Khalistan Terrorist: ‘ಖಲಿಸ್ತಾನಿ’ ಉಗ್ರರ ಗ್ಯಾಂಗ್‌ಗೆ ಪ್ರಧಾನಿ ಮೋದಿ ಮಾಸ್ಟರ್ ಸ್ಟ್ರೋಕ್?
ಖಲಿಸ್ತಾನಿ ಗ್ಯಾಂಗ್ ಇಟ್ಟ ಫಿಟ್ಟಿಂಗ್‌ಗೆ ಕೆನಡಾ ಹಾಗೂ ಭಾರತ ಬಡಿದಾಡುವ ಪರಿಸ್ಥಿತಿಯೇ ಎದುರಾಗಿದೆ. ಅದ್ರಲ್ಲೂ ಕೆನಡಾ ಪ್ರಧಾನಿ ಹಿಂದೆ, ಮುಂದೆ ಯೋಚಿಸದೆ ಭಾರತ ವಿರುದ್ಧ ಮಾತನಾಡಿ ಕಿಡಿ ಹೊತ್ತಿಸಿದ್ದಾರೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿರುವಾಗ ಭಾರತ ಇದೀಗ 'ಖಲಿಸ್ತಾನಿ' ಉಗ್ರರು & ಉಗ್ರರ ಬೆಂಬಲಿಗರನ್ನು ಬಡಿದು ಬುದ್ಧಿ ಕಲಿಸಲು ಮುಂದಾಗಿದೆ.
ಖಲಿಸ್ತಾನಿಗಳ ಗ್ಯಾಂಗ್ ಎಷ್ಟು ಪ್ರಬಲವಾಗಿ ಬೆಳೆದಿದೆ ಅಂದ್ರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರಾಬಲ್ಯ ಹೊಂದಿದೆ. ಅದರಲ್ಲೂ ಅಮೆರಿಕವು ಸೇರಿದಂತೆ ಕೆನಡಾ ಬಹುಭಾಗದಲ್ಲಿ ಖಲಿಸ್ತಾನಿಗಳು ವಾಸವಿದ್ದು, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದ ಹಲವು ಪ್ರಾಂತ್ಯದಲ್ಲೂ ಖಲಿಸ್ತಾನಿ ಬೆಂಬಲಿಗರು ಭಾರತ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬ ಆರೋಪವಿದೆ. ಈ ಎಲ್ಲಾ ಬೆಳವಣಿಗೆಯನ್ನೂ ಸೂಕ್ಷ್ಮವಾಗಿ ಗಮನಿಸಿದ್ದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಇದೀಗ ಖಲಿಸ್ತಾನಿ ಬೆಂಬಲಿಗರು ಮತ್ತು ಖಲಿಸ್ತಾನಿ ಉಗ್ರರಿಗೆ ಮಾಸ್ಟರ್ ಸ್ಟ್ರೋಕ್ ಕೊಡಲು ಮುಂದಾಗಿದೆ.

ಏನಿದು ಪಿಎಂ ಮೋದಿ ಮಾಸ್ಟರ್ ಸ್ಟ್ರೋಕ್?
ಭಾರತದ ಜೊತೆ ಕೆನಡಾ ಯಾವಾಗ ಕಾಲು ಕೆರೆದುಕೊಂಡು ಜಗಳಕ್ಕೆ ಬಂತೋ ಆ ಕ್ಷಣವೇ ಭಾರತ ಕೂಡ ಸರಿಯಾಗಿ ತಿರುಗೇಟು ಕೊಡಲು ಶುರು ಮಾಡಿತ್ತು. ಈಗಾಗಲೇ ಮೊದಲನೇ ಹೆಜ್ಜೆಯಾಗಿ ಕೆನಡಾ ಮುಟ್ಟಿ ನೋಡಿಕೊಳ್ಳುವ ರೀತಿ ಪೆಟ್ಟು ಕೊಟ್ಟಿದೆ. ಈಗ 2ನೇ ಹೆಜ್ಜೆಗೆ ಖಲಿಸ್ತಾನಿಗಳ ಹೆಡೆಮುರಿ ಕಟ್ಟಲು ಸಿದ್ಧವಾಗಿದೆ. ಅಂದರೆ ಖಲಿಸ್ತಾನಿ ಉಗ್ರರು & ಖಲಿಸ್ತಾನಿ ಉಗ್ರರ ಬೆಂಬಲಿಗರು ಭಾರತಕ್ಕೆ ಹೆಜ್ಜೆ ಇಡದಂತೆ ಮಾಡಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ.
