ಕಾಶ್ಮೀರದ ಮೇಲೆ ನಿರಂತರ ದಾಳಿ ನಡೆಸುತ್ತಿದೆ ಪಾಪಿ ಪಾಕಿಸ್ತಾನ ಸೇನೆ, ಈ ಬಾರಿ ಪಾಕ್ ಉಡೀಸ್ ಗ್ಯಾರಂಟಿ! Operation Sindoor
ಪಾಕಿಸ್ತಾನಕ್ಕೆ ಎಷ್ಟೇ ಏಟು ಕೊಟ್ಟರೂ ಬುದ್ಧಿ ಬರುತ್ತಿಲ್ಲ ಅಂತಾ ಕಾಣುತ್ತಿದೆ, ಸರ್ವನಾಶ ಆಗಲು ಪಾಪಿ ಪಾಕಿಸ್ತಾನ ಕಾಯುತ್ತಿದೆ ಎಂಬ ಮುನ್ಸೂಚನೆ ಸಿಗುತ್ತಿದೆ. ಪಾಪಿ ಉಗ್ರರಿಗೆ ನೆರವು ನೀಡುತ್ತಾ ಬಂದಿದ್ದ ಪಾಕಿಸ್ತಾನಕ್ಕೆ ಈಗಾಗಲೇ ಭಾರತೀಯ ಸೇನೆ ಭರ್ಜರಿಯಾಗಿ ಆಘಾತವನ್ನ ನೀಡಿದೆ. ಹೀಗಿದ್ದರೂ ಸೈಲೆಂಟ್ ಆಗದ ಪಾಪಿ ಪಾಕ್, ಭಾರತದ ಕಿರೀಟ ಕಾಶ್ಮೀರದ ಮೇಲೆ ಘೋರವಾದ ದಾಳಿಯನ್ನ ಮುಂದುವರಿಸಿದೆ.
ಭಾರತೀಯ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ನಂತರ ಪಾಪಿ ಪಾಕಿಸ್ತಾನ ಈ ರೀತಿ ರೊಚ್ಚಿಗೆದ್ದಿದೆ. ಈಗಾಗಲೇ ಪಾಕಿಸ್ತಾನದ ಹೆಡೆಮುರಿ ಕಟ್ಟಿರುವ ಭಾರತೀಯ ಸೇನೆಯು ಬುದ್ಧಿ ಹೇಳುತ್ತಿದೆ. ಆದರೂ ಪಾಪಿ ಪಾಕ್ ಮಾತ್ರ ತನ್ನ ಹೊಲಸು ಕೆಲಸ ಮುಂದುವರಿಸಿ, ಭಾರತದ ಮೇಲೆ ದಾಳಿಯನ್ನ ನಡೆಸುತ್ತಿದೆ. ಅದರಲ್ಲೂ ಭಾರತದ ಗಡಿ ಭಾಗದಲ್ಲಿ ಭೀಕರ ದಾಳಿಯನ್ನ ನಡೆಸುತ್ತಿರುವ ಪಾಕಿಸ್ತಾನ ನಾಶವಾಗಿ ಹೋಗಲು ಸಿದ್ಧವಾದಂತೆ ಕಾಣುತ್ತಿದೆ. ಈ ರೀತಿ ಪಾಪಿ ಪಾಕಿಸ್ತಾನ ಸೇನೆ ನಡೆಸುತ್ತಿರುವ ದಾಳಿಯನ್ನು ಭಾರತೀಯ ಸೇನೆ ದಿಟ್ಟವಾಗಿಯೇ ಎದುರಿಸಿ ನಿಂತಿದೆ.

ಗಡಿ ಭಾಗದಲ್ಲಿ ಜನರಿಗೆ ಆತಂಕ
ಪಾಕಿಸ್ತಾನ ಈ ರೀತಿಯಾಗಿ ಗಡಿ ಭಾಗದಲ್ಲಿ ದಾಳಿ ನಡೆಸುತ್ತಿರುವ ಹಿನ್ನೆಲೆ ಭಯದ ವಾತಾವರಣ ನಿರ್ಮಾಣ ಆಗಿದ್ದು, ಗಡಿ ಭಾಗದಲ್ಲಿ ವಾಸ ಇರುವ ಜನರಿಗೆ ಆತಂಕ ಎದುರಾಗಿದೆ. ಹೀಗಾಗಿ ಸಾವಿರಾರು ಹಳ್ಳಿಗಳ ಜನರಿಗೆ ಬಂಕರ್‌ನಲ್ಲಿ ಜಾಗ ನೀಡಲಾಗುತ್ತಿದ್ದು, ಸಂಕಷ್ಟ ಎದುರಾದರೆ ತಕ್ಷಣ ಬಂಕರ್ ಒಳಗೆ ಆಶ್ರಯ ಪಡೆಯಲು ಸೂಚನೆ ನೀಡಲಾಗಿದೆ. ಹಾಗೇ ಅಗತ್ಯ ಇರುವ ವಸ್ತುಗಳನ್ನ ಕೂಡ ಗಡಿ ಭಾಗದ ಜನರಿಗೆ ನೀಡಲಾಗುತ್ತಿದೆ.












Click it and Unblock the Notifications