ನೀವು ನಂಬಲೇಬೇಕು, ಸೆಲ್ಫಿ ಸಾವಿನಲ್ಲಿ ಭಾರತಕ್ಕೆ ಅಗ್ರ ಸ್ಥಾನ!

Posted By:
Subscribe to Oneindia Kannada

ಮೊರಾದಾಬಾದ್ (ಉತ್ತರ ಪ್ರದೇಶ), ಜೂನ್ 20: ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದವರಿಗೆ ಶಿಕ್ಷೆ ವಿಧಿಸುವ ಹೊಸ ಕಾನೂನನ್ನು ಉತ್ತರ ಪ್ರದೇಶದ ಮೊರಾದಾಬಾದ್ ಪೊಲೀಸರು ಜಾರಿಗೆ ತಂದಿದ್ದಾರೆ. ಇತ್ತೀಚೆಗೆ ಈ ಪ್ರದೇಶದಲ್ಲಿ ಸೆಲ್ಫಿ ಹುಚ್ಚು ಹೆಚ್ಚುತ್ತಿದ್ದು, ಸೆಲ್ಫಿ ಕಾರಣದಿಂದಲೇ ಕೆಲವು ಸಾವು-ನೋವುಗಳು ಸಂಭವಿಸಿರುವುದೆ ಈ ನಿರ್ಧಾರಕ್ಕೆ ಕಾರಣ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಭೋರ್ಗರೆಯುವ ಅಪಾಯಕಾರಿ ಅಲೆಗಳ ಜತೆ ನಿಮ್ಮ 'ಸೆಲ್ಫಿ' ಸಾಹಸ ಬೇಡ

ಈ ಸುದ್ದಿಯತ್ತ ಕಣ್ಣು ಹಾಯಿಸುತ್ತಿದ್ದಾಗ ತಿಳಿದಿದ್ದು, ಸೆಲ್ಫಿ ಸಾವಿನ ಸಂಖ್ಯೆಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ ಎಂಬ ಆಘಾತಕಾರಿ ಸುದ್ದಿ!

ಕುಲ್ಫಿಯಷ್ಟೇ ತಂಪಾದ ಹಿಮಾಚಲದ ಚೆಲುವೆಯರ ಸೆಲ್ಫಿ!

ನಿಜ, ಇತ್ತೀಚೆಗೆ ಸೆಲ್ಫಿ ಹುಚ್ಚು ಅದೆಷ್ಟು ಹೆಚ್ಚಾಗಿದೆ ಅಂದ್ರೆ ಈಗಿನ್ನೂ ವರ್ಷ ತುಂಬಿದ ಮಗುವೂ ಕೈಯಲ್ಲಿ ಫೋನು ಹಿಡಿದು ಬಾಯಿ ಸೊಟ್ಟ ಮಾಡಿಕೊಂಡು ಸೆಲ್ಫಿ ಪ್ರಯೋಗ ಮಾಡುತ್ತಿರುತ್ತದೆ. ಎಂಬತ್ತು ದಾಟಿದ ವೃದ್ಧರೂ ಬೊಚ್ಚು ಬಾಯಿಯಲ್ಲೇ ಸೆಲ್ಫಿಗೆ ಪೋಸು ಕೊಡುತ್ತಾರೆ. ಒಟ್ಟಿನಲ್ಲಿ ವಯಸ್ಸು, ಲಿಂಗ ಎಲ್ಲವನ್ನೂ ಮೀರಿ ಸೆಲ್ಫಿ ಹವಾ ಎಲ್ಲೆಡೆ, ಎಲ್ಲರನ್ನೂ ವ್ಯಾಪಿಸಿದೆ.

ಸೆಲ್ಫೀ ತೆಗೆಯಲು ಹೋಗಿ 60 ಅಡಿ ಎತ್ತರದಿಂದ ಬಿದ್ರೂ ಬದುಕಿದಳು!

ಆದರೆ ಒಂದು ಹಂತದವರೆಗೆ ಈ ಸೆಲ್ಫಿ ಹುಚ್ಚು ನಿರುಪದ್ರವಿಯಾಗಿಯೇ ಇತ್ತು. ಬಾಯಿ ಓರೆ ಮಾಡಿಕೊಂಡೋ, ಕಣ್ಣು ಮಿಟುಗಿಸಿಯೋ, ನಾಲಿಗೆ ಹೊರಚಾಚಿಯೋ, ಕನ್ನು ಹೊಡೆಯುತ್ತಲೋ ಒಟ್ಟಿನಲ್ಲಿ ತರಹೇವಾರಿ ಭಂಗಿಯಲ್ಲಿ ತೆಗೆದುಕೊಳ್ಳುತ್ತಿದ್ದ ಸೆಲ್ಫಿ ಕ್ರಮೇಣ ಅಪಾಯದ ರೇಖೆಯ್ನು ದಾಟಿ ಒಂದಷ್ಟು ಕಳವಳವನ್ನುಂಟು ಮಾಡಿತ್ತು.

