ಭಾರತ ಎಂದೆಂದಿಗೂ ಹಿಂದೂ ರಾಷ್ಟ್ರ: ಗೋವಾ ಡಿಸಿಎಂ
ಪಣಜಿ, ಜು.25: 'ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ದೇಶದ ಪ್ರತಿಯೊಬ್ಬ ಪ್ರಜೆಯು ಬೆಂಬಲ ಸೂಚಿಸಿದರೆ ಭಾರತವನ್ನು ಹಿಂದೂ ರಾಷ್ಟ್ರ ಮಾಡಲಿದ್ದಾರೆ' ಎಂದು ವಿವಾದಿತ ಹೇಳಿಕೆ ನೀಡಿದ್ದ ಗೋವಾ ಸಚಿವ ದೀಪಕ್ ಹೇಳಿಕೆಯನ್ನು ಉಪ ಮುಖ್ಯಮಂತ್ರಿ ಫ್ರಾನ್ಸಿಸ್ ಡಿಸೋಜ ಅವರು ತಮ್ಮ ಹೇಳಿಕೆಯನ್ನು ಶುಕ್ರವಾರ ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ ಹಿರಿಯ ನಾಯಕ ಮತ್ತು ಗೋವಾದ ಉಪಮುಖ್ಯಮಂತ್ರಿ ಫ್ರಾನ್ಸಿಸ್ ಡಿ ಸೋಜಾ ಅವರು ಭಾರತ ಹಿಂದೂ ರಾಷ್ಟ್ರವಾಗಿದ್ದು, ನಾನೊಬ್ಬ ಹಿಂದೂ ಕ್ರಿಶ್ಚಿಯನ್ ಎಂದು ಹೇಳುವ ಮೂಲಕ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಸಚಿವ ದೀಪಕ್ ಅವರಿಗೆ ಬೆಂಬಲ ಸೂಚಿಸಿದ ಡಿಸೋಜಾ ಅವರು ಭಾರತ ಎಂದಿಗೂ ಹಿಂದೂ ರಾಷ್ಟ್ರವೇ ಆಗಿತ್ತು. ಇದು ಹಿಂದೂಸ್ತಾನ, ಹಿಂದೂಸ್ತಾನದಲ್ಲಿರುವ ಎಲ್ಲರೂ ಹಿಂದೂಗಳೇ ನಾನೂ ಸೇರಿದಂತೆ. ನಾನೊಬ್ಬ ಕ್ರಿಶ್ಚಿಯನ್ ಹಿಂದು ಎಂದು ಹೇಳಿದ್ದಾರೆ.[ಬಿಕಿನಿ ಬೇಡವೆಂದ ಸಚಿವನಿಗೆ ಮಿನಿ ಸ್ಕರ್ಟ್ ಗಿಫ್ಟ್]
ಗೋವಾದ ಸಾರಿಗೆ ಸಚಿವ ದೀಪಕ್ ಧವಳೀಕರ್ ಅವರು ಗುರುವಾರ ವಿಧಾನಸಭೆಯಲ್ಲಿ ಈ ಹೇಳಿಕೆ ನೀಡಿರುವುದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ವಿಧಾನಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸುವ ನಿಲುವಳಿಯನ್ನು ಮಂಡಿಸಲಾಯಿತು.