ಅಂಹದಾಗೆ ವಿದೇಶಗಳಲ್ಲಿ ವಾಸ ಇರುವ ಖಲಿಸ್ತಾನಿಗಳು ಹಾಗೂ ಖಲಿಸ್ತಾನಿ ಬೆಂಬಲಿಗರಿಗೆ ಇನ್ನುಮುಂದೆ ಭಾರತದ ಬಾಗಿಲ್ ಬಂದ್ ಆಗಲಿದೆ. ಅದರಲ್ಲೂ ಪ್ರಮುಖವಾಗಿ ಖಲಿಸ್ತಾನಿ ಗ್ಯಾಂಗ್‌ಗೆ ಬೆಂಬಲ ನೀಡುತ್ತಿದ್ದವರ, ಅನಿವಾಸಿ ಭಾರತೀಯ ಸ್ಥಾನಮಾನ ರದ್ದಾಗಲಿದೆ. ಈ ಮೂಲಕ ಖಲಿಸ್ತಾನಿ ಪರ ಕನಿಕರ ತೋರುತ್ತಿದ್ದವರಿಗೂ ಭಾರತದ ಬಾಗಿಲು ಬಂದ್ ಆಗುತ್ತೆ ಎಂದು ತಿಳಿದು ಬಂದಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ಉನ್ನತ ಮಾಹಿತಿಯನ್ನು ಉಲ್ಲೇಖಿಸಿ ವರದಿ ಮಾಡಿವೆ. ಅಕಸ್ಮಾತ್ ಇದು ಅಧಿಕೃತವಾಗಿ ಘೋಷಣೆಯಾದರೆ ಮುಂದೆ ಖಲಿಸ್ತಾನಿ ಗ್ಯಾಂಗ್‌ಗೆ ದೊಡ್ಡ ಶಾಕ್ ಗ್ಯಾರಂಟಿ.
ಆರ್ಥಿಕವಾಗಿ ಖಲಿಸ್ತಾನಿ ಗ್ಯಾಂಗ್‌ಗೆ ಶಾಕ್!
ಭಾರತ ಈಗ ಖಲಿಸ್ತಾನಿ ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ರೀತಿಯನ್ನು ನೋಡಿದರೆ, ಪ್ರಮುಖವಾಗಿ ಉಗ್ರರ ಹಣಕಾಸು ಮೂಲ ಛಿದ್ರ ಮಾಡಲು ಮುಂದಾದಂತೆ ಕಾಣುತ್ತಿದೆ. ಏಕೆಂದರೆ ಖಲಿಸ್ತಾನಿಗಳಿಗೆ ಇದೇ ಬೆಂಬಲಿಗರು ಭಾರಿ ಪ್ರಮಾಣದ ಹಣವನ್ನು ನೀಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಖಲಿಸ್ತಾನಿ ಬೆಂಬಲಿಗರಿಗೆ ಭಾರತದ ಬಾಗಿಲು ಬಂದ್ ಮಾಡಿದರೆ, ದೊಡ್ಡ ಆಘಾತ ಎದುರಾಗುತ್ತದೆ.

ಕೆಲವರಿಗೆ ಬಿಸಿ ಮುಟ್ಟಿಸಿದರೆ ಸಾಕು, ಮುಂದೆ ಖಲಿಸ್ತಾನಿ ಗ್ಯಾಂಗ್ ಪರ ನಿಲ್ಲುಲು ಇತರರು ಹೆದರುವ ಪರಿಸ್ಥಿತಿ ಬರುತ್ತೆ. ಇದೆಲ್ಲ ಭಾರತಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಎನ್ನಬಹುದು ಇದೇ ಕಾರಣಕ್ಕೆ ಭಾರತ ಖಲಿಸ್ತಾನಿಗಳ ಆಟವನ್ನು ಬೇರಿನಿಂದಲೇ ನಾಶ ಮಾಡುವುದಕ್ಕಾಗಿ ಹೊಸ ಯೋಜನೆ ಕೈಗೊಂಡಂತೆ ಕಾಣುತ್ತಿದೆ. ಈಗಾಗಲೇ ಖಲಿಸ್ತಾನಿಗಳ ಹೆಡೆಮುರಿ ಕಟ್ಟಿ, ದೊಡ್ಡ ಆಘಾತ ನೀಡಿದ್ದ ಭಾರತ ಈಗ ಅವರ ಆದಾಯದ ಮೂಲ ನಾಶ ಮಾಡೋದಕ್ಕೆ ಕಠಿಣ ಹೆಜ್ಜೆ ಮುಂದಿಡುತ್ತಿದೆ.
