India-Pakistan Tensions: ಪಾಕಿಸ್ತಾನದ ದಾಳಿಗೆ ಭಾರತದ ಪ್ರತಿದಾಳಿ ಹೇಗಿತ್ತು ಗೊತ್ತಾ?; ವಿಡಿಯೋ ರಿಲೀಸ್ ಮಾಡಿದ DGMO
Ind-Pak Tensions: ಪೆಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಕೈಗೊಂಡಿದೆ. ಇನ್ನು ಶನಿವಾರ ಕದನ ವಿರಾಮಕ್ಕೆ ಎರಡು ದೇಶಗಳನ್ನು ಒಪ್ಪಿದ್ದವು. ಆದರೆ, ಪಾಪಿ ಪಾಕಿಸ್ತಾನ ಮತ್ತೆ ಇದನ್ನು ಉಲ್ಲಂಘಿಸಿ ನರಿ ಬುದ್ಧಿ ತೋರಿಸಿ ದೊಡ್ಡ ಹೊಡೆತವನ್ನೇ ತಿಂದಿದೆ. ಈ ಕುರಿತು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಮುಖ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.
ಪಾಕಿಸ್ತಾನದ ದಾಳಿಗೆ ಭಾರತವು 'ಆಪರೇಷನ್ ಸಿಂಧೂರ್' ಕಾರ್ಯಚರಣೆಯಡಿಯಲ್ಲಿ ಪ್ರತಿದಾಳಿ ನಡೆಸಿ ದೊಡ್ಡ ಹೊಡೆತವನ್ನೇ ನೀಡಿದೆ. ಈ ಕುರಿತು ಇದೀಗ ಭಾನುವಾರ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಉನ್ನತ ಕಮಾಂಡರ್‌ಗಳು ಆಪರೇಷನ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡರು. ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಆಪರೇಷನ್ ಸಿಂಧೂರ್ ಕುರಿತಂತೆ ಡಿಜಿಎಂಒ ರಾಜೀವ್ ಘಾಯ್ ಮಾತನಾಡಿದ್ದು, ಪೆಹಲ್ಗಾಮ್‌ನಲ್ಲಿ 26 ಅಮಾಯಕರನ್ನು ಬಲಿಪಡೆದಿದ್ದ ಉಗ್ರರನ್ನು ಧ್ವಂಸ ಮಾಡಲು ಭಾರತದಿಂದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕೈಗೊಂಡಿದ್ದೆವು. ಈ ವೇಳೆ ಉಗ್ರರ 9 ನೆಲೆಗಳನ್ನು ಧ್ವಂಸ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದು, ಇದಕ್ಕೆ ಭಾರತೀಯ ಸೇನೆ ತೆಗೆದುಕೊಂಡಿದ್ದು ಕೇವಲ 23 ನಿಮಿಷ. ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರನ್ನು ಸಂಹಾರ ಮಾಡುವ ಮೂಲಕ ತಕ್ಕ ಉತ್ತರ ನೀಡಿದ್ದೇವೆ ಎಂದು ಹೇಳಿದರು.
ನಮ್ಮ ಪ್ರತಿ ದಾಳಿಗೆ ಉಗ್ರರು ತಮ್ಮ ಶಿಬಿರಗಳಿಂದ ಬೆದರಿ ಪರಾರಿ ಆಗಿದ್ದರು. ಬಳಿಕ ಖಚಿತ ಮಾಹಿತಿಯ ಮೇರೆಗೆ ಉಗ್ರರ ಅಡಗು ತಾಣಗಳನ್ನು ನಾವು ನಾಶ ಮಾಡಿದ್ದೇವೆ. ನಮ್ಮ ಗುರಿ ಕೇವಲ ಉಗ್ರರ ಅಡಗುತಾಣವಾಗಿತ್ತೆ ಹೊರತು, ನಾಗರಿಕರಾಗಿರಲಿಲ್ಲ. ಪಿಓಕೆ ಮತ್ತು ಪಾಕಿಸ್ತಾನಕ್ಕೆ ನುಗ್ಗಿ 9 ಉಗ್ರರ ನೆಲೆಗಳನ್ನು ನಾಶ ಮಾಡಿದ್ದೇವೆ. ಪಾಕಿಸ್ತಾನ ಹಲವು ಉಗ್ರರಿಗೆ ಆಶ್ರಯ ಕೊಟ್ಟಿದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಅವರ ನೆಲೆಗಳನ್ನು ನಾಶ ಮಾಡಿದ ಸಾಕ್ಷಿಗಳು ಹಾಗೂ ಪಾಕಿಸ್ತಾನದಲ್ಲಿ ಹಾನಿಯಾದ ಬಗ್ಗೆ ಸೂಕ್ತ ಪುರಾವೆಗಳು ನಮ್ಮ ಬಳಿಯಿದೆ ಎಂದು ಹೇಳಿದರು.
ಪಾಕಿಸ್ತಾನ ಹಲವು ಮೋಸ್ಟ್ ವಾಂಟೆಡ್ ಉಗ್ರರಿಗೆ ಆಶ್ರಯ ನೀಡಿದ್ದು, ಅದೇ ಮೋಸ್ಟ್ ವಾಂಟೆಡ್ ಉಗ್ರರರಾದ ಅಬ್ದುಲ್ ಮಲ್ಲಿಕ್ ಮತ್ತು ಮುದಾಸಿರ್ ಕೂಡಾ ಬಲಿಯಾಗುತ್ತಾರೆ ಎಂದು ಹೇಳಿದರು. ಬಳಿಕ ಡಿಜಿ ಏರ್ ಆಪರೇಷನ್ಸ್ ಎಕೆ ಭಾರ್ತಿ ಮಾತನಾಡಿದರು. ಬಹಲ್ಪುರ್‌ನಲ್ಲಿ ಉಗ್ರರ 2 ಅಂತಸ್ತಿನ ಕಟ್ಟಡ ಧ್ವಂಸ ಮಾಡಿದ್ದೇವೆ. ಅಲ್ಲದೇ ಮುರಿಡ್ಕೆಯಲ್ಲಿ ಉಗ್ರರ ನೆಲೆ ನಾಶ ಮಾಡಿದ್ದೇವೆ. ಜೊತೆಗೆ ಬಹಲ್ಪುರ್‌ನ ಎರಡನೇ ಉಗ್ರ ನೆಲೆಗೂ ದಾಳಿ ಮಾಡಿ ಧ್ವಂಸ ಮಾಡಿದ್ದೇವೆ. ಬಹವಾಲ್ಪುರ್‌ನಲ್ಲಿ 4 ಮತ್ತು ಮುರಿಡ್ಕೆಯಲ್ಲಿ 4 ಉಗ್ರ ನೆಲೆಗಳನ್ನು ಪುಡಿ ಪುಡಿ ಮಾಡಿದ್ದೇವೆ ಎಂದು ವಿಡಿಯೋ ಮೂಲಕ ಸಾಕ್ಷ್ಯ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಭಾರತೀಯ ವಾಯುಪಡೆಯ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ ಹಾಗು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಉಪಸ್ಥಿತರಿದ್ದರು.












Click it and Unblock the Notifications