India Weather Alert: ಸೆಪ್ಟಂಬರ್ 13ರವರೆಗೆ ಈ ಭಾಗಗಳಲ್ಲಿ ಬಿರುಗಾಳಿ ಮಳೆ! ವೈಪರೀತ್ಯಗಳ ಅಪ್ಡೇಟ್ಸ್

IMD Weather Forecast: ಮಳೆಗಾಲ ಅವಧಿಯ ಕೊನೆಯ ತಿಂಗಳಾದ ಸೆಪ್ಟಂಬರ್‌ನಲ್ಲಿ ಮುಂಗಾರು ಮಳೆ ವಿವಿಧ ಭಾಗಗಳಲ್ಲಿ ಸಕ್ರಿಯವಾಗಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾಗಗಳಲ್ಲಿ ಕೊಂಚ ದುರ್ಬಲವಾಗಿದೆ. ಮುಂದಿನ 05 ದಿನಗಳಲ್ಲಿ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಭಾರೀಯಿಂದ ಅತ್ಯಧಿಕ ಮಳೆ ಆಗಲಿದೆ. ಕೆಲವು ರಾಜ್ಯಗಳಿಗೆ ಹವಾಮಾನ ಇಲಾಖೆ 'ರೆಡ್ ಅಲರ್ಟ್' ನೀಡಿದೆ.

ನಿರಂತರ ಆರ್ಭಟಕ್ಕೆ ಕಂಗಾಲಾಗಿದ್ದ ಹಿಮಾಚಲ ಪ್ರದೇಶ, ಮಣಿಪುರ, ಅಸ್ಸಾಂ, ಹರಿಯಾಣ, ದೆಹಲಿ ಹಾಗೂ ಇತರ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿಯಲಿದೆ. ಮತ್ತೆ ಪ್ರವಾಹ ಸ್ಥಿತಿ, ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತದ ಸ್ಥಿತಿ ಉಂಟಾಗುವ ನಿರೀಕ್ಷೆಗಳು ಇವೆ. ಐಎಂಡಿ ಪ್ರಕಾರ, ಇಂದು ಸೆ.8 ರಂದು ಉತ್ತರಾಖಂಡ ಭಾಗ ಸೇರಿದಂತೆ ವಿವಿಧೆ ಜೋರು ಮಳೆ ಆಗಲಿದೆ. ಉತ್ತರ ಪ್ರದೇಶ, ಗುಜರಾತ್ ಪೂರ್ವಭಾಗ, ಪಂಜಾಬ್‌ನಲ್ಲಿ ಭಾರೀ ಮಳೆ ಆಗಲಿದ್ದು, 'ರೆಡ್ ಅಲರ್ಟ್' ನೀಡಲಾಗಿದೆ.

India Meteorological Dept predicts Heavy Rain Alert in These States until September 13th

ರಾಜಸ್ಥಾನ್, ಸೌರಾಷ್ಟ್ರ, ಗುಜರಾತ್‌ನ ಖಚ್ ಭಾಗಗಳಲ್ಲಿ ಹಾಗೂ ಮಧ್ಯ ಪ್ರದೇಶ, ಹಿಮಾಲಯದ ಕೆಲವು ಪ್ರದೇಶಗಳು, ಒಡಿಶಾ, ಪಶ್ಚಿಮ ಬಂಗಾಳ, ಸಿಕ್ಕಿಂ, ತಮಿಳುನಾಡು, ಪುದುಚೇರಿ ಹಾಗೂ ಉತ್ತರಾಖಂಡ ಭಾಗಗಳಲ್ಲಿ ಸೆಪ್ಟಂಬರ್ 12 ಮತ್ತು 13ರವರೆಗೆ ಬಿರುಗಾಳಿ ಸಹಿತ ಭಾರೀ ಮಳೆ ಆರ್ಭಟ ಕಂಡು ಬರಲಿದೆ.

ಮಧ್ಯ ಪ್ರದೇಶದ ಪೂರ್ವ ಭಾಗಗಳು, ವಿದರ್ಭ, ಚತ್ತೀಸ್‌ಗಢ, ಹಿಮಾಲಯ ಪ್ರದೇಶಗಳು, ಸಿಕ್ಕಿಂ, ಬಿಹಾರ, ದೆಹಲಿ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ ಭಾಗಗಳಲ್ಲಿ ಸೆಪ್ಟಂಬರ್ 10ರ ನಂತರ ಧಾರಾಕಾರ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಐದು ದಿನಗಳಲ್ಲಿ ಬಹುತೇಕ ಎಲ್ಲ ದಿನಗಳಲ್ಲಿ ಮಳೆ ಆಗಲಿದೆ. ಈಗಾಗಲೇ ಗುಡ್ಡ ಕುಸಿತ, ಪ್ರವಾಹಕ್ಕೆ ತುತ್ತಾಗಿದ್ದ ಪ್ರದೇಶಗಳಲ್ಲಿ ಮತ್ತೆ ಹಾನಿ ಆಗುವ ಸಂಭವವಿದೆ.

ಹವಾಮಾನ ವೈಪರೀತ್ಯಗಳ ಪ್ರಭಾವ

ಪಂಜಾಬ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಂಡಮಾರುತ ಪ್ರಸರಣ ಮುಂದುವರಿದಿದೆ. ಇದು 0.9 ಕಿಲೋ ಮೀಟರ್ ಎತ್ತರದಲ್ಲಿದೆ. ಗುಜರಾತ್‌ನ ಕಚ್ ಲಕ್ನೌ, ಆಗ್ರಾದ ಭಾಗಗಳಲ್ಲಿ ಮುಂಗಾರು ಸ್ಟ್ರಫ್ ಸೃಷ್ಟಿಯಾಗಿದೆ. ಮತ್ತೊಂದು ಚಂಡಮಾರುತ ಪ್ರಸರಣವು ಬಂಗಾಳಕೊಲ್ಲಿ, ಒಡಿಶಾದ ದಕ್ಷಿಣ ಭಾಗ, ಆಂಧ್ರ ಪ್ರದೇಶ ಕರಾವಳಿ ಭಾಗದಲ್ಲಿ ನೆಲೆಸಿದೆ. ಇದು 1.5ರಿಂದ 5.8 ಕಿಲೋ ಮೀಟರ್‌ ಎತ್ತರದವರೆಗೆ ವ್ಯಾಪಿಸಿದೆ.

ವಿವಿಧ ಕಡೆಗಳಲ್ಲಿ ಉಂಟಾದ ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ದೇಶದ ಅನೇಕ ಕಡೆಗಳಲ್ಲಿ ಸಾಧಾರಣ, ಭಾರೀ, ಅತ್ಯಧಿಕ ಮಳೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಮತ್ತೆ ದುರ್ಬಲಗೊಳ್ಳುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿಯಲ್ಲಿ ದುರ್ಬಲವಾಗಿದೆ. ಕೇರಳ, ತಮಿಳುನಾಡು ಭಾಗದಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+