ಸಮುದ್ರದ ನಡುವಿನ ನಡುಗಡ್ಡೆಯ ತುತ್ತ ತುದಿಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವ ಹುಚ್ಚು, ಬೆಟ್ಟದ ತುದಿಯಲ್ಲಿ ಕೈಯಾಡಿಸುತ್ತ ಸೆಲ್ಫಿ ತೆಗೆದುಕೊಳ್ಳುವ ಭಂಡ ಧೈರ್ಯ ಎಲ್ಲವೂ ಸೇರಿ, 'ಇಲ್ಲಿ ಸೆಲ್ಫಿ ತೆಗೆಯುವಂತಿಲ್ಲ' ಎಂದು ಪ್ರವಾಸಿ ತಾಣಗಳಲ್ಲಿ ಬೋರ್ಡ್ ಹಾಕುವ ಮಟ್ಟದವರೆಗೆ ಈ ಅಪಾಯದ ತಲೆಬಿಸಿ ತಂದಿಟ್ಟಿತ್ತು.

ಅಗ್ರಸ್ಥಾನದಲ್ಲಿ ಭಾರತ!

ಅಗ್ರಸ್ಥಾನದಲ್ಲಿ ಭಾರತ!

ಈ ಸೆಲ್ಫಿ ಹುಚ್ಚಿನಿಂದ ಸಾಯುವವರ ಸಂಖ್ಯೆಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ ಎಂಬ ಆಘಾತಕಅರಿ ಅಂಶವನ್ನು ಸಮೀಕ್ಷೆಯೊಂದು ಬಯಲಿಗೆಳೆದಿದೆ. ಭಾರ್ತದಲ್ಲಿ ಮಾರ್ಚ್ 2004 ರಿಂದ ಸೆಪ್ಟೆಂಬರ್ ಅವರೆಗೆ ವಿಶ್ವದಾದ್ಯಂತ ದಾಖಲಾದ 127 ಸೆಲ್ಫಿ ಸಾವು ಪ್ರಕರಣದಲ್ಲಿ ಭಾರತದ ಕೊಡುಗೆ 76!

ಪುರುಷರೇ ಹೆಚ್ಚು

ಪುರುಷರೇ ಹೆಚ್ಚು

ಸೆಲ್ಫಿ ಹುಚ್ಚಿನ ಕುರಿತು ಅಭ್ಯಸಿಸಿದ ಕೆಲ ಅಧ್ಯಯನಕಾರರ ಪ್ರಕಾರ ಈ ಹುಚ್ಚು ಮಹಿಳೆಯರಿಗಿಂತ ಪುರುಷರಿಗೇ ಹೆಚ್ಚು. ಅಪಾಯಕಾರಿ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಪುರುಷರದು ಎತ್ತಿದ ಕೈ!

24 ವರ್ಷದೊಳಗಿನವರು

24 ವರ್ಷದೊಳಗಿನವರು

ಹೀಗೆ ಸೆಲ್ಫಿ ಸಾವಿಗೆ ಬಲಿಯಾಗುವವರಲ್ಲಿ 24 ವರ್ಷ ವಯಸ್ಸಿಗಿಂಗತ ಕಡಿಮೆಯವರೇ ಹೆಚ್ಚು ಎನ್ನುತ್ತದೆ ಸಮೀಕ್ಷೆಯೊಂದು! ಎತ್ತರ ಕಟ್ಟಡದ ಮೆಲೆ ನಿಂತು ಪೋಸು ಕೊಡುವುದರಲ್ಲಿ ಈ ವಯಸ್ಸಿನ ಹುಡುಗರಿಗೆ ಎಲ್ಲಿಲ್ಲದ ಆಸ್ಥೆ.

ಸಾವಿನೊಂದಿಗೆ ಸರಸ!

ಸಾವಿನೊಂದಿಗೆ ಸರಸ!

ಭಾರತದಲ್ಲಿ ಹೆಚ್ಚಾಗಿ ಸೆಲ್ಫಿ ಸಾವು ಸಂಭವಿಸುವುದು ನೀರಿನಲ್ಲಿ. ಜಲಪಾತಗಳು, ನದಿ, ಬೀಚ್ ಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚಿಗೆ ಸಿಕ್ಕಿ ಭಾರತದ ಯುವಕರು ಸಾವಿಗೀಡಾಗುತ್ತಿದ್ದಾರೆ ಎಂಬುದು ಸಮೀಕ್ಷೆಯ ವರದಿ. ಅಪಾಯಕಾರಿ ಪ್ರವಾಹವಿರುವ ನೀರಿನೊಂದಿಗೆ ಸರಸವಾಡುತ್ತ ಸೆಲ್ಫಿ ತೆಗೆದುಕೊಳ್ಳುವ ಈ ಹುಡುಗರ ಹುಚ್ಚಾಟಕ್ಕೆ ಕೊನೆಯೆಂದು?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Selfie deaths in India are more than anywhere in world, study says. India is in first rank in selfie deaths.
Please Wait while comments are loading...