದಲ್ಲೂ ಸಹ ಮತ್ತೆ ಚುರುಕಾಗಿರುವ ಮಳೆರಾಯ ಭಾರತದ ಈಶಾನ್ಯ, ವಾಯುವ್ಯ ಹಾಗೂ ಮಧ್ಯ ಭಾಗದ ಅನೇಕ ರಾಜ್ಯಗಳಲ್ಲಿ ತೀವ್ರಗೊಂಡಿದೆ. ಹಲವಾರು ಭಾಗಗಳಲ್ಲಿ ವರುಣಾರ್ಭಟ ಮುಂದುವರಿದ ಪರಿಣಾಮ ಈಗಾಗಲೇ ಪ್ರವಾಹ ಎದುರಿಸಿದ್ದ ರಾಜ್ಯಗಳ ಜನರಲ್ಲಿ ಆತಂಕ ಮನೆ ಮಾಡಿದೆ.

ಈ ವಾರಾಂತ್ಯದ ಹೊತ್ತಿಗೆ ಪಾಕಿಸ್ತಾನ ಕರಾವಳಿ ಭಾಗ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಕಡಿಮೆ ಒತ್ತಡದ ಪ್ರಭಾವವು ತೀವ್ರಗೊಳ್ಳಲಿದೆ. ಮುಂದಿನ ಒಂದು ದಿನದಲ್ಲಿ ಇದರ ತೀವ್ರತೆ, ಸಂಚಾರದ ದಿಕ್ಕು ಮತ್ತಷ್ಟು ಖಚಿತಗೊಳ್ಳಲಿದೆ. ಮುಂಗಾರು ಸ್ಟ್ರಫ್ ಬಂಗಾಳಕೊಲ್ಲಿ, ಲಕ್ನೋ, ಗಂಗಾನಗರ ಭಾಗಗಳಲ್ಲಿ ಮುಂದುವರಿದಿದೆ. ಬಿರುಗಾಳಿಯ ವೇಗ ಹೆಚ್ಚಾಗಿದೆ.

India Rain Alert Heavy Showers likely Across Many States Till Sept 17

ಸೆಪ್ಟಂಬರ್ 17ರವರೆಗೆ ಭಾರೀ ಮಳೆ

ಇತ್ತ ಒಡಿಶಾ ಹಾಗೂ ಆಂಧ್ರ ಪ್ರದೇಶ ಕರಾವಳಿ ಭಾಗದಲ್ಲಿ ಸಮುದ್ರ ಮೇಲ್ಮೈನಲ್ಲಿ ಚಂಡಮಾರುತ ಪ್ರಸರಣ ಉಂಟಾಗಿದೆ. ಇದು ಸಮುದ್ರ ಮಟ್ಟದಿಂದ 4.5 ಕಿಲೋ ಮೀಟರ್ ಎತ್ತರದಲ್ಲಿದೆ. ಮತ್ತೊಂದು ಚಂಡಮಾರುತ ಪ್ರಸರಣವು ಸಿಕ್ಕಿಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡು ಬಂದಿದೆ. ಅದು ಸಮುದ್ರ ಮಟ್ಟದಿಂದ 3.1 ಕಿಲೋ ಮೀಟರ್ ಎತ್ತರದಲ್ಲಿದೆ. ತಮಿಳುನಾಡ ಹಾಗೂ ಕರ್ನಾಟಕ ಕರಾವಳಿ ಭಾಗಕ್ಕೆ ಹೊಂದಿಕೊಂಡಂತೆ ಸಮುದ್ರದಲ್ಲಿ ವೈಪರೀತ್ಯ ಉಂಟಾಗಿದ್ದು, ಇದು 1.5ಕಿಲೋ ಮೀಟರ್ ಎತ್ತರದಲ್ಲಿದೆ. ಇದರ ಪ್ರಭಾವದಿಂದಾಗಿ ವಿವಿಧ ರಾಜ್ಯಗಳಲ್ಲಿ ಮುಂದಿನ 05 ಭಾರೀ ಹಾಗೂ ಅತ್ಯಧಿಕ ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಿದೆ.

ಸೆಪ್ಟೆಂಬರ್ 11-17ರ ಅವಧಿಯಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇಂದಿನಿಂದ ಸೆಪ್ಟಂಬರ್ 14ರ ಅವಧಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಪೂರ್ವ ಮಧ್ಯಪ್ರದೇಶದಲ್ಲಿ ಧಾರಾಕಾರ ಮಳೆ ನಿರೀಕ್ಷೆ ಇದೆ. ಛತ್ತೀಸ್‌ಗಢ, ಬಿಹಾರ, ಉಪ-ಹಿಮಾಲಯ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ರಾಜ್ಯಗಳ ಹಲವೆಡೆ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಉಳಿದ ಕೆಲವೆಡೆ ಸಾಧಾರಣದಿಂದ ಉತ್ತಮ ಮಳೆ ನಿರೀಕ್ಷೆ ಇದೆ ಎಂದು ಗುರುವಾರದ ಹವಾಮಾನ ವರದಿ ಮಾಹಿತಿ ನೀಡಿದೆ.

ಇಂದಿನಿಂದ ಸೆಪ್ಟಂಬರ್ 17 ರವರೆಗೆ ಪೂರ್ವ ಉತ್ತರ ಪ್ರದೇಶದ ಹಲವೆಡೆ ಭಾರಿ ಮಳೆ ಆಗಲಿದೆ. ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಶನಿವಾರ, ಭಾನುವಾರ ಬಿರುಸಿನ ಮಳೆ ಆಗಲಿದೆ. ಪಶ್ಚಿಮ ಭಾರತದ ಮಹಾರಾಷ್ಟ್ರ, ಕೊಂಕಣ ಮತ್ತು ಗೋವಾ, ಗುಜರಾತ್ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 14 ರಿಂದ 17 ರವರೆಗೆ ಜೋರು ಮಳೆ ಸುರಿಯಲಿದೆ. ಕರ್ನಾಟಕದಲ್ಲಿ ಸೆಪ್ಟಂಬರ್ 15ರವರೆಗೆ ಅಲ್ಲಲ್ಲಿ ಭಾರೀ ಮಳೆ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+