19 ಖಾಲಿಸ್ತಾನಿ ಭಯೋತ್ಪಾದಕರಿಗೆ ಶಾಕ್!
ಹೌದು, ಕೆನಡಾ ಮೂಲದ ಗುರುಪತ್ವಂತ್ ಸಿಂಗ್ ಆಸ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ಅಂದರೆ ಎನ್ಐಎ ಮುಟ್ಟುಗೋಲು ಹಾಕಿದ ಒಂದು ದಿನದ ನಂತರ ಇಂತಹ ಕ್ರಮದ ಕುರಿತು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅಮೆರಿಕ, ಬ್ರಿಟನ್, ಕೆನಡಾ, ಯುಎಇ & ಪಾಕಿಸ್ತಾನ ಸೇರಿದಂತೆ ಇತರ ದೇಶಗಳಲ್ಲಿ ಅಡಗಿರುವ 19 ಖಾಲಿಸ್ತಾನಿ ಭಯೋತ್ಪಾದಕರನ್ನು ಸರ್ಕಾರವು ಗುರುತಿಸಿದೆ ಎನ್ನಲಾಗಿದೆ. ಈ ಮೂಲಕ ಅವರೆಲ್ಲರಿಗೂ ದೀಪಾವಳಿ ಸಂಭ್ರಮ ತೋರಿಸಲು ಸಿದ್ಧತೆ ನಡೆಸಲಾಗಿದೆ!
ಯಾರೆಲ್ಲಾ ಇದ್ದಾರೆ ಈ ಪಟ್ಟಿಯಲ್ಲಿ?
ಇನ್ನು ವರದಿಯಲ್ಲಿ ಪ್ರಕಟಿಸಿದಂತೆ, ಬ್ರಿಟನ್ ಮೂಲದ ಪರಮ್‌ಜಿತ್ ಸಿಂಗ್ ಪಮ್ಮಾ ಮತ್ತು ಪಾಕಿಸ್ತಾನದಲ್ಲಿ ಅಡಗಿದ ವಾಧ್ವಾ ಸಿಂಗ್ ಬಬ್ಬರ್ ಅಥವಾ ಚಾಚಾ, ಬ್ರಿಟನ್‌ನಲ್ಲಿ ಇರುವ ಕುಲ್ವಂತ್ ಸಿಂಗ್ ಮುತ್ದಾ, ಅಮೆರಿಕದಲ್ಲಿ ಇರುವ ಜೆಎಸ್ ಧಲಿವಾಲ್ ಸೇರಿದಂತೆ ಬ್ರಿಟನ್‌ನ ಸುಖ್‌ಪಕ್ ಸಿಂಗ್, ಅಮೆರಿಕದಲ್ಲಿ ಇರುವ ರಾಣಾ ಸಂಘ್, ಬ್ರಿಟನ್‌ನಲ್ಲಿ ಇರುವ ಸರಬ್ಜಿತ್ ಸಿಂಗ್ ಬೇನೂರ್, ಕುಲ್ವಂತ್ ಸಿಂಗ್ ಅಥವಾ ಈತನನ್ನು ಕಾಂತಾ ಎಂಬ ಹೆಸರಿನಿಂದ ಕೂಡ ಕರೆಯುತ್ತಾರೆ, ಅಮೆರಿಕದಲ್ಲಿರುವ ಹರ್ಜಪ್ ಸಿಂಗ್ ಅಥವಾ ಜಪ್ಪಿ ಡಿಂಗ್ ಪಟ್ಟಿಯಲ್ಲಿದ್ದಾರೆ. ಇವರಷ್ಟೇ ಅಲ್ಲದೆ ಇನ್ನೂ ಹಲವರ ಹೆಸರು ಗುರುತಿಸಲಾಗಿದ್ದು, ಮುಂದೆ ಓದಿ.

