ಜೂ.14: ದೇಶ, ವಿದೇಶಗಳ ಹೆಡ್‌ಲೈನ್ ಸುದ್ದಿಗಳು
ಬೆಂಗಳೂರು, ಜೂ.14: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
1.40 : ಪುಣೆ ಟೆಕ್ಕಿ ಹತ್ಯೆ ಹಿನ್ನಲೆ - ಹಿಂದೂ ರಾಷ್ಟ್ರ ಸೇನಾ ಸಂಘಟನೆ ಮೇಲೆ ನಿಷೇಧ ಹೇರಬೇಕೆಂಬ ಒತ್ತಾಯ- ಸಂಘಟನೆಯ ಕಾರ್ಯಚಟುವಟಿಕೆ ಪರಿಶೀಲನೆ ಮುಂದಾದ ಮಹಾರಾಷ್ಟ್ರ ಸರ್ಕಾರ.
12.35: ಬಿಹಾರ ರಾಜ್ಯಸಭಾ ಚುನಾವಣೆ - ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಜೊತೆ ಮಾತುಕತೆ.
11.24: ದೆಹಲಿಯಲ್ಲಿ ವಿದ್ಯುತ್ ಕಡಿತ ಮತ್ತು ನೀರಿನ ಅಭಾವ ಹಿನ್ನಲೆ - ಕಾಂಗ್ರೆಸ್‌ನಿಂದ ಮುಂದುವರಿದ ಪ್ರತಿಭಟನೆ
10.54 : ಪಾಕಿಸ್ತಾನದಲ್ಲಿ ವಾಯುವ್ಯ ಭಾಗದಲ್ಲಿ ಲಘು ಭೂಕಂಪ - ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲು - ಯಾವುದೇ ಸಾವು ನೋವಿನ ವರದಿ ಪ್ರಕಟವಾಗಿಲ್ಲ
10.27 : ಪ್ರಧಾನಿ ನರೇಂದ್ರ ಮೋದಿಯವರಿಂದ ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ವೀಕ್ಷಣೆ.
ON BOARD: PM Narendra Modi boards INS Vikramaditya. pic.twitter.com/17KjWZPb17
— ANI (@ANI_news) June 14, 2014 10.19 : ಕಿಂಗ್ಸ್ ಇಲೆವೆನ್ ಮಾಲಕಿ ಚಿತ್ರನಟಿ ಪ್ರೀತಿ ಜಿಂಟಾರಿಂದ ಮಾಜಿ ಪ್ರಿಯಕರ ,ಉದ್ಯಮಿ ನೆಸ್ ವಾಡಿಯ ವಿರುದ್ಧ ಲೈಂಗಿಕ ಕಿರುಕುಳ ದೂರು - ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದಿಂದ ತನಿಖೆ ನಡೆಸಲು ಒತ್ತಾಯ.[ಲೈಂಗಿಕ ಕಿರುಕುಳ ದೂರು ದಾಖಲಿಸಿದ ಪ್ರೀತಿ ಜಿಂಟಾ]
8.40 : ಉಗ್ರರ ಉಪಟಳ ಹಿನ್ನಲೆ - ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿರುವ ರಕ್ಷಣಾ ಸಚಿವ ಅರುಣ್ ಜೇಟ್ಲಿ - ಗಡಿ ಸುರಕ್ಷತೆಯನ್ನು ವೀಕ್ಷಿಸಲಿರುವ ಅರುಣ್ ಜೇಟ್ಲಿ
8.15 : ಹಿಮಾಚಲಪ್ರದೇಶದ ಮಂಡಿಯಲ್ಲಿ ಕೊಚ್ಚಿಹೋದ ವಿದ್ಯಾರ್ಥಿಗಳು - ನಾಪತ್ತೆಯಾದ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚುವಲ್ಲಿ ಅನ್‌ನೇಮ್ಡ್ ಏರಿಯಲ್ ವೆಹಿಕಲ್ಸ್(ಯುಎವಿ) ವಿಫಲ - ಇಂದು ಹೈಟೆಕ್ ತಂತ್ರಜ್ಞಾನ ಬಳಸಿ ಶೋಧ ಕಾರ್ಯ ನಡೆಸಲಿರುವ ರಕ್ಷಣಾ ಪಡೆ
8.00 : ಭಾರತೀಯ ಸಂಜಾತ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಮನಃಶಾಸ್ತ್ರಜ್ಞ ಪ್ರೊ. ತೇಜಿಂದರ್ ವಿದ್ರೆ ಅವರ ವಿಜ್ಞಾನ ಕ್ಷೇತ್ರದ ಸಾಧನೆಗೆ ಇಂಗ್ಲೆಂಡ್ ರಾಣಿ ಎಲಿಜಬೆತ್‌ರಿಂದ ಸನ್ಮಾನ













Click it and Unblock the Notifications