ಈ ವೇಳೆ ಮಾತನಾಡಿದ ದೀಪಕ್ ಧವಳೀಕರ್ ಎಲ್ಲರೂ ಮೋದಿಯವರಿಗೆ ಬೆಂಬಲಿಸಿದರೆ ಭಾರತವನ್ನು ಹಿಂದೂ ರಾಷ್ಟ್ರ ಮಾಡಲಿದ್ದಾರೆ ಎಂದಿದ್ದರು.ಇದು ಕೇವಲ ನನ್ನ ಒಬ್ಬನ ಅಭಿಪ್ರಾಯವಲ್ಲ.ಪ್ರತಿಯೊಬ್ಬ ಹಿಂದೂಗಳ ಭಾವನೆಯೂ ಇದಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಜನರೆಲ್ಲರೂ ಹಿಂದೂಗಳೇ ಆಗಿದ್ದಾರೆ
ಹಿಂದೂಸ್ಥಾನದಲ್ಲಿರುವ ಜನರೆಲ್ಲರೂ ಹಿಂದೂಗಳೇ ಆಗಿದ್ದಾರೆ. ನಾನು ಒಬ್ಬ ಕ್ರೈಸ್ತ ಹಿಂದೂ ಎಂದು ಫ್ರಾನ್ಸಿಸ್ ಡಿಸೋಜ ಹೇಳಿಕೊಂಡಿದ್ದಾರೆ. ಧವಳೀಕರ್ ಹೇಳಿದಂತೆ ಭಾರತವನ್ನ ಹಿಂದೂ ರಾಷ್ಟ್ರವನ್ನಾಗಿ ಕಟ್ಟುವ ಅಗತ್ಯವಿಲ್ಲ. ಅದು ಮೊದಲಿಂದಲೂ ಹಿಂದೂ ರಾಷ್ಟ್ರವೇ ಆಗಿದೆ ಎಂದು ಉಪಮುಖ್ಯಮಂತ್ರಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಚಿವರ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ
ಸಚಿವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಗೋವಾ ಕಾಂಗ್ರೆಸ್ ಪ್ರಧಾನಿ ಹಾಗೂ ಮುಖ್ಯಮಂತ್ರಿ ಮನೋಹರ್ ಪಾರಿಕರ್ ಸ್ಪಷ್ಟನೆ ನೀಡಬೇಕೆಂದು ಪಕ್ಷದ ವಕ್ತಾರ ದುರ್ಗದಾಸ್ ಕಾಮತ್ ಒತ್ತಾಯಿಸಿದ್ದರು.. ಇದು ಬಿಜೆಪಿಯ ಹಿಡನ್ ಅಜೆಂಡಾ ಏನೆಂಬುದನ್ನು ತೋರಿಸುತ್ತದೆ. ಮುಖ್ಯಮಂತ್ರಿ ಇದಕ್ಕೆ ಹೊಣೆಗಾರರೆಂದು ಹೇಳಿದ್ದಾರೆ.
|
ನಾನೊಬ್ಬ ಹಿಂದೂ ಕ್ರಿಶ್ಚಿಯನ್ : ಫ್ರಾನ್ಸಿಸ್ ಡಿಸೋಜಾ
ಹಿಂದೂ ರಾಷ್ಟ್ರ ಕಟ್ಟಬೇಕಿಲ್ಲ. ಭಾರತ ಜನ್ಮತಃ ಹಿಂದೂ ರಾಷ್ಟ್ರವೇ ಆಗಿದೆ ಎಂದು ಗೋವಾದ ಉಪಮುಖ್ಯಮಂತ್ರಿ ಫ್ರಾನ್ಸಿಸ್ ಡಿಸೋಜಾ ಹೇಳಿದ್ದಾರೆ.
|
ಬಿಜೆಪಿ ತನ್ನ ಪ್ರಣಾಳಿಕೆ ಬಿಚ್ಚಿಡುತ್ತಿದೆ
ಬಿಜೆಪಿ ತನ್ನ ನೈಜ ಪ್ರಣಾಳಿಕೆ ಈಗ ಬಿಚ್ಚಿಡುತ್ತಿದೆ
|
ಗೋವಾ ಅಸೆಂಬ್ಲಿ ಹೊಸ ಕಳೆ
ಗೋವಾ ಅಸೆಂಬ್ಲಿ ಹೊಸ ಕಳೆಯಿಂದ ಕೂಡಿದೆ. ಎಲ್ಲರೂ ಲ್ಯಾಪ್ ಟ್ಯಾಪ್, ಐ ಪ್ಯಾಡ್ ಬಳಸುವ ಮೂಲಕ ಪೇಪರ್ ಲೆಸ್ ಅಸೆಂಬ್ಲಿಯಾಗುತ್ತಿದೆ. ಈ ನಡುವೆ ಈ ವಿವಾದ ಈ ಸಾಧನೆಯನ್ನು ಮುಚ್ಚಿ ಹಾಕುತ್ತಿದೆ
|
ಸಂವಿಧಾನ ಎಲ್ಲಾ ಅವಕಾಶ ನೀಡಿದೆ
ಯಾವುದೇ ಮತ ಪಂಥ ಅನುಸರಿಸಲು ಅವಕಾಶವಿದೆ. ವಾಕ್ ಸ್ವಾತಂತ್ರ್ಯವಿದೆ.












Click it and Unblock the Notifications