ಪಾಕಿಸ್ತಾನದಲ್ಲಿ ಅಡಗಿರುವ ರಂಜಿತ್ ಸಿಂಗ್ ನೀತಾ, ಗುರ್ಮೀತ್ ಸಿಂಗ್ ಮತ್ತು ಬ್ರಿಟನ್‌ನಲ್ಲಿ ಇರುವ ಗುರುಪ್ರೀತ್ ಸಿಂಗ್ ಅಥವಾ ಬಾಘಿ, ಆಸ್ಟ್ರೇಲಿಯಾದಲ್ಲಿ ಇರುವ ಗುರ್ಜಂತ್ ಸಿಂಗ್ ಧಿಲ್ಲೋನ್, ಯುರೋಪ್ ಮತ್ತು ಕೆನಡಾದಲ್ಲಿರುವ ಜಸ್ಬಿತ್ ಸಿಂಗ್ ರೋಡ್, ಅಮೆರಿಕದಲ್ಲಿ ಇರುವ ಅಮರದೀಪ್ ಸಿಂಗ್ ಪುರೆವಾಲ್, ಕೆನಡಾದಲ್ಲಿ ಇರುವ ಜತೀಂದರ್ ಸಿಂಗ್ ಗ್ರೆವಾಲ್, ಹಾಗೂ ಬ್ರಿಟನ್‌ನಲ್ಲಿ ಇರುವ ಡುಪಿಂದರ್ ಜೀತ್ ಅಂತಿಮವಾಗಿ ಅಮೆರಿಕದಲ್ಲಿರುವ ಎಸ್ ಹಿಮ್ಮತ್ ಸಿಂಗ್ ಈ ಪಟ್ಟಿಯಲ್ಲಿದ್ದಾರೆ.
ಕೆನಡಾದಲ್ಲಿ ಖಲಿಸ್ತಾನಿಗಳ ಹಾವಳಿ ಜೋರು!
ಅಷ್ಟಕ್ಕೂ ಭಾರತದ ವಿರುದ್ಧ ಕಳೆದ ಕೆಲ ವರ್ಷದಿಂದ ಪದೇ ಪದೇ ಷಡ್ಯಂತ್ರ ನಡೆದಿದ್ದು, ಈ ಪೈಕಿ ಭಾರತೀಯರು ವಾಸ ಇರುವ ಪ್ರದೇಶಗಳ ಮೇಲೆ ಇದೇ ಖಲಿಸ್ತಾನಿಗಳು ಅಟ್ಯಾಕ್ ಮಾಡಿದ್ದಾರೆ. ಭಾರತೀಯ ದೇವಾಲಯ, ಭಾರತದ ರಾಜತಾಂತ್ರಿಕ ಕಚೇರಿಗಳ ಮೇಲೆಯೇ ದಾಳಿ ನಡೆದಿವೆ. ಆದರೆ ಆಗೆಲ್ಲಾ ಕಠಿಣ ಕ್ರಮ ಕೈಗೊಳ್ಳದ ಕೆನಡಾ ಸರ್ಕಾರ ಇದ್ದಕ್ಕಿದ್ದಂತೆ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿತ್ತು. ಅದರಲ್ಲೂ ಖಲಿಸ್ತಾನಿ ಉಗ್ರನ ಕೊಲೆಗೆ ಭಾರತ ಕಾರಣ ಎಂಬಂತೆ ಆರೋಪವನ್ನ ಮಾಡಿದ್ದರು ಕೆನಡಾ ಪ್ರಧಾನಿ. ಇದೀಗ ಕೆನಡಾ ಆರೋಪಕ್ಕೆ ಸರಿಯಾಗಿ ಉತ್ತರ ಕೊಡಲು ಭಾರತ ಸಜ್ಜಾಗಿದೆ.
ಜಗಳ ಶುರುವಾಗಿದ್ದು ಯಾವ ವಿಚಾರಕ್ಕೆ?
ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ ಈ ವರ್ಷದ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಿದ್ರು. ಹಿಂಸಾಚಾರ & ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಹೀಗೆ ಕೊಲೆಯಾಗಿದ್ದ ನಿಜ್ಜರ್ ವಿರುದ್ಧ ಇತ್ತು. ಆದರೆ ಈ ಕೊಲೆಯನ್ನು ಭಾರತದ ಏಜೆಂಟ್‌ಗಳು ಮಾಡಿದ್ದಾರೆ ಎನ್ನುತ್ತಿದ್ದಾರೆ ಕೆನಡಾ ಪ್ರಧಾನಿ. ಸೂಕ್ತ ಸಾಕ್ಷ್ಯವೇ ಇಲ್ಲದೆ ಇಂಥ ಆರೋಪ ಸರಿಯಲ್ಲ ಎಂದು ಭಾರತ ಕೂಡ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿತ್ತು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಖಲಿಸ್ತಾನಿಗಳ ಹಣ ಹಾಗೂ ಆರ್ಥಿಕ ಮೂಲ ನಾಶ ಮಾಡಲು ಮಾಸ್ಟರ್ ಪ್ಲ್ಯಾನ್ ಸಜ್ಜಾಗಿದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications