ನಿಮಗ್ಗೊತ್ತಾ? ದಾವೂದ್ ಹಸ್ತಾಂತರಕ್ಕೆ ಭಾರತ, ಪಾಕ್ ಗೆ ಕೇಳೇ ಇಲ್ಲ!

Posted By:
Subscribe to Oneindia Kannada

ನವದೆಹಲಿ, ಮೇ 15: ಆತ ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾದ 'ದ ಮೋಸ್ಟ್ ವಾಂಟೆಡ್ ಕ್ರಿಮಿನಲ್'. ಆತನ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಆತ ಭಾರತೀಯ ಕಾನೂನಿಗೆ ಎಷ್ಟರ ಮಟ್ಟಿಗೆ ಬೇಕಾದ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ಆದರೆ, ಅಚ್ಚರಿಯ ವಿಚಾರವೇನು ಗೊತ್ತಾ? ಇಂಥ ಒಬ್ಬ ಪಾತಕಿಯು ಪಾಕಿಸ್ತಾನದಲ್ಲಿ ಅಡಗಿದ್ದಾನೆಂದು ಗೊತ್ತಾಗಿದ್ದರೂ, ಆತನನ್ನು ತನಗೆ ಹಸ್ತಾಂತರಿಸಿ ಎಂದು ಭಾರತ ಸರ್ಕಾರ ಈವರೆಗೆ ಪಾಕಿಸ್ತಾನವನ್ನು ಕೇಳಿಲ್ಲವಂತೆ!

India has not requested Pak to extradition so far: MEA

ಆರ್ ಟಿಐ ಅರ್ಜಿಯೊಂದಕ್ಕೆ ಕೇಂದ್ರ ವಿದೇಶಾಂಗ ಇಲಾಖೆ ನೀಡಿರುವ ಉತ್ತರದಲ್ಲಿ ಇದು ಬಹಿರಂಗಗೊಂಡಿದೆ.

ಅರ್ಜಿಗೆ ಉತ್ತರಿಸಿರುವ ವಿದೇಶಾಂಗ ಇಲಾಖೆ, ದಾವೂದ್ ಭಾಗಿಯಾಗಿರುವ ಪ್ರಕರಣಗಳ ತನಿಖೆ ನಡೆಸುತ್ತಿರುವ ಭಾರತೀಯ ತನಿಖಾ ಸಂಸ್ಥೆಗಳು ತನಗೆ ದಾವೂದ್ ನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಪಾಕಿಸ್ತಾನಕ್ಕೆ ಮನವಿ ಸಲ್ಲಿಸಬೇಕೆಂದು ಕೋರಿಲ್ಲ ಎಂದು ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There has been no extradition request received by the Ministry of External Affairs where Dawood Ibrahim or Hafiz Saeed are concerned. The investigation agencies have not put forth any such request, the MEA has said while replying to an RTI query.
Please Wait while comments are loading...