ಜೂ.12: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಜೂ.12: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
6.00: ಶರದ್ ಯಾದವ್ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
5.30 : ಪೂಂಚ್ ನಲ್ಲಿ ಸ್ಪೋಟ, 1 ಭಾರತೀಯ ಸೈನಿಕ ಹುತಾತ್ಮ.
5.00: ಪುಣೆ ಟೆಕ್ಕಿ ಸಾವಿನ ಪ್ರಕರಣ ಒಟ್ಟಾರೆ 21 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
2.45: ಮುಕುಲ್ ರೋಹಟ್ಕಿ ಅವರು ಭಾರತದ ನೂತನ ಅಟರ್ನಿ ಜನರಲ್ ಆಗಿ ನೇಮಕಗೊಂಡಿದ್ದಾರೆ.

10.15: ಅಗ್ಗದ ದರದಲ್ಲಿ ಪ್ರಯಾಣ ಗುರುವಾರದಿಂದ ಆರಂಭಗೊಳ್ಳಲಿದೆ. ಮಧ್ಯಾಹ್ನ 3.10 ಕ್ಕೆ ಬೆಂಗಳೂರಿನಿಂದ ಗೋವಾಕ್ಕೆ ವಿಮಾನ ಹಾರಲಿದ್ದು, ಮಲೇಷಿಯಾದ ಟೋನಿ ಫರ್ನಾಂಡೀಸ್, ಟಾಟಾಸನ್ಸ್ ಸಹಯೋಗದಲ್ಲಿ ಏರ್ ಏಷ್ಯಾ ಸ್ಥಾಪನೆಯಾಗಿದೆ.

10.00:ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಪಾಕಿಸ್ತಾನದ ಉಗ್ರ ಹಫೀಜ್ ಸಯೀದ್ ಇದ್ದಂತೆ ಎಂದು ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಹೇಳಿದ್ದಾರೆ.
9.30: ಸುಮಾರು 2.65 ಕೋಟಿ ರು 108 ಆಂಬ್ಯುಲೆನ್ಸ್ ಹಗರಣದಲ್ಲಿ ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
9.15: ಪಂಢರಾಪುರದಲ್ಲಿ ಬ್ರಾಹ್ಮಣೇತರ ಅರ್ಚಕರು ಹಾಗೂ ಮಹಿಳಾ ಅರ್ಚಕರ ನೇಮಕಾತಿ ಸ್ಥಗಿತಗೊಳಿಸಲಾಗಿದೆ.
9.00: ಬ್ರೆಜಿಲ್ಲಿನಲ್ಲಿ ಫೀಫಾ ವಿಶ್ವಕಪ್ 2014ಕ್ಕೆ ಇಂದು ಮಧ್ಯರಾತ್ರಿ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಬ್ರೆಜಿಲ್ ಹಾಗೂ ಕ್ರೊವೇಷಿಯಾ ಕಾದಾಡಲಿವೆ.












Click it and Unblock the Notifications