India Vs Pakistan: ಪಿಒಕೆ ಅಲ್ಲ, ನೇರ ಲಾಹೋರ್‌ಗೆ ನುಗ್ಗಲಿದೆ ಭಾರತ ಸೇನೆ!
ಭಾರತದ ವಿರುದ್ಧ ನಿಂತ ಯಾವುದೇ ದೇಶ ಉದ್ಧಾರ ಆಗಿಲ್ಲ, ಯಾಕಂದ್ರೆ ಭಾರತದ ತಾಕತ್ ಹಾಗೆ ಇದೆ. ಅದರಲ್ಲೂ ಪಾಕಿಸ್ತಾನಕ್ಕೆ ಪದೇ ಪದೇ ಬಾರಿಸಿ ಬುದ್ಧಿ ಹೇಳಿದರೂ ಬದಲಾವಣೆ ಆಗಿಲ್ಲ. ಇಂತಹ ಸಮಯದಲ್ಲೇ ಪಾಪಿ ಪಾಕಿಸ್ತಾನದ ಉಗ್ರರು ಭಾರತದ ಕಿರೀಟ ಕಾಶ್ಮೀರಕ್ಕೆ ನುಗ್ಗಿ, ದೊಡ್ಡ ಗಲಾಟೆ ಕೂಡ ಮಾಡಿದ್ದಾರೆ. ಹೀಗಿದ್ದಾಗಲೇ ಪಿಒಕೆ ಅಲ್ಲ, ನೇರ ಲಾಹೋರ್‌ಗೆ ನುಗ್ಗಲು ಇದೀಗ ಭಾರತೀಯ ಸೇನೆ ಸಕಲ ಸಿದ್ಧತೆ ನಡೆಸಿದೆ. ಹಾಗಾದ್ರೆ ಭಾರತ & ಪಾಕಿಸ್ತಾನ ನಡುವೆ ಯುದ್ಧ ಆರಂಭ ಆಗೇ ಹೋಯ್ತಾ?
ಭಾರತೀಯರು ಈಗ ಆಕ್ರೋಶದಿಂದ ಪಾಕಿಸ್ತಾನ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯ್ತಿದ್ದಾರೆ. ಹೌದು, ಏಪ್ರಿಲ್ 22ರ ಮಂಗಳವಾರ ಪಾಪಿ ಉಗ್ರರು ಪಾಕಿಸ್ತಾನದಿಂದ ಬಂದು ಭಾರತದಲ್ಲಿ ರಕ್ತದ ಹೊಳೆ ಹರಿಸಿದ್ದರು. ಹೀಗಿದ್ದಾಗ ಭಾರತವು ಕೂಡ ಪಾಕಿಸ್ತಾನದ ವಿರುದ್ಧ ಖಡಕ್ ಕ್ರಮ ಕೈಗೊಳ್ಳುತ್ತಿದೆ. ಇದೇ ಕಾರಣಕ್ಕಾಗಿ ಊಸರವಳ್ಳಿ ಪಾಪಿ ಪಾಕಿಸ್ತಾನ ಇದೀಗ ಜಗತ್ತಿನ ಗಮನ ಬೇರೆ ಕಡೆಗೆ ಸೆಳೆಯಲು ಏನೇನೋ ಪ್ರಯತ್ನ ಮಾಡುತ್ತಿದೆ. ಆದರೆ ಭಾರತ ಮಾತ್ರ ಈ ಬಾರಿ ಪಾಕಿಸ್ತಾನಕ್ಕೆ ಸರಿಯಾಗಿ ಬುದ್ಧಿ ಕಲಿಸಲು ಮುಂದಾಗಿದೆ. ಅದರಲ್ಲೂ ಪಾಕಿಸ್ತಾನದ ರಾಜಧಾನಿ ಕೂಡ ಬೆಚ್ಚಿಬಿದ್ದಿದೆ!

ಪಿಒಕೆ ಅಲ್ಲ, ನೇರ ಲಾಹೋರ್‌ಗೆ!
ಏಪ್ರಿಲ್ 22ರ ಮಂಗಳವಾರ ಉಗ್ರರ ದಾಳಿಯಲ್ಲಿ 26 ಭಾರತೀಯರು ಬಲಿಯಾದ ಹಿನ್ನೆಲೆಯಲ್ಲಿ ಭಾರತ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದರು, ಯಾರೂ ಊಹೆ ಮಾಡದ ರೀತಿಯಲ್ಲಿ ರಿವೇಂಜ್ ಗ್ಯಾರಂಟಿ ಅಂತಾ ಹೇಳಿದ್ದರು ಪ್ರಧಾನಿ ಮೋದಿ ಅವರು. ಹೀಗಿದ್ದಾಗಲೇ, ಪಿಒಕೆ ಅಲ್ಲ, ನೇರ ಲಾಹೋರ್‌ಗೆ ನುಗ್ಗಲಿದೆಯಂತೆ ಭಾರತದ ಸೇನೆ!
ನುಗ್ಗಿ ಹೊಡೆಯಲಿದೆ ಭಾರತೀಯ ಸೇನೆ!
ಹೌದು, ಪ್ರಧಾನಿ ಮೋದಿ ಅವರ ಹೇಳಿಕೆಯ ಬಗ್ಗೆ ಚರ್ಚೆ ಶುರುವಾಗಿದೆ. ಇದೀಗ ಪಾಕಿಸ್ತಾನ ಎಂಬ ನರಿ ಬುದ್ಧಿ ದೇಶಕ್ಕೆ ಪಾಠ ಕಲಿಸದೇ ಇದ್ದರೆ ಭವಿಷ್ಯದಲ್ಲಿ ಇದು ಇನ್ನಷ್ಟು ಹಿಂಸೆಗೆ ಕಾರಣ ಆಗಬಹುದು ಎಂಬ ಮಾತು ಕೇಳಿ ಬಂದಿದೆ. ಇದೇ ಕಾರಣಕ್ಕೆ ಪಾಕಿಸ್ತಾನದ ಒಳಗಡೆ ನುಗ್ಗಿ ಅಟ್ಯಾಕ್ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಇಂತಹ ಸಮಯದಲ್ಲೇ, ಇತ್ತ ಭಾರತೀಯ ಸೇನೆ ಕೂಡ ಮಹತ್ವದ ಪ್ಲಾನ್ ಮಾಡಿದೆ.
ಅದು ಏನೆಂದರೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗುವ ಬದಲಾಗಿ ನೇರ ಪಾಕಿಸ್ತಾನದ ದೊಡ್ಡ ನಗರಗಳ ಪೈಕಿ ಒಂದಾಗಿರುವ ಲಾಹೋರ್ ಒಳಗೆ ನುಗ್ಗಿ ಅಟ್ಯಾಕ್ ಮಾಡಲಿದೆ, ಎಂಬ ಚರ್ಚೆ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ ಆದ್ರೆ ಭಾರತೀಯ ಸೇನೆ ಅಥವಾ ಸರ್ಕಾರ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ, ಹೀಗಾಗಿ ಕುತೂಹಲ ಡಬಲ್ ಆಗಿದೆ.












Click it and Unblock the Notifications